
CHITRADURGA NEWS | 18 JUNE 2024
ಹೊಸದುರ್ಗ: ಜಿಲ್ಲೆಯ ಪ್ರಸಿದ್ಧ ದೇವಸ್ಥಾನ ಶ್ರೀ ಹಾಲುರಾಮೇಶ್ವರದಲ್ಲಿ ಮಂಗಳವಾರ ತಡರಾತ್ರಿ ಕಳ್ಳತನ ನಡೆದಿದೆ.
ಹಾಲುರಾಮೇಶ್ವರದಲ್ಲಿರುವ ಶ್ರೀ ಗಂಗಾ ಮಾತೆ ದೇಗುಲದ ಹುಂಡಿಯಲ್ಲಿದ್ದ ಹಣ ಕಳ್ಳತನ ನಡೆದಿದೆ. ಹಣ ದೋಚಿ ಹುಂಡಿಯನ್ನು ದೇವಸ್ಥಾನದ ಹೊರಗೆ ಎಸೆದು ಹೋಗಿದ್ದಾರೆ.

ಇದನ್ನೂ ಓದಿ: ರೇಣುಕಸ್ವಾಮಿ ಮೈಮೇಲಿದ್ದ ಕರಡಿಗೆ ಸುಳಿವು | ಆಟೋ, ಕಾರು ಕೂಡಾ ಜಪ್ತಿ
ದೇಗುಲದ ಮುಖ್ಯ ದ್ವಾರ ಹಾಗೂ ಗರ್ಭ ಗುಡಿಯ ಬಾಗಿಲಿನ ಬೀಗ ಹೊಡೆಯಲಾಗಿದೆ.
ಸಿಮೆಂಟ್ ಕಾಂಕ್ರೀಟ್ ಹಾಕಿ ಹುಂಡಿ ಇಡದೇ ಹಾಗೇ ಮಣ್ಣಿನಲ್ಲಿ ಹೂತಿಟ್ಟು ಹೋಗಲಾಗುತ್ತಿತ್ತು. ಅದನ್ನು ಹೊಡೆದು ಸುಮಾರು 2 ಲಕ್ಷಕ್ಕಿಂತ ಹೆಚ್ಚು ಹಣ ಕಳುವು ಮಾಡಲಾಗಿದೆ ಎಂದು ಭಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ: ಸಿರಿಗೆರೆ ಮಠಕ್ಕೆ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಭೇಟಿ
ನೋಟುಗಳನ್ನು ಕಳ್ಳತನ ಮಾಡಿದ್ದು, ಸುಮಾರು 2 ಕೆಜಿಯಷ್ಟು ಚಿಲ್ಲರೆ ಹಣವನ್ನು ಅಲ್ಲಿಯೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಪೊಲೀಸ್ ಇನ್ಸ್‍ಪೆಕ್ಟರ್ ತಿಮ್ಮಣ್ಣ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಸಿ.ಸಿ.ಕ್ಯಾಮರಾ ಸರಿ ಮಾಡಿಸದೆ ನಿರ್ಲಕ್ಷ್ಯ:
ಮುಜುರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಸ್ಥಾನಕ್ಕೆ ಸಿ.ಸಿ.ಕ್ಯಾಮರಾ ಅಳವಡಿಸಿದ್ದರೂ ರಿಪೇರಿ ಮಾಡಿಸದ ಕಾರಣ ಪದೇ ಪದೇ ಕಳ್ಳತನ ನಡೆಯುತ್ತಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ನಿವಾಸಕ್ಕೆ ಬಿ.ವೈ.ವಿಜಯೇಂದ್ರ ಭೇಟಿ
ಕಳೆದ ವರ್ಷ ಕೂಡಾ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದರೂ ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಪದೇ ಪದೇ ಕಳುವು ನಡೆಯುತ್ತಿದೆ. ಈ ಹಿಂದೆ ದೇವಸ್ಥಾನದಲ್ಲಿದ್ದ ಬಸವಣ್ಣನ ವಿಗ್ರಹವೊಂದು ಕಳ್ಳತನವಾಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
