
CHITRADURGA NEWS | 18 JUNE 2024
ಚಿತ್ರದುರ್ಗ: ಪುತ್ರ ರೇಣುಕಸ್ವಾಮಿ ಕೊಲೆ ಹಿನ್ನೆಲೆಯಲ್ಲಿ ಅವರ ತಂದೆ ಶಿವಣ್ಣಗೌಡರನ್ನು ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಕರೆಯಿಸಿಕೊಂಡು ಮಾಹಿತಿ ಪಡೆದುಕೊಂಡಿದ್ದಾರೆ.
ಶುಕ್ರವಾರವೇ ಬೆಂಗಳೂರಿಗೆ ಹೋಗಿ ಬಂದಿರುವ ಶಿವಣ್ಣ ಗೌಡರು, ನಿಮ್ಮ ಭುಜದ ಮೇಲಿರುವ ಸ್ಟಾರ್ ಹಾಗೂ ಕುರ್ಚಿಗೆ ಗೌರವ ಕೊಡುತ್ತೇನೆ. ದಯವಿಟ್ಟು ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಸ್ವಾಮಿ ಎಂದು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ನಿವಾಸಕ್ಕೆ ಬಿ.ವೈ.ವಿಜಯೇಂದ್ರ ಭೇಟಿ
ಇದೇ ವೇಳೆ ಪೊಲೀಸರು, ನಿಮ್ಮ ಮಗ ಮನೆಯಿಂದ ಹೊರಟಾಗ ಅವನ ಮೈಮೇಲೆ ಏನೇನಿತ್ತು ಎನ್ನುವ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಶಿವಣ್ಣಗೌಡರು, ಬಂಗಾರದ ಸರ, ಉಂಗುರ, ಇಷ್ಟಲಿಂಗ ಧರಿಸುವ ಬೆಳ್ಳಿ ಕರಡಿಗೆ ಬಗ್ಗೆ ತಿಳಿಸಿದ್ದಾರೆ.
ಈ ಮಾಹಿತಿಯ ಜಾಡು ಹಿಡಿದ ಪೊಲೀಸರು, ಮೃತ ರೇಣುಕಸ್ವಾಮಿ ಮೈಮೇಲಿದ್ದ ಆಭರಣ ಎಲ್ಲಿ ಹೋಯಿತು ಎಂದು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಚಿತ್ರದುರ್ಗದ ನಾಲ್ವರು ಆರೋಪಿಗಳನ್ನು ಎರಡನೇ ಬಾರಿಗೆ ಚಿತ್ರದುರ್ಗಕ್ಕೆ ಮಹಜರ್ ನಡೆಸಲು ಕರೆತಂದಿದ್ದು, ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಮನೆಯಲ್ಲಿ ತಲಾಶ್ ನಡೆಸಿದಾಗ ಚಿನ್ನಾಭರಣಗಳು ಸಿಕ್ಕಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸಿರಿಗೆರೆ ಮಠಕ್ಕೆ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಭೇಟಿ
ಇದೇ ವೇಳೆ ಐನಹಳ್ಳಿ ಕುರುಬರಹಟ್ಟಿಯ ಇಟಿಯೋಸ್ ಕಾರು ಚಾಲಕ ರವಿ ಮನೆಗೂ ಪೊಲೀಸರು ತೆರಳಿದ್ದು, ಕಾರಿನ ಇಂಚಿಂಚೂ ಮಾಹಿತಿ ಸಂಗ್ರಹಿಸಿ, ಕಾರನ್ನು ಜಪ್ತಿ ಮಾಡಿಕೊಂಡು ಹೋಗಿದ್ದಾರೆ.
ಚಿತ್ರದುರ್ಗ ನಗರದಿಂದ ಜಗಳೂರು ಮಹಾಲಿಂಗಪ್ಪ ಪೆಟ್ರೋಲ್ ಬಂಕ್‍ವರೆಗೆ ರೇಣುಕಸ್ವಾಮಿಯನ್ನು ಕರೆದೊಯ್ದಿದ್ದ ಜಗದೀಶನ ಆಟೋ ಕೂಡಾ ಜಪ್ತಿಯಾಗಿದೆ. ಬುರುಜನಹಟ್ಟಿಯ ಅನುಕುಮಾರ್ ಮನೆಯಲ್ಲೂ ಪೊಲೀಸ್ ಮಹಜರ್ ನಡೆಸಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ನಿವಾಸಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ಇಂದು
ಒಟ್ಟಾರೆ ದಿನೇ ದಿನೇ ರೇಣುಕಸ್ವಾಮಿ ಕೊಲೆ ಪ್ರಕರಣ ರೋಚಕ ತಿರುವು ಪಡೆಯುತ್ತಿದ್ದು, ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವ ಕುತೂಹಲ ಮನೆ ಮಾಡಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
