
CHITRADURGA NEWS | 15 SEPTEMBER 2025
ಹೊಸದುರ್ಗ: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಗಣತಿಯಲ್ಲಿ ಉಪಜಾತಿ ಕಾಲಂ ನಲ್ಲಿ ಕುಂಚಿಟಿಗ ಎಂದು ಬರೆಯಿಸುವಂತೆ ಮುಖಂಡ ಎಸ್.ಲಿಂಗಮೂರ್ತಿ ತಿಳಿಸಿದರು.
ಇದನ್ನೂ ಓದಿ: ದಿನ ಭವಿಷ್ಯ | ಸೆಪ್ಟೆಂಬರ್ 15 | ಉದ್ಯೋಗಿಗಳಿಗೆ ಬಡ್ತಿ, ಕೈಗೆತ್ತಿಕೊಂಡ ಕೆಲಸಗಳಲ್ಲಿ ಅಡೆತಡೆಗಳು, ಮಾನಸಿಕ ಅಶಾಂತಿ

ಪಟ್ಟಣದ ಕುಂಚಿಟಿಗ ಮಠದಲ್ಲಿ ನಡೆದ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಲಿಂಗಾಯತ ಹಾಗೂ ಉಪಜಾತಿ ಕಾಲಂ ನಲ್ಲಿ ಕುಂಚಿಟಿಗ ಎಂದು ನಮೂದಿಸಬೇಕು ಎಂದರು.
ಈ ಹಿಂದೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಆಯೋಗ ನಡೆಸಿದ ಗಣತಿ ವೇಳೆ ಸಮಾಜದ ಬಂದುಗಳು ಗೊಂದಲ ಮಾಡಿಕೊಂಡಿದ್ದರು. ಆದರೆ, ಈ ಬಾರಿ ಸ್ಪಷ್ಟತೆ ಇದ್ದು, ಉಪಜಾತಿ ಕಾಲಂನಲ್ಲಿ ಕುಂಚಿಟಿಗ ಎಂದು ಬರೆಯಿಸುವಂತೆ ಮನವಿ ಮಾಡಿದರು.
ರಾಜ್ಯ ಸರ್ಕಾರ ನಡೆಸುವ ಈ ಗಣತಿ ಅಂಕಿ ಅಂಶಗಳನ್ನು ತೆಗೆದುಕೊಳ್ಳಲು ಅನುಕೂಲವಾಗಿದೆ. ರಾಜ್ಯದಲ್ಲಿ ಕುಂಚಿಟಿಗ ಸಂಖ್ಯೆ ಎಷ್ಟಿದೆ ಎನ್ನುವುದು ಗೊತ್ತಾಗಲಿದೆ. ಹೀಗಾಗಿ ಧರ್ಮ ಹಿಂದು, ಜಾತಿ ಲಿಂಗಾಯತ, ಉಪಜಾತಿ ಕುಂಚಿಟಿಗ ಎನ್ನುವುದು ನೆನಪಿರಲಿ ಎಂದು ಸ್ಷಷ್ಟಪಡಿಸಿದರು.
ಕುಂಚಿಟಿಗ ಸಮಾಜ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿದೆ. ಕೆಲವರು ಕುಂಚಿಟಿಗ ಒಕ್ಕಲಿಗ ಎಂದು ಗುರುತಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಕುಂಚಿಟಿಗ ಕಾಮಾಟಿ ಎಂದು ಗುರುತಿಸಿಕೊಂಡಿದ್ದಾರೆ. ಹೊಸದುರ್ಗ, ಹೊಳಲ್ಕೆರೆ, ಹೊನ್ನಾಳಿ, ಅರಸಿಕೆರೆ ಸೇರಿದಂತೆ ಐದಾರು ತಾಲೂಕುಗಳಲ್ಲಿ ಕುಂಚಿಟಿಗ ಲಿಂಗಾಯತ ಎಂದು ದಾಖಲಾಗಿದ್ದಾರೆ ಎಂದು ವಿವರಿಸಿದರು.
ಕುಂಚಿಟಿಗ ಸಮಾಜದ ಅಧ್ಯಕ್ಷ ಕಲ್ಕೆರೆ ಶೇಖರಣ್ಣ ಮಾತನಾಡಿ, ಸೆ.೨೨ ರಿಂದ ಜಾತಿ ಗಣತಿ ಪ್ರಾರಂಭವಾಗಲಿದೆ. ಅಲ್ಲಿಂದ ೧೫ ದಿನಗಳ ಕಾಲ ಗಣತಿ ನಡೆಯಲಿದ್ದು, ಸಮಾಜದವರು ಇರುವ ಎಲ್ಲಾ ಗ್ರಾಮಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಕರಪತ್ರ ತಲುಪಿಸಲಾಗುವುದು ಎಂದರು.
ಇದನ್ನೂ ಓದಿ: ಗಂಟಲು ಸಮಸ್ಯೆಗಳಿಗೆ ಕಪ್ಪು ಏಲಕ್ಕಿ ನೀರು ಪ್ರಯೋಜನಕಾರಿ
ನಮ್ಮದು ಸಂಘಟಿತ ಸಮುದಾಯವಾಗಿಲ್ಲ. ಹೀಗಾಗಿ ಜಾಗೃತಿ ಮೂಡಿಸಬೇಕಾಗಿದೆ. ಮುಂದೆ ಸರ್ಕಾರದ ಸೌಲಭ್ಯ ಇನ್ನಿತರೆ ಕಾರಣಗಳಿಗೆ ಉಪಜಾತಿ ಅನಿವಾರ್ಯವಾಗಲಿದೆ. ಹೀಗಾಗಿ ಉಪಜಾತಿ ಕಾಲಂ ನಲ್ಲಿ ಕುಂಚಿಟಿಗ ಎಂದು ನಮೂದಿಸಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಮಾಜದ ಮುಖಂಡರಾದ ತಂಡಗ ಕಲ್ಲೇಶಣ್ಣ, ಕೋಡಿಹಳ್ಳಿ ಧರಣಪ್ಪ, ಲೋಕೇಶ್, ತಾಪಂ ಮಾಜಿ ಸದಸ್ಯ ಶಿವಮೂರ್ತಪ್ಪ, ನಿವೃತ್ತ ಶಿಕ್ಷಕರಾದ ಚನ್ನಬಸಪ್ಪ, ಈಶ್ವರಪ್ಪ,ಹನುಮಂತಪ್ಪ, ಶಿಕ್ಷಕ ಅಶೋಕ್, ಜ್ಞಾನೇಶ್, ದೇವರಾಜ್ ಮತ್ತಿತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
