ಮುಖ್ಯ ಸುದ್ದಿ
SRS ಕಾಲೇಜಿಗೆ ಮತ್ತೊಂದು ಗರಿ | ಬಿಸಿಎ ವಿದ್ಯಾರ್ಥಿನಿಗೆ 5ನೇ ರ್ಯಾಂಕ್

Published on
CHITRADURGA NEWS | 07 FEBRUARY 2025
ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾನಿಲಯದ 2023-24ನೇ ಶೈಕ್ಷಣಿಕ ವರ್ಷದ ಪದವಿ ವಿಭಾಗದ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, SRS ಪ್ರಥಮ ದರ್ಜೆ ಕಾಲೇಜಿಗೆ ಈ ವರ್ಷವೂ ರ್ಯಾಂಕ್ ಲಭಿಸಿದೆ.
ಇಲ್ಲಿನ ಪದವಿ ವಿದ್ಯಾರ್ಥಿನಿ ನಾಜಿಯಾ ಕೌಸರ್ ಆರ್.ಎಸ್. ಬಿಸಿಎ ಅಂತಿಮ ಪದವಿಯಲ್ಲಿ ಶೇ.93 ರಷ್ಟು ಅಂಕ ಗಳಿಸಿ 5ನೇ ರ್ಯಾಂಕ್ ಗಳಿಸಿದ್ದಾರೆ.
ಇದನ್ನೂ ಓದಿ: B.Ed ಫಲಿತಾಂಶ | SRS ಕಾಲೇಜಿಗೆ ಮೂರು ರ್ಯಾಂಕ್
ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ, ಆಡಳಿತಾಧಿಕಾರಿ ಡಾ.ರವಿ, ಪ್ರಾಂಶುಪಾಲರಾದ ಜಿ.ಪಿ.ನಂದನ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
Continue Reading
Related Topics:BCA Degree, Chitradurga Latest, Chitradurga news, Davangere University, Kannada News, Nazia Kausar, Rank, SRS College, ಎಸ್‍ಆರ್‍ಎಸ್ ಕಾಲೇಜು, ಕನ್ನಡ ಸುದ್ದಿ, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್, ದಾವಣಗೆರೆ ವಿಶ್ವವಿದ್ಯಾನಿಲಯ, ನಾಜಿಯಾ ಕೌಸರ್, ಬಿಸಿಎ ಪದವಿ, ರ್ಯಾಂಕ್

Click to comment