Connect with us

    ZEE kannnada; ಚಿತ್ರದುರ್ಗದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ZEE ಗಣೇಶೋತ್ಸವ 

    ಮುಖ್ಯ ಸುದ್ದಿ

    ZEE kannnada; ಚಿತ್ರದುರ್ಗದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ZEE ಗಣೇಶೋತ್ಸವ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 30 AUGUST 2024

    ಚಿತ್ರದುರ್ಗ: ಕನ್ನಡಿಗರ ಅಚ್ಚು ಮೆಚ್ಚಿನ ಜೀ಼ ಕನ್ನಡ(ZEE kannnada) ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಧಾರಾವಾಹಿಗಳನ್ನು ಪ್ರಸ್ತುತ ಪಡಿಸುತ್ತಿದೆ. ಜೊತೆಗೆ ವಿಭಿನ್ನ ರೀತಿಯ ರಿಯಾಲಿಟಿ ಷೋಗಳು, ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ನೀಡುತ್ತಾ ಬರುತ್ತಿದೆ. ಹೀಗಾಗಿ ಜೀ಼ ಕನ್ನಡ ವಾಹಿನಿಯು ಪ್ರೇಕ್ಷಕರ ಮನೆ ಮಾತಾಗಿ ನಂಬರ್ 1 ಪಟ್ಟದಲ್ಲಿ ಮುಂದುವರೆಯುತ್ತಿದೆ.

    ಕ್ಲಿಕ್ ಮಾಡಿ ಓದಿ: Horoscope Today: ದಿನ ಭವಿಷ್ಯ | ಆಗಸ್ಟ್ 30 | ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶ

    ತಮ್ಮ ವಿಭಿನ್ನ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಮನರಂಜಿಸುತ್ತಿರುವ ವಾಹಿನಿಯು ತಮಗೆ ಪ್ರೋತ್ಸಾಹ ನೀಡಿ ಬೆನ್ನು ತಟ್ಟುತ್ತಿರುವ ಜನರ ಬಳಿಯೇ ತೆರಳಿ ಅವರಿಗೊಂದು ಧನ್ಯವಾದ ಅರ್ಪಿಸುವುದು ವಾಡಿಕೆ ಮಾಡಿಕೊಂಡಿದೆ. ಇದೀಗ ಕೋಟೆ ನಾಡು ಚಿತ್ರದುರ್ಗದಲ್ಲಿ ಇದೇ ಸೆಪ್ಟೆಂಬರ್ 1 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಲಕ್ಷ್ಮೀ ನಿವಾಸ ತಂಡದವರೊಂದಿಗೆ ‘ಜೀ ಗಣೇಶ ಉತ್ಸವ’ ಕಾರ್ಯಕ್ರಮವನ್ನು ಆಯೋಜಿಸಿದ್ದು ನಿಮ್ಮೆಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸುತ್ತಿದೆ.

    ಜೀ಼ ಕನ್ನಡ ವಾಹಿನಿಯ ‘ಲಕ್ಷ್ಮೀ ನಿವಾಸ’ ಧಾರಾವಾಹಿಯು ಆರಂಭದಿಂದಲೂ ನೋಡುಗರ ಮನಗೆದ್ದು ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ.

    ಮಧ್ಯಮ ವರ್ಗದ ಜನರ ಕಷ್ಟ, ಸುಖ, ಬಾಂದವ್ಯ, ಸಮಸ್ಯೆ ಎಲ್ಲವನ್ನು ಒಳಗೊಂಡಿರುವ ಕಥೆ ಇದಾಗಿದೆ. ಕಥೆಯಲ್ಲಿ ಹಲವು ಮಜಲುಗಳಿದ್ದು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸುತ್ತಿರುವ ಈ ಧಾರಾವಾಹಿ ತಂಡದ ಕಲಾವಿದರೊಂದಿಗೆ ಇದೀಗ ಜೀ಼ ಕನ್ನಡ ವಾಹಿನಿಯು ‘ಗಣೇಶ ಉತ್ಸವ’ವನ್ನು ಚಿತ್ರದುರ್ಗದಲ್ಲಿ ಏರ್ಪಡಿಸಿದ್ದಾರೆ.

    ಕ್ಲಿಕ್ ಮಾಡಿ ಓದಿ: Farmers Association; ರೈತ ಸಂಘದ ಕಾರ್ಯಕಾರಿ ಸಮಿತಿ ಸಭೆ | ಡಿಸಿ ಕಚೇರಿ ಮುಂದೆ ಪ್ರತಿಭಟಿಸಲು ತೀರ್ಮಾನ 

    ನಿಮ್ಮೆಲ್ಲರ ನೆಚ್ಚಿನ ನಿರೂಪಕ ಮಾಸ್ಟರ್ ಆನಂದ್ ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ.

    ಜೊತೆಗೆ ನಟ ನಟಿಯರೊಂದಿಗೆ ನೇರವಾಗಿ ಮಾತನಾಡುವ ಅವಕಾಶ ಲಭ್ಯವಿದೆ. ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಸಹ ತನ್ನದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದೆ. ಈ ಮನರಂಜನೆಯ ಮಹಾ ಉತ್ಸವದಲ್ಲಿ ಇಡೀ ‘ಲಕ್ಷೀ ನಿವಾಸ’ ಧಾರಾವಾಹಿ ತಂಡ ಇರಲಿದ್ದು ನಿಮ್ಮೆಲ್ಲರನ್ನು ನೇರವಾಗಿ ಭೇಟಿಯಾಗಲಿದ್ದಾರೆ.

    ನಿಮ್ಮ ನೆಚ್ಚಿನ ಕಲಾವಿದರು ನಿಮ್ಮ ಸಮ್ಮುಖದಲ್ಲೇ ಕುಣಿದು ಕುಪ್ಪಳಿಸಿ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

    ಸೆಪ್ಟೆಂಬರ್ 1 ರಂದು ಭಾನುವಾರ ಲಕ್ಷ್ಮೀ ನಿವಾಸ ತಂಡದವರೊಂದಿಗೆ ‘ಜೀ ಗಣೇಶ ಉತ್ಸವ’ ಕಾರ್ಯಕ್ರಮವನ್ನು ಆಯೋಜಿಸಿದ್ದು ನಿಮ್ಮೆಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸುತ್ತಿದೆ.

    ಈ ಕಾರ್ಯಕ್ರಮದ ಆಕರ್ಷಣೆ ಪರಿಸರ ಸ್ನೇಹಿ ಗಣೇಶನನ್ನು ಉಪಯೋಗಿಸುತ್ತಿರುವುದು, ಹಾಗು ಜನರಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಉಪಯೋಗಿಸುವಂತೆ ಜಾಗ್ರತಿಯನ್ನು ಮೂಡಿಸಲಾಗುವುದು.

    ಕ್ಲಿಕ್ ಮಾಡಿ ಓದಿ: Award; ಕುರುಬ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

    ಇದೇ ಸೆಪ್ಟೆಂಬರ್ 1 ಭಾನುವಾರ (1.9.2024) ದಂದು ಚಿತ್ರದುರ್ಗದ ಅನುಭವ ಮಂಟಪ, ಮುರುಘಮಠ ಆವರಣ, ಚಿತ್ರದುರ್ಗದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಮನರಂಜನೆ ತುಂಬಿದ ಈ ಕಾರ್ಯಕ್ರಮಕ್ಕೆ ಆಗಸ್ಟ್ 31 ಶನಿವಾರದಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ(ಮುರುಘಮಠ ಆವರಣ) ಪಾಸ್ ಗಳನ್ನು ವಿತರಣೆ ಮಾಡಲಾಗುವುದು.

    ಪ್ರವೇಶ ಉಚಿತವಾಗಿದ್ದು,ಯಾವುದೇ ಶುಲ್ಕವನ್ನು ತಗೆದುಕೊಳ್ಳುವುದಿಲ್ಲ. ಸೀಮಿತ ಆಸನಗಳಿದ್ದು ಮೊದಲು ಬಂದವರಿಗೆ ಆದ್ಯತೆ ಎಂದು ವಾಹಿನಿ ವಿಶೇಷ ಸೂಚನೆ ನೀಡಿದೆ. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top