
CHITRADURGA NEWS | 09 JULY 2026
ಚಿತ್ರದುರ್ಗ: ನಗರದ ಶ್ರೀ ಸದ್ಗುರು ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೆ ಕಬೀರಾನಂದಶ್ರಮದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಅಕ್ಷರ ಅಭ್ಯಾಸ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಬೀರಾನಂದಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅಕ್ಷರ ಅಭ್ಯಾಸ ಮಾಡಿಸಿದರು.
ಇದನ್ನೂ ಓದಿ: ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರ | ಕಾರೇಹಳ್ಳಿ ಉಲ್ಲಾಸ್ ಸ್ಪಷ್ಟನೆ
ನಂತರ ಮಾತನಾಡಿದ ಶ್ರೀಗಳು, ಭೂಮಿಗೆ ಒಂದು ಬೀಜ ಬಿದ್ದರೆ ಅದು ಯಾವ ರೀತಿ ಬೆಳೆದು ಆಹಾರ ನೀಡುತ್ತದೆ, ಆದೇ ರೀತಿ ಮನಸ್ಸಿಗೆ ಅಕ್ಷರವನ್ನು ಬಿತ್ತಿದಾಗ ಅದು ಮುಂದೆ ಹೆಮ್ಮರವಾಗಿ ನಿಮ್ಮ ಮಕ್ಕಳನ್ನು ಕಾಪಾಡುತ್ತದೆ ಎಂದರು.
ಅಕ್ಷರ ಎಂದರೆ ಬರೀ ವರ್ಣಮಾಲೆ ಅಲ್ಲ, ಅದರೆ ಕ್ಷರ ಎಂದರೆ ನಾಶ, ಅಕ್ಷರ ಎಂದರೆ ನಾಶ ರಹಿತವಾದದು ಎಂದು ಅರ್ಥವನ್ನು ನೀಡುತ್ತದೆ. ಭೂಮಿಗೆ ಕಾಳನ್ನು ಬಿತ್ತಿದರೆ ಫಸಲನ್ನು ನೀಡುತ್ತದೆ ಅದೇ ರೀತಿ ಎದೆ ಅಥವ ಮನ ಎಂಬ ಭೂಮಿಗೆ ಅಕ್ಷರ ಎಂಬ ಕಾಳನ್ನು ಬಿತ್ತಿದರೆ ಅದು ಮುಂದೆ ಅವನ ಜೀವನವನ್ನು ಫಸಲಿನಂತೆ ಸಫಲವನ್ನು ಮಾಡುತ್ತದೆ. ಇದು ಆರಂಭಿಕವಾದ ಮೊದಲನೇ ಪೂಜೆಯಾಗಿದೆ.
ರೈತ ತನ್ನ ಭೂಮಿಯಲ್ಲಿ ಬಿತ್ತನೆಯನ್ನು ಮಾಡುವ ಮುನ್ನಾ ಭೂಮಿ ತಾಯಿಯನ್ನು ಪೂಜೆ ಮಾಡಿ ತದ ನಂತರ ಬಿತ್ತನೆಯನ್ನು ಮಾಡುತ್ತಾನೆ. ಅದೇ ರೀತಿ ಮಕ್ಕಳಿಗೆ ಅಕ್ಷರ ಎನ್ನುವಂತ ಬೀಜವನ್ನು ಬಿತ್ತುವ ಕೆಲಸವನ್ನು ಮಾಡಲಾಗಿದೆ. ಈ ರೀತಿಯಾಗಿ ಅಭ್ಯಾಸವನ್ನು ಮಾಡಿಸುವುದರ ಮೂಲಕ ಅವರ ಪ್ರಗತಿಗೆ ನೆರವಾಗಬೇಕಿದೆ ಎಂದರು.
ಇದನ್ನೂ ಓದಿ: ಸಂಸದ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ಜುಲೈ 13 ರಂದು ದಿಶಾ ಸಭೆ
ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಅಕ್ಷರ ಅಭ್ಯಾಸದಲ್ಲಿ ತೂಡಗಿದ್ದರು. ತಟ್ಟೆಯಲ್ಲಿ ಅಕ್ಕಿ ಹಾಕಿ ಹಣ್ಣು, ಹೂವು, ಎಲೆ, ಅಡಿಕೆ ಇಟ್ಟು ಅಕ್ಕಿಯಲ್ಲಿ ಮಕ್ಕಳಿಂದ ಶ್ರೀಗಳು ಅಕ್ಷರ ಅಬ್ಯಾಸವನ್ನು ಮಾಡಿಸಿದರು.
ಕಾರ್ಯಕ್ರದಲ್ಲಿ ಗಣಪತಿ ಶಾಸ್ತ್ರಿ, ಸಂಸ್ಕøತ ಶಿಕ್ಷಕರಾದ ಸುಬ್ರರಾಯ ಭಟ್ಟರು, ಆಂಗ್ಲ ಮಾಧ್ಯಮಾ ಶಿಕ್ಷಕರಾದ ಕರಿಷ್ಮ, ಸಹ ಶಿಕ್ಷಕರಾದ ಮಂಜುಳಾ ಸೇರಿದಂತೆ ಮಕ್ಕಳ ಪೋಷಕರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

