CHITRADURGA NEWS | 11 MARCH 2026
ಚಿತ್ರದುರ್ಗ: ಭಾರತೀಯ ಸಮಾಜದಲ್ಲಿ ಹೆಣ್ಣಿಗೆ ವಿಶಿಷ್ಟ ಸ್ಥಾನಮಾನ ನೀಡಲಾಗಿದೆ. ಹೆಣ್ಣು ಅಪಾರ ಶಕ್ತಿ ಮತ್ತು ಸಹನೆಯ ಸಂಕೇತ ಎಂದು ಎಸ್‌ಆರ್‌ಎಸ್ ಕಾಲೇಜು ಉಪನ್ಯಾಸಕಿ ರೂಪಾ ತಿಳಿಸಿದರು.
ಇದನ್ನೂ ಓದಿ: ರಾಜ್ಯಾದ್ಯಂತ ಶಿವಶಿಂಪಿ ಸಮಾಜದ ಸಂಘಟನೆ | ಮಂದಾರ ಮಠದ ಮಹಾಂತ ದೇವರು
ನಗರದ ಎಸ್ ಆರ್ ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನವಿಡೀ ಹೆಣ್ಣು ವಿವಿಧ ಹಂತಗಳಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಾಳೆ. ಹೀಗಾಗಿ ಲಿಂಗಸಮಾನತೆ ತರುವಲ್ಲಿ ಸಾಮಾಜಿಕ ಆರ್ಥಿಕ ರಾಜಕೀಯ ಶೈಕ್ಷಣಿಕ ಕ್ಷೇತ್ರಗಳಲ್ಲಿ ಹೆಣ್ಣಿನ ಭಾಗವಹಿಸುವಿಕೆ ಮತ್ತು ನಿರ್ಧಾರ ಕೈಗೊಳ್ಳುವಿಕೆಯ ಮಹತ್ವದ್ದಾಗಿದೆ ಎಂದರು.
ಮಹಿಳಾ ಸಬಲೀಕರಣದಲ್ಲಿ ಹೆಣ್ಣಿನ ಪಾತ್ರ ಮತ್ತು ಕಾರ್ಯಗಳ ಕುರಿತು ತಿಳಿಸಿದ ಅವರು, ಸಾಂಸ್ಕೃತಿಕವಾಗಿ ಹೆಣ್ಣಿನ ಮೇಲಿರುವ ಭಾವನಾತ್ಮಕತೆಯ ಆಯಾಮಗಳಲ್ಲಿ ಬದಲಾಗಬೇಕಿರುವ ದೃಷ್ಠಿಕೋನಗಳನ್ನು ವಿವರಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 10 | ಹತ್ತಿ ರೇಟ್ ಎಷ್ಟಿದೆ?
ಉಪನ್ಯಾಸಕಿ ವರ್ಷಾ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಭಾರತದ ಅಬಿವೃದ್ದಿ ಸೂಚ್ಯಂಕದಲ್ಲಿ ಗಂಡು ಮತ್ತು ಹೆಣ್ಣಿನ ಸಾಧನೆಗಳು ಸಮಾನವಾಗಿ ಗೌರವಿಸಲ್ಪಡಬೇಕು ಎಂದು ತಿಳಿಸಿದರು.
ಎಸ್.ಆರ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರವಿ ಟಿ.ಎಸ್ ಮಾತನಾಡಿ, ಭಾರತದಲ್ಲಿ ಮಹಿಳೆಯರು ಮೊದಲು ಅಜ್ಞಾನದ ಅಂಧಕಾರ ಮತ್ತು ಮೂಢನಂಬಿಕೆಗಳಿಂದ ಹೊರಬಂದು ದೇಶಾಭಿವೃಧ್ದಿಯಲ್ಲಿ ಮುಖ್ಯ ಪಾಲುದಾರರಾಗಬೇಕಾದರೆ ಮಹಿಳೆಯರಿಗೆ ಸಾಂವಿಧಾನಿಕ ಅವಾಕಾಶಗಳ ಬಳಕೆ ಮತ್ತು ಕಾನೂನಿನ ಅರಿವು ಅತ್ಯಗತ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಸನ್ಯಾಸಕಿ ಆರ್.ಮಮತಾ ಮಾತನಾಡಿ, ಮಹಿಳೆ ಅಬಲೆಯೆಲ್ಲ ಸಬಲೆ. ಅವಳಿಗೆ ಸ್ವಾವಲಂಬಿತನ ಹುಟ್ಟಿನಿಂದಲೇ ಬರುವಂಥದ್ದು, ತನ್ನಲ್ಲಿರುವ ಆಂತರಿಕ ಶಕ್ತಿಯನ್ನು ಒಟ್ಟುಗೂಡಿಸಿ ಆತ್ಮವಿಶ್ವಾಸದಿಂದ ಮುನ್ನಡೆದರೆ ಮಾತ್ರ ಪ್ರಗತಿ ಸಾಧ್ಯ ಎಂದರು.
ಇದನ್ನೂ ಓದಿ: ಅಡಿಕೆ ಧಾರಣೆ | 10 ಮಾರ್ಚ್ | ರಾಜ್ಯದ ಪ್ರಮುಖ ಮಾರುಕಟ್ಟೆಗಳ ರೇಟ್
ಪ್ರಶಿಕ್ಷಣಾರ್ಥಿ ಕಾವ್ಯ ಸ್ವಾಗತಿಸಿದರು. ಅಂಜಲಿ ವಂದಿಸಿದರು. ವಂದನಾ ನಿರೂಪಿಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
