
CHITRADURGA NEWS | 26 APRIL 2024
ಚಿತ್ರದುರ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಚುನಾವಣೆ ಹಾಗೂ ಮತದಾನ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಮತದಾನದ ಮೂಲಕ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವುದು ಪ್ರತಯೊಬ್ಬ ಪ್ರಜೆಯ ಜವಾಬ್ದಾರಿ.
ಆದರೆ, ಬಹುತೇಕರು ಮತದಾನದಿಂದ ದೂರ ಉಳಿಯಲು ಕಾರಣ ಹುಡುಕುವ ಸ್ಥಿತಿಗೆ ಬಂದಿದ್ದಾರೆ. ಚುನಾವಣೆ ಸಿಗುವ ರಜೆ ಮೋಜು, ಮಸ್ತಿಗೆ ಬಳಕೆ ಆಗುತ್ತದೆ.

ಇದನ್ನೂ ಓದಿ: KAS ಪರೀಕ್ಷೆಗೆ ಉಚಿತ ತರಬೇತಿ
ಆದರೆ, ಇದಕ್ಕೆ ಭಿನ್ನ ಎಂಬಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಎರಡನೇ ಹಂತದ ಚುನಾವಣೆ ಏ.26 ರಂದೇ ಮದುವೆ ಇದ್ದರೂ, ಮಾಂಗಲ್ಯ ಧಾರಣೆ ನಂತರ ಮದುವೆ ಮಂಟಪದಿಂದ ಸೀದಾ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ಎರಡು ಜೋಡಿಗಳು ತಮ್ಮ ಜವಾಬ್ದಾರಿ ಮೆರೆದಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಇಂದು ದಾಂಪತ್ಯಕ್ಕೆ ಪದಾರ್ಪಣೆ ಮಾಡಿದ ರಂಗಸ್ವಾಮಿ ಹಾಗೂ ಅಂಬಿಕಾ ಭೀಮಸಮುದ್ರದ ಮತಗಟ್ಟೆ ಸಂಖ್ಯೆ 268ಕ್ಕೆ ಆಗಮಿಸಿ ಮತದಾನ ಮಾಡಿದ್ದಾರೆ.
ಇದನ್ನೂ ಓದಿ: ಶುರುವಾಯ್ತು ಮತದಾನ ಸಂಭ್ರಮ | ಮತಗಟ್ಟೆಗಳತ್ತ ಮತದಾರನ ಹೆಜ್ಜೆ
ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಒಂದೇ ಮತಗಟ್ಟೆಯಲ್ಲಿ ಮತದಾನ ಮಾಡಿರುವುದು ವಿಶೇಷವಾಗಿದೆ.
ವಿಜಾಪುರದಲ್ಲೂ ಅರುಣ್-ಕಾವ್ಯಾ ಮತದಾನ:
ಇನ್ನೂ ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸಮೀಪದ ವಿಜಾಪುರದಲ್ಲಿ ಇಂದು ಮದುವೆಯಾದ ಅರುಣ್ ಮತ್ತು ಕಾವ್ಯಾ ಕೂಡಾ ವಿಜಾಪುರದ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.
ಇದನ್ನೂ ಓದಿ: ಹೃದಯಾಘಾತದಿಂದ ಮತಗಟ್ಟೆ ಅಧಿಕಾರಿ ಸಾವು
ಮಾಂಗಲ್ಯಸೂತ್ರ ಧಾರಣೆಯ ನಂತರ ವಿಜಾಪುರದ ಮತಗಟ್ಟೆ ಸಂಖ್ಯೆ 13ಕ್ಕೆ ತೆರಳಿ ಸರತಿ ಸಾಲಿನಲ್ಲಿ ನಿಂತು ಇಬ್ಬರೂ ತಮ್ಮ ಮತ ಚಲಾಯಿಸಿದ್ದಾರೆ.
ಇಲ್ಲಿಯೂ ಅರುಣ್ ಮತ್ತು ಕಾವ್ಯಾ ಇಬ್ಬರೂ ವಿಜಾಪುರ ಗ್ರಾಮದವರಾಗಿದ್ದು, ಒಂದೇ ಮತಗಟ್ಟೆಯಲ್ಲಿ ಮತ ಚಲಾಯಿಸಿರುವುದು ವಿಶೇಷವಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
