CHITRADURGA NEWS | 18 October 2025
ಚಿತ್ರದುರ್ಗ: ಕನ್ನಡದ ಪ್ರಥಮ ರಾಜಧಾನಿ ಕದಂಬರ ನಾಡಿನಲ್ಲಿ ಬೆಂಗಳೂರಿನ ಸಾಂಸ್ಕೃತಿಕ ರಾಯಭಾರಿ ಹಾಗೂ ಮಂದಾರ ಗಾಯನ ಚೇತನ ಟ್ರಸ್ಟ್ ಅಧ್ಯಕ್ಷರು, BMTC ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಚಳ್ಳಕೆರೆ ತಾಲೂಕು ಯಾಲಗಟ್ಟೆ ಎರ್ರಿಸ್ವಾಮಿ ಎಚ್. ಇವರಿಗೆ ಕದಂಬ ಕಲಾ ಸಾಂಸ್ಕೃತಿಕ ಪರಿಷತ್ತು ಕರ್ನಾಟಕ ಶಿರಿಸಿ-ಬನವಾಸಿ ವಾರ್ಷಿಕವಾಗಿ ಕೊಡಮಾಡುವ ಪ್ರತಿಷ್ಠಿತ ಕದಂಬ ಕಲಾರಾಧಕ-2025 ರಾಜ್ಯಮಟ್ಟದ ಪ್ರಶಸ್ತಿ ಮುಡಿಗೇರಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | 68 ಸಾವಿರ ದಾಟಿದ ರಾಶಿ ಅಡಿಕೆ ಬೆಲೆ
ಶಿರಸಿಯ ಹೋಟೆಲ್ ಸುಪ್ರಿಯಾ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕದಂಬ ಕಲಾ ಸಾಂಸ್ಕೃತಿಕ ಪರಿಷತ್ತು ಕರ್ನಾಟಕ ಸಾರಥ್ಯದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಉ.ಕ ಘಟಕ ಸಹಭಾಗಿತ್ವದಲ್ಲಿ ನಾಡಿನ ಖ್ಯಾತ ಕವಿ ಡಾ.ಕವೆಂಶ್ರೀ ಕಾವ್ಯಯಾನ-ಭಾವಗಾನ ೧ ಶತಕಂಠ ಗಾಯನ, ಕದಂಬ ರತ್ನಾಕರರ ಹೊನ್ನುಡಿ ಕವನ ಸಂಕಲನ ಲೋಕಾರ್ಪಣೆ ಹಾಗೂ ಕದಂಬ ಕಲಾರಾಧಕ-2025 ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿರಸಿಯ ಶಾಸಕರಾದ ಭೀಮಣ್ಣ ನಾಯ್ಕ, ಕದಂಬ ರತ್ನಾಕರ, ತಹಶೀಲ್ದಾರ ಪಟ್ಟರಾಜ ಗೌಡ ಹಾಗೂ ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಸೇರಿದಂತೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಎರ್ರಿಸ್ವಾಮಿ ಎಚ್. ಅವರ ಜೊತೆಗೆ ಡಾ.ನಾಗರಾಜ ಬೈರಿ-ಮೈಸೂರು, ಸಿ.ಎಂ.ನರಸಿಂಹಮೂರ್ತಿ- ಚಾಮರಾಜನಗರ, ಶಾಂತಾ ಶೆಟ್ಟಿ- ಶಿವಮೊಗ್ಗ, ಗಣೇಶ್ ಶೆಣೈ- ದಾವಣಗೆರೆ ಹಾಗೂ ಮಂಡ್ಯದ ಡೇವಿಡ್ ಪ್ರತಿಭಾಂಜಲಿ ಇವರಿಗೂ ಇವರ ಸಾಂಸ್ಕೃತಿಕ ಸೇವೆಯನ್ನ ಪರಿಗಣಿಸಿ ಕದಂಬ ಕಲಾರಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ಕನೇರಿ ಶ್ರೀಗಳ ಹೇಳಿಕೆ | ಲಿಂಗಾಯಿತ ಮಹಾಸಭಾ ಖಂಡನೆ
ವೇದಿಕೆಯಲ್ಲಿ ಶಿಕ್ಷಣ ತಜ್ಞ ಕೆ.ಎನ್.ಹೊಸ್ಮನಿ, ಡಾ. ವೆಂಕಟೇಶ ನಾಯ್ಕ, ಭೀಮಾಶಂಕರ್ ಕುಲಕರ್ಣಿ, ದಿವ್ಯಾ ಶೇಟ್ ಕದಂಬ ಹಾಗೂ ಜ್ಯೋತಿ ರತ್ನಾಕರ ಇತರರು ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
