
CHITRADURGA NEWS | 09 JULY 2026
ಚಿತ್ರದುರ್ಗ: ಅಡಿಕೆ ವಿಚಾರದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷರಾದ ಎಚ್.ಆರ್.ಬಸವರಾಜಪ್ಪ ಹಾಗೂ ಅಡಿಕೆ ವರ್ತಕರು ನನ್ನ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ನಾನು ಜಿಎಸ್ಟಿ ಇಲ್ಲದೆ, ಜೀರೋದಲ್ಲಿ ಅಡಿಕೆ ಸಾಗಾಣೆ ಮಾಡುತ್ತಿರುವ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದ ಕಾರಣಕ್ಕೆ ಟಾರ್ಗೆಟ್ ಮಾಡಲಾಗಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ತಿಳಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 09 | ಹತ್ತಿ ರೇಟ್ ಎಷ್ಟಿದೆ?
ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ26 ರಂದು ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಸವರಾಜಪ್ಪರವರು ನನ್ನ ಮೇಲೆ ಇಲ್ಲ-ಸಲ್ಲದೆ ಆರೋಪಗಳನ್ನು ಮಾಡಿದ್ಧಾರೆ, ಇದಕ್ಕೂ ನನಗೂ ಸಂಬಂಧ ಇಲ್ಲ ಎಂದರು.
ಜಿಲ್ಲೆಗೆ ಕೆಲವು ಅಡಿಕೆ ವರ್ತಕರು ಇಂಡೋನೇಷಿಯಾ, ಬರ್ಮ ಹಾಗೂ ವಿಜೋರಾಂನಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ತರಿಸಿಕೊಂಡು ಅದರಲ್ಲಿ ವಿಷ ಪೂರಿತವಾದ ರೆಡ್ ಆಕ್ಸೈಡ್ ಮಿಶ್ರಣ ಮಾಡಿ ನಮ್ಮ ಜಿಲ್ಲೆಯ ಗುಣಮಟ್ಟದ ಅಡಿಕೆಯ ಜೊತೆಯಲ್ಲಿ ಬೆರಸಿ ನಮ್ಮ ಸ್ಥಳೀಯ ಆಡಿಕೆ ರೀತಿಯಲ್ಲಿ ತಯಾರು ಮಾಡಿ ಒಂದು ಚೀಲಕ್ಕೆ ಅರ್ಧ ಚೀಲದಷ್ಟು ಬೆರಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಮ್ಮ ಜಿಲ್ಲೆಯಲ್ಲಿನ ಅಡಿಕೆಯ ದರ ಇಳಿಯುತ್ತಿದೆ. ಈ ವಿಚಾರವಾಗಿ ನಾನು ಹೋರಾಟ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಅಡಿಕೆಗಳನ್ನು ಕೆಲವು ಟ್ರಾನ್ಸ್ ಪೋರ್ಟ ಕಂಪನಿಗಳು ಉತ್ತರ ಭಾರತಕ್ಕೆ ಅಕ್ರಮವಾಗಿ ರಾಜ್ಯ ಮತ್ತು ಕೇಂದ ಸರ್ಕಾರಕ್ಕೆ ಶೇ.5 ಜಿ.ಎಸ್.ಟಿ. ಹಾಗೂ ಶೇ.15 ಎಪಿಎಂಸಿ ತೆರಿಗೆ ವಂಚಿಸಿ ಸಾಗಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಂಸದ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ಜುಲೈ 13 ರಂದು ದಿಶಾ ಸಭೆ
ಜೂ.24ರ ರಾತ್ರಿ ವಿದೇಶಿ ಅಡಿಕೆಯನ್ನು ಮಿಶ್ರಣ ಮಾಡಿ ಸಾಗಾಟ ಮಾಡುತ್ತಿದ್ದ ಲಾರಿಯ ಬಗ್ಗೆ ಮಾಹಿತಿ ಬಂದಾಗ ಅದನ್ನು ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಅಧಿಕಾರಿಗಳು ಲಾರಿಯ ಬಳಿಗೆ ಬಂದು ದಾಖಲೆಗಳನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ಗೊತ್ತಾಗಿ ಲಾರಿ ಸೀಜ್ ಮಾಡಿದ್ದಾರೆ. ಇದಾದ ಮೇಲೆ ನನಗೆ ಹಲವು ಬೆದರಿಕೆ ಕರೆಗಳು ಬಂದಿವೆ. ಈ ಬಗ್ಗೆ ಪೋಲಿಸರಿಗೆ ದೂರು ನೀಡಿದ್ದೇನೆ ಎಂದರು.
ಈ ಎಲ್ಲಾ ಪ್ರಕರಣಗಳ ನಂತರ ಅಡಿಕೆ ಸಾಗಾಣೆ ಮಾಡುವ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂದು ಆರೋಪಿಸಿ ನನ್ನ ಮೇಲೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದರು.
ಜಿಲ್ಲೆಗೆ ಬರುತ್ತಿರುವ ಅಕ್ರಮ ವಿದೇಶಿ ಅಡಿಕೆಯನ್ನು ನಿಲ್ಲಿಸಿ ನಮ್ಮ ಜಿಲ್ಲೆಯ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈ ಬಗ್ಗೆ ಹೋರಾಟ ನಡೆಸುತ್ತೇನೆ. ಮುಖ್ಯಮಂತ್ರಿಗಳ ಬಳಿಗೆ ನಿಯೋಗವನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ಉಲ್ಲಾಸ್ ತಿಳಿಸಿದರು.
ಇದನ್ನೂ ಓದಿ: ಮುಂಗಾರು ಬೆಳೆವಿಮೆ ನೋಂದಣಿ | ಜುಲೈ 15 ಕೊನೆದಿನ
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಮಹಮ್ಮದ್ ಅನೀಸ್ ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

