
CHITRADURGA NEWS | 26 AUGUST 2024
ಚಿತ್ರದುರ್ಗ: ನಗರದ ನಮ್ಮ ಎಸ್ಆರ್ಎಸ್ ಹೆರಿಟೇಜ್ ಶಾಲೆಯ ಬ್ಲೂ ಜೆಮ್ಸ್ ಚಿಣ್ಣರ ವಿಭಾಗದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಲಾಯಿತು.
ತೊಟ್ಟಿಲಿಗೆ ಆರತಿ ಬೆಳಗಿ ಮುದ್ದು ಕೃಷ್ಣನನ್ನು ತೂಗಿ ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ನಾಗವೇಣಿ ಮಾತನಾಡಿ, ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ…ಸರ್ವರಿಗೂ 2024 ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಭಗವಾನ್ ಕೃಷ್ಣನು ಪ್ರತಿಯೊಬ್ಬರ ಮೇಲೆ ಅತ್ಯಂತ ಹರ್ಷಚಿತ್ತದಿಂದ ಆಶೀರ್ವಾದದ ಮಳೆಗರೆಯಲಿ. ಎಲ್ಲರ ಬದುಕಿನಲ್ಲೂ ಆನಂದದ ಹೊನಲು ಹರಿಸಲಿ. ಎಂತಹದ್ದೇ ಕಷ್ಟ, ಸವಾಲುಗಳನ್ನು ಎದುರಿಸಿ ಗೆಲ್ಲುವ ಧೈರ್ಯ ತುಂಬಲಿ ಎಂದರು.
ಚಿಣ್ಣರು ಕೃಷ್ಣನ 24 ಅವತಾರಗಳ ವೇಷ ಧರಿಸಿ ಭಾಗವಹಿಸಿದ್ದರು. ಎಸ್ಆರ್ಎಸ್ ಶಿಕ್ಷಣ ಸಮೂಹ ಸಂಸ್ಥೆ ಆಡಳಿತಾಧಿಕಾರಿ ಟಿ.ಎಸ್.ರವಿ, ಸಿಬಿಎಸ್ಇ ವಿಭಾಗದ ಪ್ರಾಂಶುಪಾಲ ಎಂ.ಎಸ್.ಪ್ರಭಾಕರ್, ಐಸಿಎಸ್ಇ ವಿಭಾಗದ ಪ್ರಾಂಶುಪಾಲೆ ಎಂ.ಎಸ್.ಅರ್ಪಿತಾ, ಬ್ಲ್ಯೂಜೆಮ್ಸ್ ಶೈಕ್ಷಣಿಕ ಸಂಯೋಜಕಿ ಸುಷ್ಮಾ, ಮಾರ್ಗದರ್ಶಕಿ ಡಾ.ಆಶ್ರೀತಾ ಕಿರಣ್ ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
