CHITRADURGA NEWS | 04 SEPTEMBER 2025
ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಮದ್ದನಕುಂಟೆ ಗ್ರಾಮದಲ್ಲಿ ಅಪರೂಪದ ಸುಮಾರು ಎರಡು ಸಾವಿರ ವರ್ಷಗಳ ಹಿಂದಿನ ಮೆಗಲಾಥಿಕ್ ಸಂಸ್ಕೃತಿಯ ಕಾಲದ ಬೃಹತ್ ಶಿಲಾ ಸಮಾಧಿ ಪತ್ತೆಯಾಗಿದೆ.
ಇದನ್ನೂ ಓದಿ: ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪಟ್ಟಿ ಪ್ರಕಟ | 17 ಶಿಕ್ಷಕರು ಆಯ್ಕೆ
ಉಪನ್ಯಾಸಕ ಡಾ.ಮಹೇಶ್ ಕುಂಚಿಗನಾಳ್ ಅವರ ತಂಡವು ಇತ್ತೀಚಿಗೆ ಮದ್ದನಕುಂಟೆ ಗ್ರಾಮದಲ್ಲಿ ಕ್ಷೇತ್ರಕಾರ್ಯ ಮಾಡುವಾಗ ಈ ಶಿಲಾಸಮಾಧಿ ಪತ್ತೆಯಾಗಿದೆ.
ಸಮಾಧಿಯನ್ನು ಸ್ಥಳೀಯವಾಗಿ ಸಿಗುವ ವೃತ್ತಕಾರದ ಕಾಡುಗಲ್ಲುಗಳನ್ನು ಬಳಸಿ ನಿರ್ಮಿಸಿದ್ದು, ಒಂದು ಪಾರ್ಶ್ವದಲ್ಲಿ ಕಾಡುಗಲ್ಲಿನಿಂದ ಸುಮಾರು 5-6 ಅಡಿ ಎತ್ತರದ ನಿಲುಸುಗಲ್ಲು ನಿಲ್ಲಿಸಲಾಗಿದೆ. ಸಮಾಧಿಯ ಸುಮಾರು 15 ಅಡಿ ವ್ಯಾಸ ಹೊಂದಿದೆ.
ಕಲ್ಲು ಕತ್ತರಿಸಲು ಪಳಗಿದ್ದ ಕಬ್ಬಿಣ ಯುಗದ ಕಾಲದ ಮಾನವರು ನಿರ್ಮಿಸಿದ ಡಾಲ್ಮನ್ ಮಾದರಿಯ ಸಿಸ್ಟ್ ಸಮಾಧಿಯಾಗಿದೆ. ಇಂತಹ ಸಮಾಧಿಯ ಒಳಗಡೆ ಮಾನವನ ಅಸ್ಥಿಯ ಕುಡಿಕೆ, ಅವರು ಬಳಸುತ್ತಿದ್ದ ವಸ್ತುಗಳ ಕುರುಹುಗಳ ಸಿಕ್ಕಿರುವುದನ್ನು ಉತ್ಖನನಕಾರರು ಗುರುತಿಸಿದ್ದಾರೆ ಡಾ.ಮಹೇಶ್ ಅಭಿಪ್ರಾಯಪಟ್ಟಿದ್ದಾರೆ.
ಸಮೀಪದಲ್ಲಿ ಸುಮಾರು 12ನೇ ಶತಮಾನದ ಕಾಳಿಯ ಗುಡಿ ಇದೆ. ಧಾರ್ಮಿಕ ಕೇಂದ್ರದ ಬಳಿ ಈ ಸಮಾಧಿ ಇರುವುದು ಧಾರ್ಮಿಕ ದೃಷ್ಠಿಯಿಂದ ವಿಶೇಷವಾ ಎಂದಿದ್ದಾರೆ. ಸಮೀಪದಲ್ಲಿ ವಿಜಯನಗರ ಕಾಲದ ಹನುಮನ ಶಿಲಾಮೂರ್ತಿ ಹಾಗೂ ಎರಡು ವೀರಗಲ್ಲುಗಳಿವೆ. ಈ ಜಾಗವನ್ನು ಹಾಳೂರು ಎಂದು ಕರೆಯುತ್ತಾರೆ.
ಇದನ್ನೂ ಓದಿ: ಬೆಸ್ಕಾಂ ಇಂಜಿನಿಯರ್ ತಿಮ್ಮರಾಯಪ್ಪ ಲೋಕಾಯುಕ್ತ ಬಲೆಗೆ
ಈಗ ಬೇಚರಾಕ ಗ್ರಾಮವಾಗಿದೆ. ನಿಲುಸುಗಲ್ಲುಗಳ ಅಂತ್ಯಕ್ರಿಯೆಯನ್ನು ಮಾಡಿರುವುದನ್ನು ಗುರುತಿಸಲು ನಿಲ್ಲಿಸಲಾಗಿರುತ್ತದೆ. ಕಲ್ಲಿನ ಮುಚ್ಚಳಗಳನ್ನು ನಿಧಿಗಳ್ಳರು ಹೊರತೆಗೆದಿದ್ದಾರೆ. ಎತ್ತರ, ಗಾತ್ರ ಸಮಾಧಿಯಿಂದ ಮತ್ತೊಂದು ಸಮಾಧಿಗೆ ಭಿನ್ನತೆ ಹೊಂದಿರುತ್ತವೆ ಎಂದು ಡಾ.ಮಹೇಶ್ ರವರು ತಿಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

