CHITRADURGA NEWS | 12 AUGUST 2025
ಚಿತ್ರದುರ್ಗ: ನಗರದ ಆನೇ ಬಾಗಿಲ ಬಳಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿ ವತಿಯಿಂದ 354ನೇ ವರ್ಷದ ಆರಾಧನಾ ಪಂಚರಾತ್ರೋತ್ಸವವನ್ನು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಳೆದ ಅ.10 ರಿಂದ 12ರವರೆಗೆ ನಡೆಸಲಾಯಿತು.

ಇದನ್ನೂ ಓದಿ: ಜಿಲ್ಲಾ ಮಟ್ಟದ ಪ್ರಬಂಧ, ಚರ್ಚಾ ಸ್ಪರ್ಧೆ | ಪ್ರೌಢಶಾಲೆ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅಹ್ವಾನ
ಈ ಮೂರು ದಿನದಲ್ಲಿ ಗುರುಸಾರ್ವಭೌಮರ ಪೂರ್ವಾರಾಧನೆ ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ರಾಯರ ಆರಾಧನಾ ನಡೆಯಿತು.
ಈ ದಿನಗಳಲ್ಲಿ ಪ್ರತಿದಿನ ಸುಪ್ರಭಾತ, ನಿರ್ಮಾಲ್ಯ, ಕ್ಷೀರಾಅಭಿಷೇಕ, ಫಲ ಪಂಚಾಮೃತ, ಅಭಿಷೇಕ ಪಾದಪೂಜೆ ಕನಕಾಭಿಷೇಕ, ಮಹಾಪೂಜೆ, ಸರ್ವ ಸೇವಾ ಅಲಂಕಾರ ಸೇವೆ, ಮಹಾ ನೈವೇದ್ಯ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು.
ಆ.12 ರ ಇಂದು ಉತ್ತರಾರಾದನೆ ಪ್ರಯುಕ್ತ ನಗರದ ರಾಜ ಬೀದಿಗಳಲ್ಲಿ ವೇದ ಘೋಷದೊಡನೆ ಪಲ್ಲಕ್ಕಿ ಉತ್ಸವ ಹಾಗೂ ಮಠದಲ್ಲಿ ರಥೋತ್ಸವ ಸೇವೆ ನಡೆಯಿತು.
ಇದೇ ಸಂದರ್ಭದಲ್ಲಿ ವಿದ್ವಾನ್ ಶ್ರೀ ರಾಘವಾಚಾರ್ಯ ಮಿಟ್ಟಿಯವರಿಂದ ಶ್ರೀ ರಾಘವೇಂದ್ರ ವಿಜಯ ಪ್ರವಚನ, ಸುಜೀತ್ ಕುಲಕರ್ಣಿ, ರಜತ್ ಕುಲಕರ್ಣಿ, ಕಿತ್ತೂರು ದಾಸವಾಣಿ, ಶ್ರೀ ಅಂಜನಾ ನೃತ್ಯ ಕಲಾ ಕೇಂದ್ರ, ವಿದೂಷಿ ನಂದಿನಿ ಶಿವಪ್ರಕಾಶ್ ಹಾಗೂ ಶಿಷ್ಯವೃಂದ ರವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ: ಮಾಜಿ ಸಿಎಂ ದೇವರಾಜ ಅರಸು ಜಯಂತಿ | ಅರ್ಥಪೂರ್ಣ ಆಚರಣೆಗೆ ಡಿಸಿ ಸೂಚನೆ
ನಾಳೆ ಶ್ರೀ ಸುಜ್ಞಾನೇಂದ್ರ ತೀರ್ಥರ ಆರಾಧನೆ, ಪವಮಾನ ಹೋಮ, ಸರ್ವ ಸಮರ್ಪಣೋತ್ಸವ ನ್ಯೂ ಆರಾಧನಾ ನಡೆಯಲಿದ್ದು. ಸಂಜೆ 6 ರಿಂದ 8 ರವರೆಗೆ ಸಿಂಧೂರ ಮತ್ತು ಸಹೋದರಿಯವರಿಂದ ಭರತನಾಟ್ಯ ಮತ್ತು ಕೂಚಿಪುಡಿ ಕಾರ್ಯಕ್ರಮ ನಡೆಯಲಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
