
CHITRADURGA NEWS | 07 SEPTEMBER 2025
ಚಿತ್ರದುರ್ಗ: ರುಡ್‌ಸೆಟ್ ಸಂಸ್ಥೆ ವತಿಯಿಂದ 30 ದಿನಗಳ ಗ್ರಾಮೀಣ ಕಟ್ಟಡ ಕುಶಲಕರ್ಮಿ (ಗಾರೆ) ಹಾಗೂ ಕಾಂಕ್ರಿಟ್ ಕೆಲಸಗಾರರ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಜಿಲ್ಲಾಸ್ಪತ್ರೆಗೆ ಸಚಿವ ಡಿ.ಸುಧಾಕರ್ ದಿಢೀರ್ ಭೇಟಿ | ಸಿಬ್ಬಂದಿಗಳ ಸಾಮೂಹಿಕ ರಜೆ |ಕಠಿಣ ಕ್ರಮ
ಸೆ.17 ರಿಂದ ಅಕ್ಟೋಬರ್ 10 ವರೆಗೆ ತರಬೇತಿ ನಡೆಯಲಿದೆ. ತರಬೇತಿ ಉಚಿತವಾಗಿದ್ದು, ಊಟ ಮತ್ತು ವಸತಿ ಸೌಲಭ್ಯ ಲಭ್ಯವಿರುತ್ತದೆ. 19 ರಿಂದ 45 ವರ್ಷದ ಒಳಗಿನ, ಕನ್ನಡ ಭಾಷೆ ಜ್ಞಾನವುಳ್ಳ ಹಾಗೂ ಈಗಾಗಲೇ ಗಾರೆ ಹಾಗೂ ಕಾಂಟ್ರಿಕ್ ಕೆಲಸದಲ್ಲಿ ಪ್ರಾಥಮಿಕ ಜ್ಞಾನ ಹೊಂದಿದ್ದು, ಉದ್ಯೋಗದಲ್ಲಿ ಆಸಕ್ತಿ ಇರುವವರಿಗೆ ಆದ್ಯತೆ ನೀಡಲಾಗುವುದು.
ಆಸಕ್ತ ನಿರುದ್ಯೋಗಿ ಯುವಕ ಯುವತಿಯರು ಮೊಬೈಲ್ ನಂಬರ್‌ವುಳ್ಳ ಸ್ವ ವಿಳಾಸ ಅರ್ಜಿಯೊಂದಿಗೆ ಆಧಾರ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜರಾಕ್ಸ್ ಪ್ರತಿಗಳೊಂದಿಗೆ ಸೆ.15 ರಂದು ಚಿತ್ರದುರ್ಗ ಕೆಳಗೋಟೆ ಬ್ಯಾಂಕ್ ಕಾಲೋನಿಯಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು.
ಇದನ್ನೂ ಓದಿ: ಅಲ್ಪಸಂಖ್ಯಾತ ವರ್ಗದ ಕಾನೂನು ಪದವೀಧರರಿಗೆ ಶಿಷ್ಯವೇತನ | ಅರ್ಜಿ ಆಹ್ವಾನ
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ 8618282445, 9481778047, 9019299901, ಅಥವಾ 8660627785 ಗೆ ಕರೆ ಮಾಡಬಹುದು ಎಂದು ರುಡ್‌ಸೆಟ್ ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
