
ಚಿತ್ರದುರ್ಗ ನ್ಯೂಸ್.ಕಾಂ: ಚಿತ್ರದುರ್ಗ ನಗರದ ಹಳೇ ಬೆಂಗಳೂರು ರಸ್ತೆಯ ಮನೆಯೊಂದರಲ್ಲಿ ಮೂರು ಶವಗಳು ಪತ್ತೆಯಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ
ನಗರದ ಜೈಲು ರಸ್ತೆಯಲ್ಲಿರುವ ಈ ಮನೆ ಹಲವು ವರ್ಷಗಳಿಂದ ಬಾಗಿಲನ್ನೇ ತೆರೆದಿಲ್ಲ. ಈ ಮನೆಯಲ್ಲಿ ವರ್ಷಗಳ ಹಿಂದೆಯೇ ಮೃತಪಟ್ಟು ಕೊಳೆತು, ಅಸ್ತಿಪಂಜರದಂತಾಗಿವೆ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಕಳೆದ ನಾಲ್ಕೈದು ವರ್ಷದಿಂದ ಈ ಮನೆಯ ಬಾಗಿಲು ತೆರೆದಿರಲಿಲ್ಲ. ಸುಮಾರು 85 ವರ್ಷ ವಯಸ್ಸಾದ ಹಿರಿಯರು ಹಾಗೂ ಅಂದಾಜು 50 ವರ್ಷದ ಮಕ್ಕಳು ಈ ಮನೆಯಲ್ಲಿದ್ದರು ಎನ್ನಲಾಗುತ್ತಿದೆ.
ಆಕಸ್ಮಿಕವಾಗಿ ಕಿಟಕಿ ಮೂಲಕ ನೋಡಿದವರಿಗೆ ಮೂಳೆಗಳು ಕಾಣಿಸಿರುವ ಅನುಮಾನದ ಆಧಾರದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯ ಬಾಗಿಲು ತೆರೆದಾಗ ವರ್ಷಗಳ ಹಿಂದೆಯೇ ಮೃತಪಟ್ಟಿರುವ ಮಾದರಿಯ ಮೂರು ಶವಗಳು ಪತ್ತೆಯಗಿವೆ ಎನ್ನುವ ಮಾಹಿತಿಯಿದೆ.
ಇದನ್ನೂ ಓದಿ: ಹತ್ತು ಲಕ್ಷ ದರೋಡೆ ಪ್ರಕರಣ | ಹೊಸದುರ್ಗ ಪೊಲೀಸರ ಕಾರ್ಯಾಚರಣೆ
ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಎಂಬ ಫಲಕ ಮನೆಯ ಮುಂದಿದೆ. ಹಲವು ವರ್ಷಗಳಿಂದ ಈ ಮನೆಯ ಬಾಗಿಲು ತೆರೆದಿಲ್ಲ. ಕೆಲ ವರ್ಷಗಳ ಹಿಂದೆ ವಾಸನೆ ಬರುತ್ತಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಈ ಮನೆಯಿಂದ ವಾಸನೆ ಬರುತ್ತಿತ್ತು. ಇಲಿ ಸತ್ತಿರಬಹುದು ಎಂದು ಸ್ಥಳೀಯರು ಸುಮ್ಮನಾಗಿದ್ದಾರೆ.
ಈ ಪ್ರಕರಣ ಬೆಚ್ಚಿ ಬೀಳಿಸುತ್ತಿದ್ದು, ಸಂಪೂರ್ಣ ಮಾಹಿತಿ ಹೊರ ಬರಬೇಕಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಡಿವೈಎಸ್ಪಿ ಅನಿಲ್ ಕುಮಾರ್, ಸಿಪಿಐ ನಯೀಂ ಅಹಮ್ಮದ್ ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಆಗಮಿಸಬೇಕಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
