
CHITRADURGA NEWS | 10 July 2026
ಮೇಷ: (ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ)ಅನಿರೀಕ್ಷಿತ ಪ್ರಯಾಣಗಳನ್ನು ಕೈಗೊಳ್ಳಬೇಕಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಪಾಲುದಾರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗುವ ಸೂಚನೆಗಳಿರುವುದರಿಂದ ಹೊಂದಾಣಿಕೆಯಿಂದ ನಡೆದುಕೊಳ್ಳುವುದು ಉತ್ತಮ. ಖರ್ಚುಗಳು ಹೆಚ್ಚಾದರೂ ಅಗತ್ಯ ಸಮಯದಲ್ಲಿ ಹಣದ ಲಭ್ಯತೆ ಇರುತ್ತದೆ. ಅದೃಷ್ಟದ ದಿಕ್ಕು:ಪಶ್ಚಿಮ, ಅದೃಷ್ಟದ ಸಂಖ್ಯೆ: 9, ಅದೃಷ್ಟದ ಬಣ್ಣ: ಕೆಂಪು
ವೃಷಭ: (ಇ, ಓ, ಎ, ಒ, ವಾ, ವಿ, ವು, ವೆ, ವೊ) ಪ್ರಮುಖ ಕಾರ್ಯಗಳು ಅನುಕೂಲಕರವಾಗಿ ಸಾಗುತ್ತವೆ. ಉದ್ಯೋಗ ಪ್ರಯತ್ನಗಳು ವೇಗ ಪಡೆಯುತ್ತವೆ. ಹಳೆಯ ಸ್ನೇಹಿತರು ಅಥವಾ ಸಹೋದ್ಯೋಗಿಗಳಿಂದ ನಿರೀಕ್ಷಿತ ಸಹಾಯ ದೊರೆಯುತ್ತದೆ. ಸಂಜೆ ಔತಣಕೂಟ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಅದೃಷ್ಟದ ದಿಕ್ಕು: ದಕ್ಷಿಣ, ಅದೃಷ್ಟದ ಸಂಖ್ಯೆ:, ಅದೃಷ್ಟದ ಬಣ್ಣ:ಗುಲಾಬಿ
ಮಿಥುನ: (ಕಾ, ಕೀ, ಕೂ, ಘ, ಛ, ಕೆ, ಕೊ, ಹ) ಮಾನಸಿಕ ನೆಮ್ಮದಿ ದೊರೆಯುತ್ತದೆ. ಆದರೆ ಹೊಸ ಹೂಡಿಕೆಗಳ ವಿಷಯದಲ್ಲಿ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಕುಟುಂಬದಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಹೆಚ್ಚಿನ ಮಹತ್ವ ದೊರೆಯುತ್ತದೆ. ಕಳೆದ ಕೆಲವು ದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳು ಶಮನವಾಗುತ್ತವೆ. ಅದೃಷ್ಟದ ದಿಕ್ಕು:ಉತ್ತರ, ಅದೃಷ್ಟದ ಸಂಖ್ಯೆ:5, ಅದೃಷ್ಟದ ಬಣ್ಣ:ನೀಲಿ
ಕರ್ಕ: (ದಾ, ದೇ, ದು, ದೇ, ದೋ, ಹೂ, ಹೆ, ಹೋ) ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಶ್ರಮ ಹೆಚ್ಚಾದರೂ ಅಧಿಕಾರಿಗಳಿಂದ ಉತ್ತಮ ಮೆಚ್ಚುಗೆ ಹಾಗೂ ಗೌರವ ದೊರೆಯುತ್ತದೆ. ನ್ಯಾಯಾಲಯ ಅಥವಾ ಭೂ-ಆಸ್ತಿ ಸಂಬಂಧಿತ ವ್ಯವಹಾರಗಳು ನಿಮಗೆ ಅನುಕೂಲಕರವಾಗಿ ಪರಿಣಮಿಸುವ ಸಾಧ್ಯತೆ ಇದೆ. ಅದೃಷ್ಟದ ದಿಕ್ಕು:ಈಶಾನ್ಯ, ಅದೃಷ್ಟದ ಸಂಖ್ಯೆ:6, ಅದೃಷ್ಟದ ಬಣ್ಣ:ಕೆಂಪು
ಸಿಂಹ: (ಮಾ, ಮೀ, ಮೂ, ಮೊ, ಟಾ, ಟೀ, ಟೂ, ಟೆ) ಪ್ರಯಾಣಗಳ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ನಿರೀಕ್ಷಿಸಿದ ಕಾರ್ಯಗಳು ಯೋಜನೆಯಂತೆ ನಡೆಯದ ಕಾರಣ ಸ್ವಲ್ಪ ನಿರಾಶೆಯಾಗಬಹುದು. ಆದರೂ ತಾಳ್ಮೆಯಿಂದ ವರ್ತಿಸುವುದು ಒಳಿತು. ಮಕ್ಕಳ ನಡವಳಿಕೆ ಹಾಗೂ ವಿದ್ಯಾಭ್ಯಾಸ ನಿಮಗೆ ಸಂತೋಷವನ್ನುಂಟು ಮಾಡುತ್ತದೆ. ಅದೃಷ್ಟದ ದಿಕ್ಕು:ದಕ್ಷಿಣ, ಅದೃಷ್ಟದ ಸಂಖ್ಯೆ:9, ಅದೃಷ್ಟದ ಬಣ್ಣ:ಕೆಂಪು
ಕನ್ಯಾ: (ಪಾ, ಪೀ, ಪೂ, ಷ, ಣ , ಪೆ , ಪೊ) ಸಮಾಜದಲ್ಲಿ ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗುತ್ತದೆ. ಬಹುಕಾಲದಿಂದ ಇದ್ದ ಆರ್ಥಿಕ ಸಂಕಷ್ಟಗಳು ದೂರವಾಗಿ ನೆಮ್ಮದಿ ದೊರೆಯುತ್ತದೆ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತೀರಿ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತದೆ. ಅದೃಷ್ಟದ ದಿಕ್ಕು:ವಾಯುವ್ಯ, ಅದೃಷ್ಟದ ಸಂಖ್ಯೆ:6, ಅದೃಷ್ಟದ ಬಣ್ಣ:ಹಸಿರು
ತುಲಾ: (ರಾ, ರೀ, ರೂ, ರೆ, ರೊ, ತಾ, ತೀ, ತೂ, ತೆ)ವೃತ್ತಿ ಹಾಗೂ ವ್ಯಾಪಾರದಲ್ಲಿ ಉತ್ತಮ ಲಾಭಗಳು ದೊರೆಯುತ್ತವೆ. ಹೊಸ ಪರಿಚಯಗಳು ಬೆಳೆಯುತ್ತವೆ ಹಾಗೂ ಅವು ಭವಿಷ್ಯದಲ್ಲಿ ಉಪಯುಕ್ತವಾಗುತ್ತವೆ. ನಿಮ್ಮ ಮಾತಿನ ಶೈಲಿಯಿಂದ ಎಲ್ಲರನ್ನೂ ಆಕರ್ಷಿಸುತ್ತೀರಿ. ಮಾನಸಿಕವಾಗಿ ಉಲ್ಲಾಸದಿಂದ ದಿನವನ್ನು ಕಳೆಯುತ್ತೀರಿ.ಅದೃಷ್ಟದ ದಿಕ್ಕು:ವಾಯುವ್ಯ, ಅದೃಷ್ಟದ ಸಂಖ್ಯೆ:6, ಅದೃಷ್ಟದ ಬಣ್ಣ:ಹಸಿರು
ವೃಶ್ಚಿಕ: (ತೊ, ನಾ, ನೀ, ತೊ, ನಾ, ನೀ, ನೆ, ನೊ, ಯಾ, ಯೀ, ಯೂ) ದೈಹಿಕ ಶ್ರಮ ಹೆಚ್ಚುವುದರಿಂದ ಸ್ವಲ್ಪ ಆಯಾಸವಾಗಬಹುದು. ಆದಾಗ್ಯೂ ದೃಢ ಸಂಕಲ್ಪದಿಂದ ವಿರೋಧಿಗಳ ಮೇಲೆ ಜಯ ಸಾಧಿಸುತ್ತೀರಿ. ಹಿರಿಯರ ಆಶೀರ್ವಾದ ಹಾಗೂ ಸಲಹೆಗಳು ದೊರೆಯುತ್ತವೆ. ಆಸ್ತಿ ಸಂಬಂಧಿತ ವಿವಾದಗಳು ಪರಿಹಾರದ ಹಂತ ತಲುಪುತ್ತವೆ.ಅದೃಷ್ಟದ ದಿಕ್ಕು:ಉತ್ತರ, ಅದೃಷ್ಟದ ಸಂಖ್ಯೆ:4, ಅದೃಷ್ಟದ ಬಣ್ಣ:ಹಸಿರು
ಧನು: (ಥೆ, ಯೊ, ಭಾ, ಭೀ, ಭೂ, ಧಾ, ಫಾ, ಢಾ, ಭೆ) ನಿರುದ್ಯೋಗಿಗಳಿಗೆ ಸಂದರ್ಶನಗಳಲ್ಲಿ ಯಶಸ್ಸು ದೊರೆಯುತ್ತದೆ. ದೂರದ ಪ್ರದೇಶಗಳಿಂದ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ವ್ಯಾಪಾರ ವಿಸ್ತರಣೆಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇದು ಉತ್ತಮ ದಿನ. ಅದೃಷ್ಟದ ದಿಕ್ಕು:ದಕ್ಷಿಣ, ಅದೃಷ್ಟದ ಸಂಖ್ಯೆ:7, ಅದೃಷ್ಟದ ಬಣ್ಣ:ಹಳದಿ
ಮಕರ: (ಭೊ, ಜಾ, ಜೀ, ಖೀ, ಖೂ, ಖೆ, ಖೊ, ಗಾ, ಗೀ)ಖರ್ಚಿನ ವಿಷಯದಲ್ಲಿ ಹೆಚ್ಚಿನ ನಿಯಂತ್ರಣ ಅಗತ್ಯ. ಅನಗತ್ಯ ವಸ್ತುಗಳ ಮೇಲೆ ಹಣ ವ್ಯರ್ಥವಾಗುವ ಸಾಧ್ಯತೆ ಇದೆ. ಇತರರ ವಿಷಯಗಳಲ್ಲಿ ಅನಗತ್ಯವಾಗಿ ಮಧ್ಯಪ್ರವೇಶ ಮಾಡದೆ ಇರುವುದು ಒಳಿತು. ಕೆಲವು ತೊಂದರೆಗಳು ಎದುರಾದರೂ ಧೈರ್ಯದಿಂದ ಅವನ್ನು ಜಯಿಸುತ್ತೀರಿ. ಅದೃಷ್ಟದ ದಿಕ್ಕು:ಉತ್ತರ, ಅದೃಷ್ಟದ ಸಂಖ್ಯೆ:5, ಅದೃಷ್ಟದ ಬಣ್ಣ:ಬೂದು
ಕುಂಭ: (ಗೂ, ಗೆ, ಗೊ, ಸಾ, ಸೀ, ಸೂ, ಸೊ, ದಾ) ಕುಟುಂಬ ಸದಸ್ಯರ ನಡುವಿನ ಹಳೆಯ ಮನಸ್ತಾಪಗಳು ದೂರವಾಗುತ್ತವೆ. ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ಹೊಸ ವಸ್ತುಗಳು ಅಥವಾ ಆಭರಣಗಳನ್ನು ಖರೀದಿಸುವ ಅವಕಾಶ ದೊರೆಯುತ್ತದೆ. ಕೈಗೊಂಡ ಪ್ರಯಾಣಗಳು ಶುಭಫಲವನ್ನು ನೀಡುತ್ತವೆ. ಅದೃಷ್ಟದ ದಿಕ್ಕು:ವಾಯುವ್ಯ, ಅದೃಷ್ಟದ ಸಂಖ್ಯೆ:4, ಅದೃಷ್ಟದ ಬಣ್ಣ:ಬೂದು
ಮೀನ: (ದೀ, ದೂ, ಥ, ಝ, ದೆ, ದೊ, ಚಾ, ಚೀ) ಕೈಗೊಂಡ ಕಾರ್ಯಗಳನ್ನು ನಿಗದಿತ ಸಮಯಕ್ಕೆ ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ಸಮಾಜದಲ್ಲಿ ಉತ್ತಮ ಹೆಸರು ಹಾಗೂ ಗೌರವ ದೊರೆಯುತ್ತದೆ. ಆರೋಗ್ಯದ ಕಡೆ ಸ್ವಲ್ಪ ಹೆಚ್ಚಿನ ಗಮನ ಹರಿಸುವುದು ಉತ್ತಮ. ಸಂಜೆ ವೇಳೆಗೆ ಶುಭ ಸುದ್ದಿ ಕೇಳುವ ಸೂಚನೆಗಳಿವೆ. ಅದೃಷ್ಟದ ದಿಕ್ಕು:ನೈಋತ್ಯ, ಅದೃಷ್ಟದ ಸಂಖ್ಯೆ:7, ಅದೃಷ್ಟದ ಬಣ್ಣ:ನೀಲಿ
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

