
CHITRADURGA NEWS | 18 OCTOBER 2025
ಚಿತ್ರದುರ್ಗ: ಆರೋಗ್ಯ ಕ್ಷೇತ್ರ ಇಂದು ದೊಡ್ಡ ಮಾಫಿಯವಾಗಿದೆ. ದುಡ್ಡಿದ್ದವರಿಗೆ ಮಾತ್ರ ಆರೋಗ್ಯ ಎನ್ನುವ ವಾತಾವರಣ ಸೃಷ್ಟಿಯಾಗಿದೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ಅಕ್ಟೋಬರ್ 18 | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್

ಧನ್ವಂತರಿ ಜಯಂತಿ ಅಂಗವಾಗಿ ತಾಲೂಕಿನ ಮದೇಹಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಔಷಧಿ ಸಸ್ಯಗಳ ಪ್ರಾತ್ಯಕ್ಷತೆ ಹಾಗೂ ಉಪಯೋಗದ ಕುರಿತು ನುರಿತ ಪಾರಂಪಕರಿಕ ವೈದ್ಯರಿಂದ ಶನಿವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ,
ಇಂದು ಆಸ್ಪತ್ರೆಗಳು ವ್ಯವಹಾರಿಕವಾಗಿವೆ. ಆರೋಗ್ಯದಲ್ಲಿ ವ್ಯವಹಾರ ಬೇಡ. ಬಾಬಾಸಾಹೇಬ ಡಾ.ಅಂಬೇಡ್ಕರ್‌ರ ಪರಿಕಲ್ಪನೆ ಈ ದೇಶದ ನೆಲ, ಜಲ, ಆರೋಗ್ಯ ಮತ್ತು ಶಿಕ್ಷಣ ರಾಷ್ಟಿçÃಕರಣ ಆಗಬೇಕು, ಉಚಿತ ಆಗಬೇಕು. ಅಂದಾಗ ಮಾತ್ರ ನಮ್ಮ ದೇಶವನ್ನು ಇನ್ನಷ್ಟು ಸಮೃದ್ಧದೆಡೆಗೆ ತೆಗೆದುಕೊಂಡು ಹೋಗಲು ಸಹಕಾರಿ ಆಗಲಿದೆ ಎಂದರು.
ವಿದ್ಯಾಭ್ಯಾಸ ಹಾಗೂ ಆರೋಗ್ಯ ಈ ಎರಡು ವಿಚಾರಗಳಿಗೆ ಜನರು ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ, ಸಾಲ ಮಾಡಿಯಾದರೂ ಚಿಕಿತ್ಸೆಗೆ ಹಣ ಖರ್ಚು ಮಾಡುತ್ತಾರೆ. ಆದರೆ ಇಂದು ಚಿಕ್ಕ ಕಾಯಿಲೆಗೂ ರಕ್ತ ಪರೀಕ್ಷೆ, ಎಕ್ಸರೆ, ಎಂಆರ್‌ಐ, ಸಿಟಿ ಸ್ಕ್ಯಾನಿಂಗ್ ಸೇರಿದಂತೆ ಮತ್ತಿತರ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ. ಆದರೆ ಹಿಂದೆ ನಮ್ಮ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ನಾಡಿ ನೋಡಿ ಏನು ಕಾಯಿಲೆ ಎಂದು ಹೇಳುತ್ತಿದ್ದರು.
ಇದನ್ನೂ ಓದಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ | ಚಿತ್ರದುರ್ಗ ಜಿಲ್ಲೆಗೆ 4ನೇ ಸ್ಥಾನ | ಜಿಲ್ಲಾಧಿಕಾರಿ ಅಭಿನಂದನೆ
ಯಾವುದೇ ದುಂದು ವೆಚ್ಚವಿಲ್ಲದೆ ಸಮಾಜಕ್ಕೆ ಆರೋಗ್ಯಕರ ವ್ಯಕ್ತಿಗಳ ಮೂಲಕ ಸಮಾಜವನ್ನು ಆರೋಗ್ಯಕರವಾಗಿಟ್ಟಿದ್ದು ಎಂದರೆ ಪಾರಂಪರಿಕ ವೈದ್ಯರು ಎಂದು ತಪ್ಪಾಗಲಿಕ್ಕಿಲ್ಲ, ಅಂತಹ ಪಾರಂಪರಿಕ ವೈದ್ಯರಿಗೆ ನೂರಾರು ಕಷ್ಟಗಳಿವೆ. ಸರಕಾರ ಅವರನ್ನು ಗುರುತಿಸಬೇಕಿದೆ.
ಕೆಲವರು ನಕಲಿ ಪಾರಂಪರಿಕ ವೈದ್ಯರಿಂದ ನಿಜವಾದ ಪಾರಂಪರಿಕ ವೈದ್ಯರಿಗೆ ಧಕ್ಕೆಯಾಗುತ್ತಿದೆ. ಸರಕಾರ ಅರ್ಹರನ್ನು ಗುರುತಿಸಿ ಅವರಿಗೆ ಗೌರವ ಧನ ನೀಡಬೇಕು. ಮನೆ ಮದ್ದಿಗೆ ಹೆಚ್ಚು ಪ್ರೋತ್ಸಾಹ ನೀಡಿದರೆ ಆಸ್ಪತ್ರೆಗಳ ಸಂಖ್ಯೆ ಕಡಿಮೆಯಾಗಲಿವೆ ಎಂದು ಹೇಳಿದರು.
ಭಾರತದ ಆಹಾರ ಪದ್ಧತಿ ಮತ್ತು ಪರಿಸರ ಕೂಡ ಔಷಧೀಯ ಗುಣಗಳಿಂದ ತುಂಬಿದೆ. ಭಾರತದ ಪರಿಸರವೇ ಆರೋಗ್ಯ. ಭಾರತದ ನಿಜವಾದ ಆರೋಗ್ಯಧಾತರು ಪಾರಂಪರಿಕ ವೈದ್ಯರು ಎಂದರೆ ತಪ್ಪಾಗಲಾರದು. ಪಾರಂಪರಿಕ ಪದ್ಧತಿ ತಾಜಾ ಔಷಧಿ ಇದ್ದಂತೆ, ಹಾಗಾಗಿ ಪಾರಂಪರಿಕ ವೈದ್ಯರಿಗೆ ಆತ್ಮಸ್ಥೈರ್ಯ, ಭರವಸೆ ತುಂಬುವಂತಹ ಕೆಲಸ ಆಗಬೇಕಿದ್ದು ಆ ಪಾರಂಪರಿಕ ಪದ್ಧತಿಯ ಮಜಲುಗಳು ಅರಳುವಂತಾಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ರಾಜ್ಯದ ತಲಾ ಆದಾಯ ಹೆಚ್ಚಳ | ದಿನೇಶ್ ಗೂಳಿಗೌಡ
ಮೆದೇಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆರ್.ಪಾತಣ್ಣ ಮಾತನಾಡಿ, ವಂಶ ಪಾರಂಪರ್ಯವಾಗಿ ಬಂದಿರುವ ನಾಟಿ ವೈದ್ಯ ಪದ್ಧತಿ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದೆ, ಈ ಪದ್ಧತಿಯನ್ನು ಉಳಿಸಿ, ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ತಿಳಿಸಿದರು.
ಪಾರಂಪರಿಕ ವೈದ್ಯ ದಿನೇಶ್ ಅವರು ಔಷಧ ಸಸ್ಯಗಳಿಂದ ಉಂಟಾಗುವ ಪ್ರಯೋಜನಗಳ ಕುರಿತು ಮಾಹಿತಿ ಒದಗಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ್, ಮೆದೇಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿರಂಜನ್, ಸದಸ್ಯರು, ಕೃಷಿ, ತೋಟಗಾರಿಕೆ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು, ನಾನಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
