CHITRADURGA NEWS | 30 AUGUST 2024
ಚಿತ್ರದುರ್ಗ: ಫೇಸ್ ಬುಕ್ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ ವರ್ತಕರೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಹಿರಿಯೂರಿನಲ್ಲಿ ನಡೆದಿದೆ.
ಹಿರಿಯೂರು ನಗರದ ವರ್ತಯ ಎಸ್.ಸುಹಾಸ್ 2 ತಿಂಗಳ ಅಂತರದಲ್ಲಿ ₹ 9.59 ಲಕ್ಷ ಕಳೆದುಕೊಂಡಿದ್ದಾರೆ. ಜೂನ್ 17 ರಂದು ರಾತ್ರಿ 7 ಗಂಟೆ ಸಮಯದಲ್ಲಿ ಫೇಸ್‌ಬುಕ್ ನ ಜಾಹೀರಾತು ಮೇಲೆ ಕ್ಲಿಕ್ ಮಾಡಿದ್ದಾರೆ. ಕೆಲ ಕ್ಷಣಕ್ಕೆ ವ್ಯಾಟ್ಸ್ ಆಫ್‌ಗೆ ಮೇಸೆಜ್ ಬಂದಿದ್ದು, ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್‌ನಲ್ಲಿ ಹಣ ಹಾಕಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ನಡೆದಂತೆ ನುಡಿ ನುಡಿದಂತೆ ನಡೆಯುವ ಮಾರ್ಗ ತೋರಿದ ಶರಣರು
ಇದನ್ನು ನಂಬಿದ ಸುಹಾಸ್‌ಗೆ ₹ 1,16,000 ಶೇರ್ ಆರ್ಲಟ್ ಮಾಡಿ ಮಾರಲು ತಿಳಿಸಿದ್ದಾರೆ. ಬಳಿಕ ₹ 2,55,000 ಲಾಭಾಂಶ ಬಂದಿದೆ ಎಂದು ತಿಳಿಸಿದ್ದಾರೆ. ಮತ್ತೊಮ್ಮೆ ನಿಮಗೆ ಶೇರ್ ಆರ್ಲಟ್ ಆಗಿದ್ದು, ₹ 1,80,000 ಹಣ ಹಾಕಲು ತಿಳಿಸಿದ್ದಾರೆ. ಬಳಿಕ ಸುಹಾಸ್ ಹಾಗೂ ಆತನ ಪತ್ನಿ, ಸ್ನೇಹಿತನ ಖಾತೆಯಿಂದ ಆಗಸ್ಟ್ 16 ಹಾಗೂ 22 ರಂದು ₹ 9,59,359 ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಚಿತ್ರದುರ್ಗದ ಸೈಬರ್ ಅಪರಾಧ ಠಾಣೆಯಲ್ಲಿ ಮಂಗಳವಾರ ಸಂಜೆ ದೂರು ದಾಖಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಹಣವನ್ನು ಮರಳಿ ಕೊಡಿಸುವಂತೆ ದೂರುದಾರರು ಕೋರಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
