
CHITRADURGA NEWS | 15 JULY 2025
ಚಿತ್ರದುರ್ಗ: ನಗರದ ಎಸ್.ಜೆ.ಎಂ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗದಿಂದ ಐ.ಕ್ಯೂ.ಎ.ಸಿ ಸಹಯೋಗದೊಂದಿಗೆ ಇಂದಿನಿಂದ ಜುಲೈ 21ರವರೆಗೆ ತಾಂತ್ರಿಕ ಸಿಬ್ಬಂದಿಗೆ ಟೆಕ್ನಿಕಲ್ ಮತ್ತು ಡಿಜಿಟಲ್ ಸ್ಕಿಲ್ಸ್ ಕಾರ್ಯಗಾರ ಆಯೋಜಿಸಲಾಗಿದೆ.
ಇದನ್ನೂ ಓದಿ: ಗಣಿಬಾಧಿತ ಪ್ರದೇಶಗಳಿಗೆ ರವಿಕೃಷ್ಟಾರೆಡ್ಡಿ | ಜು.17 ರಂದು ಭೇಟಿ
ಇಂದಿನಿಂದ ಆರಂಭವಾದ ಕಾರ್ಯಗಾರದಲ್ಲಿ ಪ್ರಾಚಾರ್ಯರಾದ ಡಾ.ಪಿ.ಬಿ.ಭರತ್ ಅಧ್ಯಕ್ಷತೆ ವಹಿಸಿದ್ದ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ತಾಂತ್ರಿಕ ಸಿಬ್ಬಂದಿಗೆ ಹೆಚ್ಚು ಹೊಣೆಗಾರಿಕೆಯಿರುತ್ತದೆ. ಆದ್ದರಿಂದ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಹೆಚ್ಚು ಮಾಹಿತಿ ಹೊಂದಿರಬೇಕಾಗುತ್ತದೆ, ಅದಕ್ಕಾಗಿ ಇಂತಹ ಕಾರ್ಯಗಾರಗಳು ಹೆಚ್ಚು ಸಹಕಾರಿಯಾಗಲಿವೆ ಎಂದರು.
ಕಾರ್ಯಗಾರದಲ್ಲಿ ಇ ಅಂಡ್ ಸಿ ವಿಭಾಗದ ಸೈಯದ್ ಮೆಹೂಬೂಬ್ ಪಾಷ, ಗಣಕ ವಿಜ್ಞಾನ ವಿಭಾಗದ ಸುರೇಶ, ಮಧುಸೂದನ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಈ ವೇಳೆ ಗಣಕ ವಿಜ್ಞಾನ ವಿಭಾಗ ಮುಖ್ಯಸ್ಥರಾದ ಡಾ.ಕೆ.ಆರ್.ಕೃಷ್ಣರೆಡ್ಡಿ, ಟ್ರೆನಿಂಗ್ ಮತ್ತು ಪ್ಲೇಸ್‌ಮೆಂಟ್ ವಿಭಾಗ ಮುಖ್ಯಸ್ಥರಾದ ಡಾ.ಟಿ.ವಿ.ಅರವಿಂದ್, ಪ್ರೋಫೆಸರ್ ಬಿ.ಇ.ರಮೇಶ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಬಾಲ ಗರ್ಭಿಣಿ ಪ್ರಮಾಣ ಕಡಿಮೆಗೆ ಸಾಮಾಜಿಕ ಅರಿವು ಅಗತ್ಯ | DHO ಡಾ.ರೇಣುಪ್ರಸಾದ್


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
