
CHITRADURGA NEWS | 08 OCTOBER 2025
ಚಿತ್ರದುರ್ಗ: ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಧವಳಗಿರಿ ಬಡಾವಣೆಯಲ್ಲಿ ನಿರ್ಮಿಸುತ್ತಿರುವ ರಜತ ಭವನ ಹಾಗೂ ರಜತ ಮಹೋತ್ಸವ ಸಮಿತಿಗೆ ಅಧ್ಯಕ್ಷರನ್ನಾಗಿ ಉದ್ಯಮಿ ಜೆ.ಎಂ.ಜಯಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಯುವತಿ ನಾಪತ್ತೆ | ಪತ್ತೆಗೆ ಭರಮಸಾಗರ ಪೊಲೀಸರ ಮನವಿ
ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಂಸ್ಥಾಪಕ ಅಧ್ಯಕ್ಷರಾಗಿರುವ ಜೆ.ಎಂ.ಜಯಕುಮಾರ್ ಅವರಿಗೆ ಆಯ್ಕೆಯ ಆದೇಶ ಪತ್ರವನ್ನು ಸೊಸೈಟಿಯ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ನಿರ್ದೆಶಕರ ಸಮ್ಮುಖದಲ್ಲಿ ನೀಡಲಾಯಿಗಿಎ ಎಂದು ಅಧ್ಯಕ್ಷರಾದ ಪಟೇಲ್ ಶಿವಕುಮಾರ್ ತಿಳಿಸಿದ್ದಾರೆ.
ನಿಮ್ಮ ಅವಧಿಯಲ್ಲಿ ಸೊಸೈಟಿಯು ಸ್ವಂತ ಕಟ್ಟಡ ಹೊಂದಿದೆ. ಧವಳಗಿರಿ ಬಡಾವಣೆಯಲ್ಲಿ ಸೊಸೈಟಿಯಿಂದ ಸಮುದಾಯಭವನ ನಿರ್ಮಿಸುವ ದೂರದೃಷ್ಠಿಯಿಂದ ಚಿತ್ರದುರ್ಗ ನಗರಾಭಿವೃಧಿ ಪ್ರಾಧಿಕಾರದಿಂದ ನಿವೇಶನವನ್ನೂ ತಮ್ಮ ಅಧಿಕಾರಾವಧಿಯಲ್ಲಿ ಖರೀಧಿಸಲಾಗಿದೆ.
ಸದರಿ ನಿವೇಶನದಲ್ಲಿ ಸೊಸೈಟಿಯು ರಜತ ಮಹೋತ್ಸವದ ಸವಿನೆನಪಿಗಾಗಿ ʼರಜತ ಭವನʼವನ್ನು ನಿರ್ಮಿಸಲು ಮುಂದಾಗಿದ್ದು, ಇದು ತಮ್ಮ ಅಧ್ಯಕ್ಷತೆಯಲ್ಲಿ ಆಗಬೇಕು ಎಂದು ಆಡಳಿತ ಮಂಡಲಿಯ ಮಾಸಿಕ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ಚನ್ನಬಸಪ್ಪ ಕಾಂಪೌಂಡ್ ನಿವಾಸಿ ಗಗನ್ ಪಟೇಲ್ ನಿಧನ
ಈ ಸಂದರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷ ಜಿ.ಟಿ.ಸುರೇಶ್, ನಿರ್ದೇಶಕರಾದ ಎಸ್.ಪರಮೇಶ್ವರಪ್ಪ, ಟಿ.ಮಹಾಂತೇಶ್, ಎಸ್.ವಿ.ನಾಗರಾಜಪ್ಪ, ಎಸ್. ಷಣ್ಮುಖಪ್ಪ (ಕೆ.ಇ.ಬಿ.) ಡಿ.ಎಸ್.ಮಲ್ಲಿಕಾರ್ಜನ್, ಬಿ.ಎಂ.ಕರಿಬಸವಯ್ಯ, ಸಿ.ಚಂದ್ರಪ್ಪ, ಜಯಶ್ರೀ, ಶೈಲಜಾ ಬಾಬು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
