ಮುಖ್ಯ ಸುದ್ದಿ
ಚಿತ್ರದುರ್ಗದಲ್ಲಿ ‘ಕಾಗೆ ಕಾರುಣ್ಯದ ಕಣ್ಣು’ ಕೃತಿ ಲೋಕಾರ್ಪಣೆ | ಬರಗೂರು ರಾಮಚಂದ್ರಪ್ಪ ರಚಿಸಿರುವ ಕೃತಿಯ ಮೂರನೇ ಆವೃತ್ತಿ

CHITRADURGA NEWS | 20 FEBRUARY 2024
ಚಿತ್ರದುರ್ಗ: ನಗರದ ತರಾಸು ರಂಗಮಂದಿರದಲ್ಲಿ ಫೆಬ್ರವರಿ 22 ಗುರುವಾರ ಬೆಳಗ್ಗೆ 11 ಗಂಟೆಗೆ ಲೇಖಕ ಬರಗೂರು ರಾಮಚಂದ್ರಪ್ಪ ಅವರು ರಚಿಸಿರುವ ‘ಕಾಗೆ ಕಾರುಣ್ಯದ ಕಣ್ಣು’ ಕೃತಿಯ ಮೂರನೇ ಆವೃತ್ತಿ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಭೂಸೇನಾ ನೇಮಕಾತಿಗೆ ಅರ್ಜಿ ಆಹ್ವಾನ

ಚಿತ್ರದುರ್ಗದ ಗೆಳೆಯರ ಬಳಗದಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ರಾಜಪ್ಪ ದಳವಾಯಿ ಕೃತಿಯ ಜನಾರ್ಪಣೆ ಮಾಡುವರು. ಲೇಖಕಿ ಡಾ.ತಾರಿಣಿ ಶುಭದಾಯಿನಿ ಕೃತಿ ಕುರಿತು ಮಾತನಾಡುವರು.
ಅತಿಥಿಗಳಾಗಿ ಎಸ್‍ಆರ್‍ಎಸ್ ವಿದ್ಯಾಸಂಸ್ಥೆಯ ಮುಖ್ಯಸ್ಥ ಬಿ.ಎ.ಲಿಂಗಾರೆಡ್ಡಿ, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ.ವೀರೇಶ್, ಮಹಾರಾಣಿ ಕಾಲೇಜು ಮುಖ್ಯಸ್ಥರಾದ ಪ್ರೊ.ಸಂದೀಪ್, ಕಾಂಗ್ರೆಸ್ ಮುಖಂಡರಾದ ಮೆಹಬೂಬ್ ಪಾμÁ, ಜಿ.ಎಸ್.ಮಂಜುನಾಥ್, ಪಿ.ರಘು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಓ.ಪರಮೇಶ್ವರಪ್ಪ ಭಾಗವಹಿಸುವರು.

ಇದನ್ನೂ ಓದಿ: ಫೆಬ್ರವರಿ 20 ರಿಂದ 1 ತಿಂಗಳ ಕಾಲ ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು
ಕೃತಿಯ ಲೇಖಕ ಪ್ರೊ.ಬರಗೂರು ರಾಮಚಂದ್ರಪ್ಪ, ನಾಡೋಜ ಡಾ.ಬರಗೂರು ಪ್ರತಿμÁ್ಠನದ ಪ್ರಧಾನ ಕಾರ್ಯದರ್ಶಿ ಡಾ.ಸುಂದರರಾಜ ಅರಸು ವಿಶೇಷ ಉಪಸ್ಥಿತಿವಹಿಸುವರು.
ಕಾರ್ಯಕ್ರಮದ ಆಯೋಜಕರಾದ ಚಿಕ್ಕಪ್ಪನಹಳ್ಳಿ ಷಣ್ಮುಖ, ಡಾ.ಜೆ.ಕರಿಯಪ್ಪ ಮಾಳಿಗೆ, ಅಹೋಬಲಪತಿ, ಗೋವಿಂದಪ್ಪ ಗೌನಹಳ್ಳಿ, ಗೋಪಾಲಸ್ವಾಮಿ ನಾಯಕ, ವಿನಾಯಕ್ ತೊಡರನಾಳ್, ಸಿ.ರಾಜಶೇಖರ್ ಉಪಸ್ಥಿತರಿರುವರು ಎಂದು ಗೆಳೆಯರ ಬಳಗ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸುವುದು ಹೇಗೆ ಗೊತ್ತಾ
