
CHITRADURGA NEWS | 11 MARCH 2026
ಚಿತ್ರದುರ್ಗ: ಒಳಮೀಸಲಾತಿ ಇಲ್ಲದೆ 56432 ಹುದ್ದೆಗಳನ್ನು ತುಂಬಲು ಹೊರಡಿಸಿರುವ ನೋಟಿಫಿಕೇಷನ್ ವಾಪಸ್ಸು ಪಡೆದು, ಮಾದಿಗರಿಗೆ ಶೇ.6 ರಷ್ಟು ಒಳಮೀಸಲಾತಿ ನೀಡಿ, ಒಳಮೀಸಲಾತಿ ಅನ್ವಯವೇ 56432 ಹುದ್ದೆಗಳನ್ನು ತುಂಬಲು ಮತ್ತೆ ನೋಟಿಫೀಕೇಷನ್ ಹೊರಡಿಸುವಂತೆ ಒತ್ತಾಯಿಸಿ ಮಾಜಿ ಸಚಿವ ಹೆಚ್.ಅಂಜನೇಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಹೂವಿನ ಅಳತೆಯಲ್ಲಿ ರೈತರಿಗೆ ಮೋಸ | ರೈತರಿಂದ ಪ್ರತಿಭಟನೆ
ರಾಜ್ಯದಲ್ಲಿ ಮಾದಿಗರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಸಿಗುತ್ತಿಲ್ಲ, ಒಳಮೀಸಲಾತಿಗಾಗಿ 35 ವರ್ಷಗಳಿಂದ ಹೋರಾಟ ಮಾಡಿದ್ದೇವೆ. ನಮ್ಮ ಬೇಡಿಕೆಗೆ ಸ್ಪಂದಿಸಿ ಒಳಮೀಸಲಾತಿ ಹಂಚಿಕೆ ಮಾಡಲಾಗಿದೆ. ಆಂಧ್ರ, ತೆಲಂಗಾಣದಲ್ಲಿ ಈಗಾಗಲೇ ಒಳಮೀಸಲಾತಿ ಅನುಷ್ಠಾನಗೊಂಡಿದೆ. ಅಲ್ಲಿ ಯಾವುದೇ ಗೊಂದಲ ಇಲ್ಲದೆ ಪರಿಶಿಷ್ಟ ಜಾತಿಯವರೆಲ್ಲರೂ ಅದನ್ನು ಸ್ವಾಗತಿಸಿ, ಮೀಸಲಾತಿ ಹಂಚಿಕೊಂಡು ಸೌಲಭ್ಯ ಪಡೆಯುತ್ತಿದ್ದಾರೆ. ಇಂತಹ ವಾತಾವರಣ ರಾಜ್ಯದಲ್ಲಿ ನಿರ್ಮಾಣ ಮಾಡಬೇಕಿದೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಹೆಚ್ಚು ಮೀಸಲಾತಿ ಸೌಲಭ್ಯ ಪಡೆದಿರುವ ಸಮುದಾಯಗಳು ಅನಾವಶ್ಯಕವಾಗಿ ಸಂವಿಧಾನ ವಿರುದ್ಧವಾಗಿ, ಬಾಬಾ ಸಾಹೇಬ್ ಅಂಬೇಡ್ಕರ್ ಆಶಯಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಮಾದಿಗ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಕೋಟ್ಯಂತರ ರೂ. ವೆಚ್ಚ ಮಾಡಿ ಸರ್ಕಾರಕ್ಕೆ ಸಲ್ಲಿಕೆಯಾದ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ, ಬಳಿಕ ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿಯ ಶಿಫಾರಸು, ಪ್ರಸ್ತುತ ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಕೆಲವು ಸಮುದಾಯಗಳು ಒಪ್ಪಲಿಲ್ಲ.
ಇದನ್ನೂ ಓದಿ: ದ್ವಿತೀಯ PUC ಅರ್ಥಶಾಸ್ತ್ರ ಪರೀಕ್ಷೆ | 6364 ವಿದ್ಯಾರ್ಥಿಗಳು ಹಾಜರು, 296 ವಿದ್ಯಾರ್ಥಿಗಳು ಗೈರು
ಎಲ್ಲ ಆಯೋಗಗಳ ವರದಿಯನ್ನು ಆ ಸಮುದಾಯಗಳಿಗೆ ಅನುಕೂಲ ಆಗುವ ರೀತಿಯಲ್ಲಿ ತಿದ್ದುಪಡಿ ಮಾಡಲಾಯಿತು. ಇದರಿಂದಾಗಿ ಅನಾಥ, ಅಸ್ಪೃಶ್ಯ ಸಮುದಾಯವಾದ ಅಲೆಮಾರಿಗಳಿಗೆ ತೀವ್ರ ಅನ್ಯಾಯ ಆಗಿದೆ. ಇಷ್ಟೆಲ್ಲ ಅನ್ಯಾಯ, ವಿರೋಧಗಳ ಮಧ್ಯೆಯೂ ಒಳಮೀಸಲಾತಿ ಜಾರಿಗೊಂಡಿರುವುದನ್ನು ಸ್ವಾಗತಿಸುತ್ತಾ, ಈಗ ಜಾರಿಗೊಳಿಸಿರುವ ಒಳಮೀಸಲಾತಿಯನ್ನು ಅನುಷ್ಠಾನಗೊಳಿಸಲು ಅಡ್ಡಿಪಡಿಸಲಾಗುತ್ತಿದೆ.
ವಿಶ್ವವಿದ್ಯಾಲಯಗಳಲ್ಲಿ ವಿಷಯವಾರು ನೇಮಕಾತಿ ಕೈಬಿಟ್ಟು, ವಿಶ್ವವಿದ್ಯಾಲಯಗಳನ್ನೇ ಒಂದು ಘಟಕವಾಗಿಸುವ ಹುನ್ನಾರು ನಡೆಯುತ್ತಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ: ವೈದ್ಯರ ಮುಷ್ಕರ | OPD ಬಂದ್ | ಬೇಡಿಕೆಗಳ ಈಡೇರಿಕೆಗೆ ವೈದ್ಯರಿಂದ ಸರ್ಕಾರಕ್ಕೆ ಪಟ್ಟು
ಇದೀಗ, ಒಳಮೀಸಲಾತಿ ಕೈಬಿಟ್ಟು 56432 ಹುದ್ದೆಗಳ ನೇಮಕಾತಿ ಮಾಡಲು ಮುಂದಾಗಿರುವುದು ದುರದೃಷ್ಟಕರ. ಕೂಡಲೇ 56432 ಹುದ್ದೆಗಳನ್ನು ತುಂಬಲು ನೀಡಿರುವ ನೋಟಿಪಿಕೇಷನ್ ರದ್ದುಗೊಳಿಸಿ ಒಳ ಮೀಸಲಾತಿಯನ್ನು ಅಳವಡಿಸಿ ಹುದ್ದೆ ತುಂಬುವ ಪ್ರಕ್ರಿಯೆಯನ್ನು ಆರಂಭಿಸಬೇಕು. ಪಟ್ಟಭದ್ರರ ಮಾತುಗಳನ್ನು ಧಿಕ್ಕರಿಸಿ ಅಸ್ಪೃಶ್ಯ, ನೊಂದ ಮಾದಿಗರಿಗೆ ನ್ಯಾಯ ಕೊಡಿಸಲು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
