
CHITRADURGA NEWS | 08 OCTOBER 2025
ಚಿತ್ರದುರ್ಗ: ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಅವರನ್ನು ಒಂದು ಜಾತಿಗೆ ಸೀಮಿತ ಮಾಡದಿರಿ ಎಂದು ಬಿಜೆಪಿ ರಾಜ್ಯ ಎಸ್.ಟಿ.ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪಾಪೇಶ್ ನಾಯಕ್ ತಿಳಿಸಿದರು.
ಇದನ್ನೂ ಓದಿ: ಯುವತಿ ನಾಪತ್ತೆ | ಪತ್ತೆಗೆ ಭರಮಸಾಗರ ಪೊಲೀಸರ ಮನವಿ

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ರಾಜಕಾರಣದ ಜೊತೆಗೆ ರಾಜಕೀಯ ಬೆರೆತು ಹೋಗಿದೆ. ಆದರೆ, ಜಾತಿ ರಾಜಕಾರಣ ತುಂಬಾ ದಿನ ಉಳಿಯುವುದಿಲ್ಲ. ಅಧಿಕಾರ ಸಿಕ್ಕಿದಾಗ ಮಾಡುವ ಕೆಲಸಗಳು ಮಾತ್ರ ಶಾಶ್ವತ ಎಂದರು.
ಮಹಾತ್ಮಾ ಗಾಂಧೀಜಿ ರಾಜಕೀಯ ವ್ಯಕ್ತಿಲ್ಲ. ಅವರು ನೂರಕ್ಕೆ ನೂರು ಭಾಗ ಆಧ್ಯಾತ್ಮಿಕ ವ್ಯಕ್ತಿ. ರಾಮರಾಜ್ಯದ ಕನಸು ಕಂಡಂತಹ ಮಹಾನ್ ವ್ಯಕ್ತಿಯನ್ನು ಸ್ಮರಿಸುವುದು ಅತ್ಯಶ್ಯಕ. ರಾಮಾಯಣವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದವರಿಗೆ. ಸ್ವಲ್ಪಮಟ್ಟಿಗಾದರೂ ಧ್ಯಾನ ಯೋಗ ಮೊದಲಾದ ಸಾಧನೆಗಳ ಬಗ್ಗೆ ತಿಳಿಯುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯಲ್ಲಿ 112 ಹೊಸ ಮತಗಟ್ಟೆಗಳ ಸ್ಥಾಪನೆಗೆ ಶಿಫಾರಸ್ಸು | ಬಿ.ಟಿ. ಕುಮಾರಸ್ವಾಮಿ
ಬಿಜೆಪಿ ಮುಖಂಡರಾದ ಪ್ರಸಾದ್ ಬಾಬು, ಚಿನ್ನಪ್ಪ, ಸಂಪತ್ ಕುಮಾರ್, ಮಾಧುರಿ ಗೀರಿಶ್, ಲೋಕೇಶ್, ನಾಗರಾಜ್ ಕೆ. ಕವನ ರಾಘವೇಂದ್ರ, ನಾಗರಾಜ್ ಬೇದ್ರೇ, ಸೂರೇನಹಳ್ಳಿ ನಾಗರಾಜ್, ಸೋಮು, ಪ್ರಕಾಶ್ ರೆಡ್ಡಿ, ರಮೇಶ್, ಲೀಲಾವತಿ, ಭಾರತಿ, ಕವಿತ, ಸುಮಾ, ಕಂಚನ, ಕವಿತ ಜವಳಿ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
