ಲೋಕಸಮರ 2024
ಯೋಗಿ ಆದಿತ್ಯನಾಥ್ ಕಾರ್ಯಕ್ರಮ ರದ್ದು | ನಾಳಿನ ಕರ್ನಾಟಕ ಪ್ರವಾಸ ರದ್ದು | ಚಿತ್ರದುರ್ಗದಲೂ ನಾಳೆ ನಡೆಯಬೇಕಿದ್ದ ಸಮಾವೇಶ

CHITRADURGA NEWS | 23 APRIL 2024
ಚಿತ್ರದುರ್ಗ: ಉತ್ತರ ಪ್ರದೇಶ ಮುಖ್ಯಮಂತ್ರಿ, ಬಿಜೆಪಿಯ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಅವರ ಕಾರ್ಯಕ್ರಮ ರದ್ದಾಗಿದೆ.
ಕರ್ನಾಟಕದ ಚಿತ್ರದುರ್ಗ, ಮಡಿಕೇರಿ, ಉಡುಪಿ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರ ಸಭೆಗಳನ್ನು ಆಯೋಜಿಸಲಾಗಿತ್ತು.
ಇದನ್ನೂ ಓದಿ: ಅಡಿಕೆ ರೇಟ್ ನಾಗಾಲೋಟ | ಚನ್ನಗಿರಿ ಮಾರುಕಟ್ಟೆಯಲ್ಲಿ 1200 ರೂ. ಹೆಚ್ಚಳ
ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರವಾಗಿ ಚುನಾವಣಾ ಪ್ರಚಾರಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏಪ್ರಿಲ್ 24 ರಂದು ಚಿತ್ರದುರ್ಗಕ್ಕೆ ಆಗಮಿಸುವ ಕಾರ್ಯಕ್ರಮ ನಿಗಧಿಯಾಗಿತ್ತು. ಆದರೆ, ಈಗ ಕಾರಣಾಂತರಗಳಿಂದ ಕಾರ್ಯಕ್ರಮ ರದ್ದಾಗಿದೆ ಎಂದು ಬಿಜೆಪಿ ತಿಳಿಸಿದೆ.
ಏಪ್ರಿಲ್ 24 ರಂದು ಬೆಳಗ್ಗೆ 11 ಗಂಟೆಗೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹಳೇ ಮಾಧ್ಯಮಿ ಶಾಲಾ ಆವರಣದವರೆಗೆ ಯೋಗಿ ಆದಿತ್ಯನಾಥ್ ರೋಡ್ ಶೋ ನಡೆಸಲು ಆರಂಭದಲ್ಲಿ ಯೋಜನೆ ರೂಪಿಸಲಾಗಿತ್ತು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಹದ ಮಳೆ | ಇಳೆಗೆ ಜೀವಕಳೆ ತುಂಬಿದ ಮಳೆರಾಯ
ಆನಂತರ, ರೋಡ್ ಶೋ ರದ್ದು ಮಾಡಿ, ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಮಾವೇಶ ನಡೆಸಿ, ಕಾರ್ಯಕರ್ತರು, ಜಿಲ್ಲೆಯ ನಾಗರೀಕರನ್ನು ಉದ್ದೇಶಿಸಿ ಮಾತನಾಡಲು ಕಾರ್ಯಕ್ರಮ ರೂಪಿಸಲಾಗಿತ್ತು.
ಆದರೆ, ಈಗ ಇಡೀ ಕಾರ್ಯಕ್ರಮವೇ ರದ್ದಾಗಿದ್ದು, ನಾಳೆ ಚಿತ್ರದುರ್ಗಕ್ಕೆ ಯೋಗಿ ಆದಿತ್ಯನಾಥ್ ಬರುವುದಿಲ್ಲ ಎಂದು ಬಿಜೆಪಿ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡುತ್ತಿದೆ.
ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿ ಎದುರು ಕೊಬ್ಬರಿ ಸುರಿದು ರೈತರ ಆಕ್ರೋಶ | ಕೊಬ್ಬರಿ ಖರೀದಿ ನಿಯಮ ಸಡಿಲಿಕೆಗೆ ಆಗ್ರಹ
ಇದೇ ಮೊದಲ ಬಾರಿಗೆ ಚಿತ್ರದುರ್ಗಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರುವ ವಿಚಾರ ತಿಳಿದು ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದರು. ಆದರೆ, ಈಗ ಕಾರ್ಯಕ್ರಮ ರದ್ದಾಗಿದ್ದು ನಿರಾಸೆ ಮೂಡಿಸಿದೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಚೇರಿಯಿಂದ ಕಾರ್ಯಕ್ರಮ ರದದಾಗಿರುವ ಬಗ್ಗೆ ಸೋಮವಾರ ರಾತ್ರಿ ಮಾಹಿತಿ ಬಂದಿದೆ. ಕರ್ನಾಟಕದ ಒಟ್ಟು ಪ್ರವಾಸ ರದ್ದು ಮಾಡಲಾಗಿದೆ. ಚಿತ್ರದುರ್ಗ, ಮಡಿಕೇರಿ, ಉಡುಪಿ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಪ್ರವಾಸ ನಿಗಧಿಯಾಗಿತ್ತು.
| ಕೆ.ಎಸ್.ನವೀನ್, ಬಿಜೆಪಿ ರಾಜ್ಯ ವಕ್ತಾರ.
