ಮುಖ್ಯ ಸುದ್ದಿ
ಬರಿದಾಗುತ್ತಿದೆ ಸೂಳೆಕೆರೆ | 10 ಅಡಿಗೆ ಕುಸಿದ ನೀರಿನ ಮಟ್ಟ | ಜಲ ಕಂಟಕದ ಆತಂಕ

CHITRADURGA NEWS | 16 FEBRUARY 2024
ಚಿತ್ರದುರ್ಗ: ಬೇಸಿಗೆ ಆರಂಭದಲ್ಲೇ ಜಲ ಕಂಟಕ ಎದುರಾಗುವ ಲಕ್ಷಣಗಳು ಸ್ಪಷ್ಟವಾಗುತ್ತಿದ್ದು, ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗುವ ಕಾಲ ಸನಿಹವಾಗಲಿದೆ. ಚಿತ್ರದುರ್ಗಕ್ಕೆ ಕುಡಿಯುವ ನೀರಿನ ಆಸರೆಯಾಗಿರುವ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯ ನೀರಿನ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಕೊಡುಗೆ ಎಷ್ಟು ?
ಮಳೆಯ ಪ್ರಮಾಣ ಕುಗ್ಗಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದಂತೆಯೇ ಕೆರೆಗಳು ಬರಿದಾಗುತ್ತಿವೆ. ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆಯೆನ್ನಿಸಿರುವ ಸೂಳೆಕೆರೆಯಲ್ಲೂ ನೀರಿನ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ.

ಇದನ್ನೂ ಓದಿ: 12 ಪೆಟ್ಟಿಗೆ ದೇವರುಗಳ ಗುಗ್ಗರಿ ಹಬ್ಬ ಮಹೋತ್ಸವ | ಮೂರು ದಿನ ಸಂಭ್ರಮ
ಪ್ರಸ್ತುತ ಸೂಳೆಕೆರೆಯ ನೀರಿನ ಮಟ್ಟ 10.5 ಅಡಿಗೆ (ಗರಿಷ್ಠ ಮಟ್ಟ 27 ಅಡಿ) ತಲುಪಿರುವುದರಿಂದ ಈಗಾಗಲೇ ಕೆರೆಯ ಪಾತ್ರದಲ್ಲಿರುವ ಹಳ್ಳಿಗಳಲ್ಲಿ ನೀರು ಬರಿದಾಗಿ ನೆಲ ಕಾಣಿಸುತ್ತಿದೆ. ಸದಾ ಜಲರಾಶಿಯಿಂದ ನಳನಳಿಸುತ್ತಿದ್ದ ಸೂಳೆಕೆರೆ ನೀರಿಲ್ಲದೇ ಭಣಗುಡುತ್ತಿದೆ. ಕೆರೆ ನೀರನ್ನು ನಂಬಿಕೊಂಡಿರುವ ಮೀನುಗಾರರು, ಹಲವು ಗ್ರಾಮಗಳ ರೈತರು ಚಿಂತೆಗೀಡಾಗಿದ್ದಾರೆ.

ಇದನ್ನೂ ಓದಿ: ಹಿರಿಯೂರು ಜನತೆಗೆ ಗುಡ್ ನ್ಯೂಸ್ | 16 ರಿಂದ ಇ-ಆಸ್ತಿ ಖಾತಾ ಆಂದೋಲನ
ರೈತರು ಟ್ಯಾಂಕರ್‌ಗಳ ಮೂಲಕ ನೀರು ಹಾಯಿಸಿ ತೋಟಗಳನ್ನು ಉಳಿಸಿಕೊಳ್ಳಲು ಸಿದ್ಧತೆ ಪ್ರಾರಂಭಿಸಿದ್ದಾರೆ. ಇಂಥದ್ದೇ ಪರಿಸ್ಥಿತಿ 5 ವರ್ಷಗಳ ಹಿಂದೆ ಉಂಟಾಗಿತ್ತು. ಈ ಬಾರಿ ಮುಂಗಾರು ಹಾಗೂ ಹಿಂಗಾರು ಕೈಕೊಟ್ಟಿದ್ದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.
ಸಂಕ್ರಾಂತಿ ಹಬ್ಬದ ನಂತರ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ನೀರಿನ ಮಟ್ಟ ಕುಸಿಯುತ್ತಿದೆ. ಕೊಳವೆಬಾವಿಗಳಲ್ಲೂ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ.
ಕೆರೆಯ ನೀರಿನ ಸಂಗ್ರಹದಿಂದ ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳಿಗೆ ಮುಂದಿನ 60 ದಿನ ಮಾತ್ರ ನೀರು ಪೂರೈಸಬಹುದು ಎನ್ನುತ್ತಾರೆ ತ್ಯಾವಣಿಗೆ ಭದ್ರಾ ನೀರಾವರಿ ಇಲಾಖೆಯ ಎಇಇ ಎಚ್. ತಿಪ್ಪೇಸ್ವಾಮಿ.
