
CHITRADURGA NEWS | 11 APRIL 2025
ಹೊಸದುರ್ಗ: ಬಸವ ಜಯಂತಿ ಮತ್ತು ರೇಣುಕ ಜಯಂತಿಯನ್ನು ಒಂದೇ ದಿನ ಮಾಡುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಸಂಸ್ಥೆಯ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರು ಆದೇಶ ಹೊರಡಿಸಿದ್ದನ್ನು ಗಮನಿಸಿದೆವು.
Also Read: ದ್ವಿತೀಯ ಪಿಯುಸಿ ರಿಸಲ್ಟ್ | ಇವರೇ ನೋಡಿ ಜಿಲ್ಲೆಯ ಟಾಪರ್ಸ್ | ಜಿಲ್ಲೆಗೆ ಶೇ.59.87 ಫಲಿತಾಂಶ

ಬಸವ ಜಯಂತಿಯಂದು ರೇಣುಕ ಜಯಂತಿ ಮಾಡುವ ಉದ್ದೇಶವೇನು?
ಬಸವಣ್ಣ ಲಿಂಗಾಯತ ಧರ್ಮದ ಗುರು ಎಂದು ರೇಣುಕ ಪರಂಪರೆಯವರು ಒಪ್ಪುವರೇ? ಬಸವಣ್ಣ ಐತಿಹಾಸಿಕ ವ್ಯಕ್ತಿ. ರೇಣುಕರು?
ಬಸವ ಜಯಂತಿಯಂದು ಬಸವಣ್ಣನವರ ವಿಚಾರಗಳು ಜನಮನಕ್ಕೆ ಮುಟ್ಟಬೇಕೇ ಹೊರತು ರೇಣುಕ ಮತ್ತಿತರ ವಿಚಾರಗಳಲ್ಲ.
ಬಸವಣ್ಣನವರ ತತ್ವಸಿದ್ಧಾಂತಗಳು ಸಮಾಜಮುಖಿ, ಜೀವಪರ. ಅಲ್ಲಿ ಸಮಾನತೆ ಇದೆ. ಸಕಲ ಜೀವಾತ್ಮರ ಒಳಿತಿದೆ. ಆತ್ಮಕಲ್ಯಾಣದ ಜೊತೆ ಲೋಕಕಲ್ಯಾಣವೂ ಇದೆ.
ಇಂತಹ ಸಾಂಸ್ಕೃತಿಕ ನಾಯಕ, ವಿಶ್ವಗುರು, ಲಿಂಗಾಯತ ಧರ್ಮದ ಸಂಸ್ಥಾಪಕ ಬಸವಣ್ಣನವರ ಆಶಯಗಳಿಗೆ ಮೆರಗು ಬರಬೇಕಾದಲ್ಲಿ ಬಸವ ಜಯಂತಿಯಂದು ಬಸವಣ್ಣನವರ ಭಾವಚಿತ್ರದ ಮೆರವಣಿಗೆ, ಅವರ ಸಂದೇಶಗಳ ಚಿಂತನ ಮಂಥನ ನಾಡಿನಲ್ಲೆಲ್ಲ ಏಪ್ರಿಲ್ 30 ರಂದು ನಡೆಯುವುದು ಸ್ವಾಗತಾರ್ಹ.
ಅಂದು ಬೇರೆ ಯಾರ ಜಯಂತಿ ಖಂಡಿತ ಬೇಡ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
