Connect with us

    ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಶಿಕ್ಷಣಕ್ಕೆ ಒತ್ತು ನೀಡಿ | ಬಸವಕುಮಾರ ಸ್ವಾಮೀಜಿ

    ಮುಖ್ಯ ಸುದ್ದಿ

    ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಶಿಕ್ಷಣಕ್ಕೆ ಒತ್ತು ನೀಡಿ | ಬಸವಕುಮಾರ ಸ್ವಾಮೀಜಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 20 MARCH 2025 

    ಚಿತ್ರದುರ್ಗ: ವಿದ್ಯಾರ್ಥಿ ಜೀವನ ಬೇಗ ಅಡ್ಡ ದಾರಿಯನ್ನು ಹಿಡಿಯುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ನೀಡುವುದರೊಂದಿಗೆ ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿದ್ದು ಸಾಧನೆಯ ಶಿಖರವನ್ನು ಏರುವುದನ್ನು ಮೈಗೂಡಿಸಿಕೊಳ್ಳಬೇಕೆಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಗಳು ನುಡಿದರು.

    Also Read: ಅಪ್ಪರ್ ಭದ್ರಾ ಯೋಜನೆ | ಅನುದಾನ ಬಿಡುಗಡೆಗೆ ಸಂಸತ್‌ನಲ್ಲಿ ಗೋವಿಂದ ಕಾರಜೋಳ ಒತ್ತಾಯ

    ನಗರದ ಎಸ್.ಜೆ.ಎಂ. ಫಾರ್ಮಸಿ ಕಾಲೇಜಿನಲ್ಲಿ ನಡೆದ ನೂತನ ಶೈಕ್ಷಣಿಕ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಫಾರ್ಮ ನೊವಟೊ 25ನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು,

    ಎಸ್.ಜೆ.ಎಂ ವಿದ್ಯಾಪೀಠವು 1964ರಿಂದ ಸತತವಾಗಿ ಮಧ್ಯಕರ್ನಾಟಕ ಭಾಗದಲ್ಲಿ ವಿದ್ಯಾಸಂಸ್ಥೆಗಳನ್ನು ತೆರೆದು, ಶೈಕ್ಷಣಿಕವಾಗಿ ಬಹುದೊಡ್ಡ ಪ್ರಮಾಣದಲ್ಲಿ ಶಾಲಾ ಕಾಲೇಜುಗಳು, ಪ್ರಸಾದ ನಿಲಯಗಳನ್ನು ನಡೆಸುತ್ತ, ಶಿಕ್ಷಣ ಕ್ಷೇತ್ರದಲ್ಲಿ ಆಶಾಕಿರಣವಾಗಿ ಬೆಳೆದಿದೆ ಎಂದರು.

    ಗಗನಯಾತ್ರಿ ಸುನಿತಾ ವಿಲಿಯಮ್ಸ ಮತ್ತು ತಂಡ ಭೂಮಿಗೆ ಹಿಂತಿರುಗಿ ಬಂದಿರುವುದು ದೊಡ್ಡ ಸಾಧನೆಯಾಗಿದೆ. ಅದೇ ರೀತಿ ನಿಮ್ಮ ಔಷಧೀಯ ಕ್ಷೇತ್ರದಲ್ಲಿ ವಿಫಲ ಅವಕಾಶಗಳು ನಿಮ್ಮನ್ನು ಕೈಬೀಸಿ ಕರೆಯುವಂತೆ ಬೇಕಾಗುವ ಶಿಕ್ಷಣ ನೀಡಲು ಕಾಲೇಜಿನ ಬೋಧಕ ವರ್ಗದವರು ಶ್ರಮಿಸುತ್ತಾರೆ.

    Also Read: ಒಳಮೀಸಲು ವಿಳಂಬ ಸಹಿಸಲು ಆಗದು | ಎಚ್. ಆಂಜನೇಯ

    ಅವರ ಮಾರ್ಗದರ್ಶನ ಪಡೆದುಕೊಂಡು ನಮ್ಮ ಸಂಸ್ಥೆಯಲ್ಲಿ ಓದಿದ ಹೆಚ್ಚು ಫಾರ್ಮಾ ಡಿ ವಿದ್ಯಾರ್ಥಿಗಳು ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಸಾಕ್ಷಿ. ನೀವು ಅದೇ ದಾರಿಯಲ್ಲಿ ನಡೆದು ವಿದ್ಯಾಸಂಸ್ಥೆ ಹಾಗೂ ದೇಶಕ್ಕೆ ಮಾದರಿಯಾಗಿ ಮತ್ತು ಇತರರಿಗೆ ಒಳಿತು ಬಯಸಿ ಔಷಧಿ ಕ್ಷೇತ್ರದಲ್ಲಿ ಹೆಸರು ಮಾಡಿ ಎಂದು ಹೇಳಿದರು.

    ಮುರಳಿಧರ, ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ.ಎಸ್. ನಾಗರಾಜ್ ಮಾತನಾಡಿದರು.

    ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಫಾರ್ಮಸಿ ವಿಭಾಗದ ಬಿ.ಓ.ಎಸ್. ಸದಸ್ಯರಾಗಿರುವ ಡಾ. ವಿಜಯಕುಮಾರ್, ಡಾ.ಆರ್.ಯೋಗಾನಂದ, ಡಾ.ಸ್ನೇಹಲತಾ ಅವರನ್ನು ಸನ್ಮಾನಿಸಲಾಯಿತು.

    Also Read: ಬೈಕ್‍ಗೆ ಲಾರಿ ಡಿಕ್ಕಿ | ಸ್ಥಳದಲ್ಲೇ ಪತಿ ಸಾವು, ಪತ್ನಿಗೆ ಗಾಯ

    ಕಾರ್ಯಕ್ರಮದಲ್ಲಿ ಡಾ.ಮಾರುತಿ ಎಕ್ಬೋಟೆ, ಡಾ.ಬಸವರಾಜ್ ಹರ್ತಿ, ಡಾ.ನಟರಾಜ್ ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top