
CHITRADURGA NEWS | 30 JULY 2025
ಚಿತ್ರದುರ್ಗ: ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ಬುಧವಾರ ಸ್ಟೆಮ್ ಮತ್ತು ಲಾಂಗ್ವೇಜ್ ಲ್ಯಾಬ್ಸ್ ವನ್ನು ಅಪರ ಜಿಲ್ಲಾಧಿಕಾರಿ ಕೆ.ಟಿ.ಕುಮಾರಸ್ವಾಮಿ ಉದ್ಘಾಟಿಸಿದರು.
ಇದನ್ನೂ ಓದಿ: ಕೋಟೆ ಮುಂಭಾಗದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಲೋಕಾರ್ಪಣೆ

ನಂತರ ಮಾತನಾಡಿದ ಅವರು, ಪ್ರತಿಯೊಂದು ಮಗುವಿನಲ್ಲಿಯೂ ಬುದ್ದಿವಂತಿಕೆಯಿರುತ್ತದೆ. ಏಕಾಗ್ರತೆ, ಅರ್ಥೈಸುವಿಕೆ ಮುಖ್ಯ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆ ಸಮೂಹ ಕೌಶಲ್ಯವಿರಬೇಕು ಎಂದು ತಿಳಿಸಿದರು.
ಒಂದು ಕೋಟಿ ರೂ.ವೆಚ್ಚದಲ್ಲಿ ಸಂಸ್ಥೆ ಮಕ್ಕಳಿಗೆ ಈ ಅವಕಾಶವನ್ನು ಕಲ್ಪಿಸಿದೆ. ಕೇಳುವ ಪ್ರಶ್ನೆಗಳಿಗೆ ಉತ್ತರ ಏನು, ಎಷ್ಟು ಬರೆಯಬೇಕೆಂಬ ಕೌಶಲ್ಯವಿರಬೇಕು. ಆಗ ಮಾತ್ರ ನೀವುಗಳು ಕಂಡ ಕನಸು ನನಸಾಗಲು ಸಾಧ್ಯ.
ನಿಮ್ಮ ಬರವಣಿಗೆ ಓದುವವರಿಗೆ ಆಕರ್ಷಣೀಯವಾಗಿರಬೇಕು. ಚಿತ್ರದುರ್ಗ ಜಿಲ್ಲೆಯ ಮಕ್ಕಳಿಗೆ ಇದೊಂದು ವರದಾನವಾಗಿದೆ. ಇಂತಹ ವ್ಯವಸ್ಥೆ ಜಿಲ್ಲೆಯಲ್ಲಿ ಇದೇ ಪ್ರಥಮ ಎಂದು ಹರ್ಷ ವ್ಯಕ್ತಪಡಿಸಿದರು.
ಸ್ಟೆಮ್ ಮತ್ತು ಲಾಂಗ್ವೇಜ್ ಲ್ಯಾಬ್ಸ್ ಒಂದಕ್ಕೊಂದು ಪೂರಕ. ಶಿಕ್ಷಣ ಕೇವಲ ಅಂಕಗಳಿಗಷ್ಟೆ ಸೀಮಿತವಾಗಬಾರದೆಂದು ಹೇಳಿದರು.
ಇದನ್ನೂ ಓದಿ: ಬೆಳೆ ವಿಮೆ | ಅಡಿಕೆ, ದಾಳಿಂಬೆ, ಮಾವು ಬೆಳೆ ನೊಂದಣಿಗೆ ಆಗಸ್ಟ್ 11 ಕೊನೆ ದಿನ
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ತನ್ನದೆ ಆದ ಜವಾಬ್ದಾರಿಯಿದೆ. ಕೇವಲ ಶಿಕ್ಷಣವೊಂದೆ ಬದುಕಿಗೆ ಮಾನದಂಡವಾಗಬಾರದು. ರೈಲು ನಿಲ್ದಾಣದಲ್ಲಿ ಚಹ ಮಾರುತ್ತಿದ್ದ ವ್ಯಕ್ತಿ ಇಂದು ದೇಶದ ಪ್ರಧಾನಿಯಾಗಿದ್ದಾರೆ.
ಇನ್‍ಫೋಸಿಸ್‍ನ ನಾರಾಯಣಮೂರ್ತಿ ಹಾಗೂ ಸುಧಾ ನಾರಾಯಣಮೂರ್ತಿ ಇವರುಗಳು ಒಂದು ಕಾಲದಲ್ಲಿ ಕಷ್ಟದಲ್ಲಿದ್ದರು. ಈಗ ವರ್ಷಕ್ಕೆ ಅವರ ಆದಾಯ ಎಂಟು ಸಾವಿರ ಕೋಟಿ ರೂ.ಗಳು ಕೌಶಲ್ಯದಿಂದ ಮಾತ್ರ ಸಮಾಜದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು.
ಶಿಕ್ಷಣದ ಜೊತೆ ಕೌಶಲ್ಯ ಜ್ಞಾನ ಬಹಳ ಮುಖ್ಯ. ಸ್ಟೆಮ್ ಅಂಡ್ ಲಾಂಗ್ವೇಜ್ ಲ್ಯಾಬ್ಸ್‍ನ ಪ್ರಯೋಜನ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ರೋಟರಿ ಟ್ರಸ್ಟ್‌ನಿಂದ ಯುವಜನರಿಗಾಗಿ ಕೆರಿಯರ್ ಕನೆಕ್ಟ್ ತರಬೇತಿ | ಆಗಸ್ಟ್ 5 ರಿಂದ ಪ್ರಾರಂಭ
ಮೈರಾಸ್ ಅಕಾಡೆಮಿಯ ಸಂಸ್ಥಾಪಕ ಡಾ.ಮನಿಷ್ ಜಾ, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಮಾತನಾಡಿದರು. ಅಕಾಡೆಮಿಕ್ ಡೈರೆಕ್ಟರ್ ಎಸ್.ಎಲ್.ವಿ. ಪಿ.ಯು.ಕಾಲೇಜಿನ ಡಾ.ಹೆಚ್.ಎನ್.ಪ್ರದೀಪ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೈರಾಸ್ ಅಕಾಡೆಮಿಯ ಮ್ಯಾನೇಜಿಂಗ್ ಡೈರೆಕ್ಟರ್ ಸುಧಾ ದೇವರಾಜ್, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಕಲಾ, ಡೀನ್ ಅಕಾಡೆಮಿಕ್ಸ್ ಡಾ.ಬಿ.ಸಿ.ಅನಂತರಾಮು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
