CHITRADURGA NEWS | 22 MARCH 2024
ಚಿತ್ರದುರ್ಗ: ಜಗದೊಡೆಯ ಶ್ರೀಗುರು ತಿಪ್ಪೇರುದ್ರಸ್ವಾಮಿ ಮಹಾ ರಥೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ವಿಮೆ ಮಾಡಿಸಲಾಗಿದೆ. ಮಾರ್ಚ್ 26ರಂದು ತಿಪ್ಪೇರುದ್ರಸ್ವಾಮಿ ವಾರ್ಷಿಕ ಮಹಾಜಾತ್ರೆಯ ರಥೋತ್ಸವ ನಡೆಯಲಿದೆ. ವಾರ್ಷಿಕ ಮಹಾಜಾತ್ರೆಯನ್ನು ₹2.5 ಕೋಟಿ ಮೊತ್ತದ ವಿಮೆ ವ್ಯಾಪ್ತಿಗೆ ಒಳಪಡಿಸಲಾಗಿದೆ.

ಜಾತ್ರೆಯ ಕೇಂದ್ರ ಬಿಂದುವಾದ ಬೃಹತ್ ರಥ ನೆಲಮಟ್ಟದಿಂದ ಸುಮಾರು 75 ಅಡಿ ಎತ್ತರ ಹಾಗೂ 80 ಟನ್ ತೂಕವಿದೆ. ಈ ರಥವನ್ನು ಸಾವಿರಾರು ಭಕ್ತರು ಎಳೆಯುವಾಗ ರಥದ ಸುತ್ತಮುತ್ತ ಕಾರ್ಯನಿರ್ವಹಿಸುವ ಸೇವಾಕರ್ತರು ಮತ್ತು ರಥ ನಡೆಸುವವರಿಗೆ ಹಾಗೂ ಭಾಗವಹಿಸಿದ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಉಂಟಾದರೆ ಗುಣಮಟ್ಟದ ಚಿಕಿತ್ಸೆ ಕೊಡಿಸಲು ನೆರವಾಗಲಿ ಎಂಬ ಉದ್ದೇಶದಿಂದ ₹2.5 ಕೋಟಿ ಮೊತ್ತದ ವಿಮೆ ಮಾಡಿಸಲಾಗಿದೆ.
ಒಂದು ವರ್ಷದ ಅವಧಿಗೆ ರಥವು ತೇರುಬೀದಿಯಲ್ಲಿ ಇರುತ್ತದೆ. ಅದಕ್ಕೆ ಆಕಸ್ಮಿಕವಾಗಿ ಯಾವುದೇ ಹಾನಿಯುಂಟಾಗಬಾರದು ಎಂದು ವಿಮೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ದಿ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪನಿಯು ವಿಮೆ ಸೌಲಭ್ಯ ಒದಗಿಸಿದೆ.
ಕ್ಲಿಕ್ ಮಾಡಿ ಓದಿ: ರಾಮನಗರದಲ್ಲಿ ಅಧಿಕಾರಿಗಳ ವಶಕ್ಕೆ ಮಂಕಿ ಮ್ಯಾನ್ ಜ್ಯೋತಿರಾಜ್
ಒಟ್ಟು ಮೂರು ಹಂತದ ಪಾಲಿಸಿಗಳಿಂದ ₹ 51,252 ಮೊತ್ತದ ಚೆಕ್ ಅನ್ನು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಚ್.ಗಂಗಾಧರಪ್ಪ ಕಂಪನಿಗೆ ನೀಡಿದ್ದರು. ಗುರುವಾರ ಇದಕ್ಕೆ ಸಂಬಂಧಿಸಿದ ವಿಮೆ ಪಾಲಿಸಿಗಳ ಪ್ರತಿಗಳನ್ನು ಕಂಪನಿಯಿಂದ ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ.
ಜಾತ್ರೆಯ ದಿನ ಹಾಗೂ ವರ್ಷದ ಇತರೆ ಯಾವುದೇ ದಿನವಾದರೂ ರಥಕ್ಕೆ ಅಗ್ನಿ ಅವಘಡ ಸೇರಿದಂತೆ ಯಾವುದೇ ನೈಸರ್ಗಿಕ ವಿಕೋಪಗಳಿಂದ ಹಾನಿ ಉಂಟಾದರೆ ಅದು ವಿಮಾ ವ್ಯಾಪ್ತಿಗೆ ಒಳಪಡಲಿದೆ. ಒಂದು ವರ್ಷದ ಅವಧಿಗೆ ರಥಕ್ಕೆ ₹2.5 ಕೋಟಿ ಮೊತ್ತದ ವಿಮೆ ಒದಗಿಸಲಾಗಿದೆ.
ಕ್ಲಿಕ್ ಮಾಡಿ ಓದಿ: ಚಳ್ಳಕೆರೆ ATR ನಲ್ಲಿ ಇಸ್ರೋ ಮಹತ್ವದ ಸಾಧನೆ | ಮರುಬಳಕೆಯ ರಾಕೇಟ್ ಪುಷ್ಪಕ್ ಯಶಸ್ವಿ ಲ್ಯಾಂಡಿಂಗ್
ರಥವನ್ನು ಚಲಾಯಿಸುವ ಹಾಗೂ ಸಾಂಪ್ರದಾಯಿಕ ಸೇವಾಕರ್ತರು ಸೇರಿದಂತೆ ನಾಮನಿರ್ದೇಶಿಸಿದ 89 ಜನರಿಗೆ ತಲಾ ₹2ಲಕ್ಷ ಮೊತ್ತದ ವಿಮೆ ಒದಗಿಸಲಾಗಿದೆ. ಇದರ ಜತೆಗೆ ಜಾತ್ರೆಯಲ್ಲಿ ಭಾಗವಹಿಸಿದ ಭಕ್ತರಿಗೆ ₹25 ಲಕ್ಷ ಮೊತ್ತದ ವಿಮೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕಂಪನಿಯ ದಾವಣಗೆರೆ ವೃತ್ತದ ವಿಭಾಗೀಯ ವ್ಯವಸ್ಥಾಪಕ ದೇವದಾಸ್ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
