
CHITRADURGA NEWS | 26 August 2025
ಚಿತ್ರದುರ್ಗ: ದೇಶಾದ್ಯಂತ ಸಂಚಲನ ಮೂಡಿಸಿರುವ ಹಿಂದೂ ಮಹಾಗಣಪತಿ ಉತ್ಸವದ ಸಿದ್ಧತೆ ಭರದಿಂದ ಸಾಗಿದೆ. ಈ ನಡುವೆ ಎರಡು ದಿನ ಮೊದಲೇ ಹಿಂದೂ ಮಹಾಗಣಪ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದ್ದಾನೆ.
ಇದನ್ನೂ ಓದಿ: ಹೊಸದುರ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ | ಬೈಕ್ ಕಳ್ಳರ ಬಂಧನ | 11 ಬೈಕ್ ವಶಕ್ಕೆ

ಸಂಜೆ ೪ ಗಂಟೆಗೆ ಆಗಮಿಸಬೇಕಿದ್ದ ಗಣಪ, ತಡವಾಗಿ ನಡುರಾತ್ರಿ 2 ಗಂಟೆ ವೇಳೆಗೆ ಪುರಪ್ರವೇಶ ಮಾಡಲಾಯಿತು.ನಗರದ ಚಳ್ಳಕೆರೆ ಗೇಟ್ ಬಳಿ ಹಿಂದೂ ಸಂಘಟನೆಗಳ ನೂರಾರು ಕಾರ್ಯಕರ್ತರು ಜಮಾಯಿಸಿ ಪಟಾಕಿ ಸಿಡಿಸಿ, ಪೂಜೆ ಸಲ್ಲಿಸಿ ಸ್ವಾಗತಿಸಿದರು.
ಇಲ್ಲಿಂದ ಮೆರವಣಿಗೆ ಮೂಲಕ ನೇರವಾಗಿ ಹಿಂದೂ ಮಹಾಗಣಪತಿ ಪೆಂಡಾಲ್ ಬಳಿಗೆ ಗಣಪತಿ ತೆಗೆದುಕೊಂಡು ಹೋಗಲಾಯಿತು.
ಪ್ರತಿ ವರ್ಷ ಗಣಪತಿಯನ್ನು ಮಾದಾರ ಚನ್ನಯ್ಯ ಗುರುಪೀಠಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ ನಂತರ ಪೆಂಡಾಲ್ ಗೆ ತರಲಾಗುತ್ತಿತ್ತು.ಆದರೆ, ಈವರ್ಷ ಗಣಪತಿ ಎತ್ತರ ಹಾಗೂ ತಡರಾತ್ರಿ ಕಾರಣಕ್ಕೆ ಮಠಕ್ಕೆ ತೆಗೆದುಕೊಂಡು ಹೋಗಲಿಲ್ಲ ಎನ್ನಲಾಗಿದೆ.
ವಿಷ್ಣುರೂಪಿ ಹಿಂದೂ ಮಹಾಗಣಪ:
ಈ ವರ್ಷದ ಹಿಂದೂ ಮಹಾಗಣಪತಿ ವಿಷ್ಣು ರೂಪವನ್ನು ಹೋಲುತ್ತಿದೆ. ಕೈಯಲ್ಲಿ ಕಮಲ, ಶಂಕ, ಸುದರ್ಶನ ಚಕ್ರ, ಗದೆಗಳಿವೆ. ಎದ್ದು ನಿಂತಿರುವ ಗಣಪನ ಎತ್ತರವೇ ಈ ವರ್ಷ ಹದಿನೇಳುವರೆ ಅಡಿ ಇದೆ. ಇದರೊಟ್ಟಿಗೆ ಪ್ರಭಾವಳಿ ಸೇರಿದರೆ ಇನ್ನೂ ಎರಡು ಅಡಿಯಷ್ಟು ಎತ್ತರ ಆಗಲಿದೆ.
ಇದನ್ನೂ ಓದಿ: ದಿನ ಭವಿಷ್ಯ | ಆಗಸ್ಟ್ 26 |ಉದ್ಯೋಗಿಗಳಿಗೆ ಬಡ್ತಿ, ಆರ್ಥಿಕ ಪ್ರಗತಿ, ಹಠಾತ್ ಪ್ರಯಾಣ ಸೂಚನೆ
ಈ ವೇಳೆ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷರಾದ ಶರಣ್ ಕುಮಾರ್, ಬಹರಂಗದಳದ ಪ್ರಭಂಜನ್, ಕೇಶವ, ಸಂದೀಪ್, ಅಶೋಕ್, ನಾಗೇಶ್, ಸಂದೀಪ್ ಸೇರಿದಂತೆ ಸಂಘ ಪರಿವಾರದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
