CHITRADURGA NEWS | 22 JUNE 2024
ಚಿತ್ರದುರ್ಗ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬಿಡುಗಡೆಯಾದ ಹಿನ್ನಲೆ ಚಿತ್ರದುರ್ಗದ ಎಎಪಿ ಕಾರ್ಯಕರ್ತರು ನಗರದ ಸಂತೇಪೇಟೆ ವೃತ್ತದಲ್ಲಿ ಪಟಾಕಿಯನ್ನು ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಇದನ್ನೂ ಓದಿ: ವಿದ್ಯಾನಗರದ ಬೋಟ್‍ಹೌಸ್‍ನಲ್ಲಿ ಯೋಗ ದಿನಾಚರಣೆ
ಈ ವೇಳೆ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ದೆಹಲಿ ಮುಖ್ಯಮಂತ್ರಿ ಕ್ರೇಜಿವಾಲ್‍ರವರು ಬಿಡುಗಡೆಯಾಗಿರುವುದು ಸಂವಿಧಾನಕ್ಕೆ ಸಿಕ್ಕ ಗೌರವವಾಗಿದೆ ಎಂದರು.
ಬಿಜೆಪಿ ಸರ್ವಾಧಿಕಾರದಿಂದ ದೇಶದ ಎಲ್ಲಾ ಸಂಘ-ಸಂಸ್ಥೆಗಳನ್ನು ಕೈಗೊಂಬೆಗಳಾಗಿ ಮಾಡಿಕೊಂಡಿದ್ದರು. ಈ ದಿನ ಈ ಎಲ್ಲವುದಕ್ಕೂ ಸಹಾ ಸ್ವತಂತ್ರ ಸಿಕ್ಕಂತಾಗಿದೆ.ಈಗ ಇ.ಡಿ. ಮತ್ತು ಐ.ಟಿ. ಸಂಸ್ಥೆಗಳು ಸಹಾ ಸ್ವತಂತ್ರವಾಗಿವೆ, 2024ರ ಹೆಚ್ಚಿನ ಬಹುಮತವನ್ನು ಪಡೆದು ಸರ್ವಾಧಿಕಾರದ ಕಡೆಗೆ ಹೋಗುತ್ತಿದ್ದವರನ್ನು ದೇಶದ ಜನ ಅವರ ಅಧಿಕಾರವನ್ನು ಮೊಟಕು ಮಾಡಿದ್ದಾರೆ.
ಇದನ್ನೂ ಓದಿ: ವಿಜಯೇಂದ್ರ ನೇತೃತ್ವದಲ್ಲಿ ಚಿತ್ರದುರ್ಗ ಡಿಸಿ ಕಚೇರಿಗೆ ಮುತ್ತಿಗೆ ಬಿಜೆಪಿ ನಿರ್ಧಾರ
ದೇಶದ ಅಂಗ ಸಂಸ್ಥೆಗಳಿಗೆ ಧೈರ್ಯ, ಸ್ಥರ್ಯವನ್ನು ತುಂಬಿದ್ದಾರೆ. ಅವರು ಸ್ವತಂತ್ರವಾಗಿ ನಿರ್ಧಾರವನ್ನು ಹೇಳುವಂತ ಶಕ್ತಿಯನ್ನು ನೀಡಲಾಗಿದೆ. ಈ ವರ್ಷದಲ್ಲಿ ದೇಶದ ಮತದಾರರು ಒಳ್ಳೇಯ ಉತ್ತರವನ್ನು ಮತದಾನ ಮೂಲಕ ನೀಡಿದ್ದಾರೆ. ಸಂವಿಧಾನಕ್ಕೆ ಅನುಗುಣವಾಗಿ ವಿರೋಧ ಪಕ್ಷಗಳು ಸಹಾ ಗಟ್ಟಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ, ವರಲಕ್ಷ್ಮೀ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ತನ್ವಿರ್, ಕಾರ್ಯದರ್ಶಿ ಗೌರಣ್ಣ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಸೈಯದ್ ದಾವೂದ್, ಚನ್ನಬಸಣ್ಣ, ಜಬೀವುಲ್ಲಾ ಸೇರಿದಂತೆ ಇತರರು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
