CHITRADURGA NEWS | 11 APRIL 2025
ಹೊಸದುರ್ಗ: ಹಿರಿಯರ ಆಸ್ತಿ ಹಂಚಿಕೊಳ್ಳುವ ಮಕ್ಕಳು ಅವರ ಆದರ್ಶಗಳನ್ನು ಅಳವಡಿಸಿಕೊಂಡು ಜೀವನ ನಡೆಸಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು.
Also Read: ಆರೋಗ್ಯವಾಗಿರಲು ನಿಮ್ಮ ದಿನನಿತ್ಯದ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿಕೊಳ್ಳಿ

ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದ ಸುಜ್ಞಾನ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನೇಕ ರೀತಿಯ ಮಾನಸಿಕ ಒತ್ತಡದಲ್ಲಿ ಟಿವಿ ಅಥವಾ ಮೊಬೈಲ್ ಆಗಿರಬಹುದು, ಅದರಲ್ಲಿ ಬರುವ ಒಳಿತು, ಕೆಟ್ಟದ್ದು ಆಯ್ಕೆ ಮಾಡುವ ಗೊಂದಲದಲ್ಲಿ ಜನರಿದ್ದಾರೆ.
ಸುಜ್ಞಾನ ಸಂಗಮ ಕಾರ್ಯಕ್ರಮದ ಮೂಲಕ, ಗುರುಗಳ ಮಾರ್ಗದರ್ಶನ ಅತಿಥಿಗಳ ಉಪನ್ಯಾಸಗಳ ಮೂಲಕ, ಮಾನಸಿಕ ಒತ್ತಡವನ್ನು ಗೆಲ್ಲುವ ಆತ್ಮಬಲ ತುಂಬುವ ಕಾರ್ಯಕ್ರಮ ಗ್ರಾಮೀಣ ಜನರಿಗಾಗಿ ಆಯೋಜಿಸುವ ಮೂಲಕ ನಮ್ಮ ಗುರುಗಳಾದ ಕಾಯಕವೇ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು ಆದರ್ಶವಾಗಿದ್ದಾರೆ.
ಅನೇಕ ವಿಷಯಗಳನ್ನು ಸಾಹಿತಿಗಳು, ಪಂಡಿತರು, ಗುರುಗಳು, ಪ್ರತಿನಿಧಿಗಳು ಹಂಚಿಕೊಳ್ಳುವುದರಿಂದ ಗ್ರಾಮೀಣ ಜನರಿಗೆ ಹೊಸತನ ಲಭಿಸಲು ಸಾಧ್ಯವಾಗುತ್ತದೆ.
Also Read: ದ್ವಿತೀಯ ಪಿಯುಸಿ ರಿಸಲ್ಟ್ | ಇವರೇ ನೋಡಿ ಜಿಲ್ಲೆಯ ಟಾಪರ್ಸ್ | ಜಿಲ್ಲೆಗೆ ಶೇ.59.87 ಫಲಿತಾಂಶ
ಹಿಂದೆ ನಮ್ಮ ಪೂರ್ವಜರು ಮನೆಯಿಂದ ಹೊರ ಹೋಗುವಾಗ ಹಣೆಗೆ ಕುಂಕುಮ ವಿಭೂತಿ ಬಂಡಾರಗಳನ್ನು ಧರಿಸಿ ಹೋಗುತ್ತಿದ್ದರು ಆದರೆ ಇಂದಿನ ಯುವಕರು ಈ ಆದರ್ಶಗಳನ್ನು ಪಾಲನೆ ಮಾಡದೆ, ಕೇವಲ ಆಂತ್ರಿಕ ಜೀವನ ನಡೆಸುತ್ತಿದ್ದಾರೆ.
ದುರಾದೃಷ್ಟವಾದ ಸಂಗತಿ ಎಂದರೆ ತಂದೆ ತಾಯಿಗಳು ಸಂಪಾದಿಸಿದ ಜಮೀನು, ಒಡವೆಗಳನ್ನು ಹಂಚಿಕೊಳ್ಳಲು ನನಗೆಷ್ಟು, ನಿನಗೆಷ್ಟು ಎಂದು ಲೆಕ್ಕ ಹಾಕುವ ಮಕ್ಕಳು ಮೊಮ್ಮಕ್ಕಳು ನಮ್ಮ ಹಿರಿಯರ ಆದರ್ಶಗಳನ್ನು ಲೆಕ್ಕ ಹಾಕಿ, ಆಸ್ತಿಯ ಜೊತೆಜೊತೆಗೆ ಅವರ ಆದರ್ಶಗಳನ್ನು ಅಳವಡಿಸಿಕೊಂಡಾಗ ನಮ್ಮ ಹಿರಿಯರ ಆತ್ಮಕ್ಕೆ ನಿಜವಾದ ಗೌರವ, ಆತ್ಮ ಶಾಂತಿ ಸಿಗಲು ಸಾಧ್ಯ ಎಂದು ಹೇಳಿದರು.
ಹೊಸದುರ್ಗ ಕನಕ ಗುರುಪೀಠದ ಪೂಜ್ಯ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಹಿರಿಯರ ಲಾಲನೆ ಪೋಷಣೆ ಮಾಡುವ ಮೂಲಕ ನಮ್ಮ ಕೌಟುಂಬಿಕ ವ್ಯವಸ್ಥೆಯನ್ನು ಪ್ರಧಾನವಾಗಿಟ್ಟುಕೊಂಡು ಬದುಕು ನಡೆಸುವುದು ಅನಿವಾರ್ಯವಾಗಿದೆ. ಇವತ್ತಿನ 16 ರಿಂದ 18 ವರ್ಷದ ಯುವಕರು ದುಶ್ಚಟಗಳಿಗೆ ಡಾಬ ಸಂಸ್ಕೃತಿಗೆ ಒಳಗಾಗುತ್ತಿರುವುದು ಅತ್ಯಂತ ಆತಂಕಕಾರಿ.
ಸತ್ಯವಂತರ ಸಂಘವಿರಲು ಇರ್ತವ್ಯಾತಕೆ ಎಂಬ ದಾಸರ ಆದರ್ಶದ ಮಾತುಗಳನ್ನು ಅಳವಡಿಸಿಕೊಂಡು ಸಜ್ಜನರ ಸದ್ಗುರುವಿನ ಸಂಘ ಮಾಡಿದಾಗ ಬದುಕು ಹಸನಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಾಯಕಯೋಗಿ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮೀಜಿ ಮಾತನಾಡಿ, ತಂದೆ ತಾಯಿಗಳ ಆಸ್ತಿಗಾಗಿ ಬಡೆದಾಡುವ ಮಕ್ಕಳು ಅವರ ಆದರ್ಶಗಳಿಗಾಗಿ ಪೈಪೋಟಿ ನಡೆಸಿ, ಆಗ ಸಮಾಜ ದೇಶ ಸತ್ಯದ ಸಮೃದ್ಧಿಯ ಪಥದಲ್ಲಿ ನಡೆಯಲು ಸಾಧ್ಯ.
ನಿಮ್ಮ ಭವಿಷ್ಯದ ಬದುಕಿಗಾಗಿ ಗ್ರಾಮೀಣ ಜನತೆಯಲ್ಲಿ ಜಾಗೃತಿ ಮೂಡಿಸುವ ದುಷ್ಟ ಮುಕ್ತ ಹಾಗೂ ಆರ್ಥಿಕ ಸಬಲೀಕರಣ ಮಾಡಲು, ನಿಮ್ಮಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆತ್ಮಬಲ ತುಂಬಲು ಹಳ್ಳಿಗಳಲ್ಲಿ ಸುಜ್ಞಾನ ಸಂಗಮ ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ, ಉಪನ್ಯಾಸಕ ಶಿವಕುಮಾರ್ ಮಾತನಾಡಿದರು.
Also Read: ಎಳನೀರು ಅಥವಾ ನಿಂಬೆ ನೀರು? ಈ ಬೇಸಿಗೆಯಲ್ಲಿ ನಿಮಗೆ ಯಾವುದು ಉತ್ತಮ?
ಸಮಾಜದ ಅಧ್ಯಕ್ಷ ಕಲ್ಕೆರೆ ಶೇಖರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾಜದ ಮುಖಂಡರಾದ ಕೋಡಿಹಳ್ಳಿ ತಮ್ಮಣ್ಣ, ಕೋಡಿಹಳ್ಳಿ ಧರಣಪ್ಪ, ನಿವೃತ್ತ ಶಿಕ್ಷಕರಾದ ತಿಪ್ಪೇಸ್ವಾಮಿ, ಬಸವಲಿಂಗಪ್ಪ, ಮಾಚೇನಹಳ್ಳಿ ಬಸಣ್ಣ, ತಣಿಗೇಕಲ್ಲು ಲೋಕಣ್ಣ, ಗುಳಿಹಟ್ಟಿ ಹಾಲಸಿದ್ದಪ್ಪ, ಮಣಿಕಂಠ, ಮಂಜು, ಅಯ್ಯನಳ್ಳಿ ದೇವರಾಜ್, ಸಂಗೇನಹಳ್ಳಿ ಮಹೇಶ್, ಶಿಕ್ಷಕ ಅಶೋಕ್ ಇದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
