ಹೊಳಲ್ಕೆರೆ
ಶಿವಗಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ | ಗಿರೀಶ್ ಮಾಧುರಿ ನೇತೃತ್ವದ ಗುಂಪಿಗೆ ಜಯ
CHITRADURGA NEWS | 07 JANUARY 2025
ಹೊಳಲ್ಕೆರೆ: ತಾಲೂಕಿನ ಶಿವಗಂಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಸ್.ಆರ್.ಗಿರೀಶ್ ಮಾಧುರಿ ಗುಂಪಿಗೆ ಭರ್ಜರಿ ಜಯ ದೊರಕಿದೆ.
ಕ್ಲಿಕ್ ಮಾಡಿ ಓದಿ: ಮುಖ್ಯ ರಸ್ತೆ ಅಗಲೀಕರಣ ಫಿಕ್ಸ್ | 15 ದಿನಗಳಲ್ಲಿ ದಾಖಲೆ ಸಂಗ್ರಹಿಸಿ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
ಸಾಲಗಾರರಲ್ಲದ ಕ್ಷೇತ್ರದಿಂದ ಎಸ್.ಆರ್.ಗಿರೀಶ್-670, ಹೆಚ್.ಕುಬೇರಪ್ಪ-471, ಎ.ಎನ್.ಮೌನೇಶ್-466, ವೀರಭದ್ರಪ್ಪ ಯು.ಎಂ.-446, ಜಿ.ಶಶಿಧರ-481, ಮಹದೇವಪ್ಪ-533 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಮಹಿಳಾ ಮೀಸಲು ಕ್ಷೇತ್ರದಿಂದ ಮಮತ-526, ಸುಜಾತ ವಿ-507 ಮತಗಳನ್ನು ಪಡೆದಿದ್ದಾರೆ.
ಎಸ್.ಟಿ.ಮೀಸಲು ಕ್ಷೇತ್ರದಿಂದ ತಿಪ್ಪೇರುದ್ರಪ್ಪ ಡಿ-474, ಎಸ್ಸಿ ಮೀಸಲು ಕ್ಷೇತ್ರದಿಂದ ಮಹದೇವಪ್ಪ ಎಸ್-533 ಮತಗಳನ್ನು ಗಿಟ್ಟಿಸಿಕೊಂಡು ಜಯಶಾಲಿಗಳಾಗಿದ್ದಾರೆ.
ಕ್ಲಿಕ್ ಮಾಡಿ ಓದಿ: ವಿವಿ ಸಾಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗೀನ ಅರ್ಪಣೆ | ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ
ಬಿ.ಸಿ.ಎಂ.ಬಿ. ಯಿಂದ ಯೋಗೇಶ್ ಹೆಚ್, ಬಿ.ಸಿ.ಎಂ.ಎ. ಯಿಂದ ಆರ್.ಕರಿಯಪ್ಪ, ಸಾಲಗಾರರಲ್ಲದ ಕ್ಷೇತ್ರದಿಂದ ಎಂ.ಬಸವರಾಜಪ್ಪ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರತಿಷ್ಠಿತ ಚುನಾವಣೆಯಲ್ಲಿ ಒಟ್ಟು 1001 ಮತಗಳಿದ್ದು, 930 ಮತಗಳು ಚಲಾವಣೆಯಾಗಿವೆ.