
ಚಿತ್ರದುರ್ಗ ನ್ಯೂಸ್.ಕಾಂ: ವಾಣಿಜ್ಯ ನಗರಿ ಚಳ್ಳಕೆರೆಯಲ್ಲಿ ನಗರ ಮಟ್ಟದ ಕ್ರಿಕೇಟ್ ಟೂರ್ನಿಗೆ ಚಾಲನೆ ನೀಡಲಾಗಿದೆ.
35 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳಿಗಾಗಿ ಫ್ರೆಂಡ್ಸ್ ಕ್ರಿಕೇಟರ್ಸ್ ಚಳ್ಳಕೆರೆ ಇವರ ವತಿಯಿಂದ ನಗರದ ಡಿ.ಸುಧಾಕರ ಕ್ರೀಡಾಂಗಣದಲ್ಲಿ ಟೆನ್ನೀಸ್ ಬಾಲ್ ಕ್ರಿಕೇಟ್ ಟೂರ್ನಿಮೆಂಟ್ ನಡೆಸಲಾಗುತ್ತಿದೆ.
ಕ್ರಿಕೇಟ್ ಟೂರ್ನಿಗೆ ಚಳ್ಳಕೆರೆ ಪೊಲೀಸ್ ಠಾಣೆ ಪಿಎಸ್‍ಐ ಸತೀಶ್ ನಾಯ್ಕ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ನಾವು ಸೇವಿಸುವ ಆಹಾರ, ನೀರು, ಗಾಳಿ ಕಲುಷಿತವಾಗುತ್ತಿದೆ. ಸಣ್ಣ ವಯಸ್ಸಿಗೆ ಗಂಭೀರ ಖಾಯಿಲೆಗಳಿಗೆ ಸಿಲುಕುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದರು.

ಸ್ವಸ್ಥ ಸಮಾಜ ನಿರ್ಮಾಣ ಮಾಡುವುದು ಯುವಕರ ಆಧ್ಯತೆಯಾಗಬೇಕು. ಇಂದು ಯುವ ಪೀಳಿಗೆ ಅನೇಕ ರೀತಿಯ ದುಶ್ಚಟಗಳಿಗೆ ಬಲಿಯಾಗುತ್ತಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಸಮಾಹ ಹಾಗೂ ದೇಹಾರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಮಿಂಚೇರಿ ಯಾತ್ರೆಗೆ ಹೊಂಟವು ಸಾಲು ಸಾಲು ಎತ್ತಿನ ಬಂಡಿ
ವೈದ್ಯ ಡಾ. ಅನೀಲ್‍ಕುಮಾರ್ ಮಾತನಾಡಿ, ಕ್ರೀಡಾ ಎಲ್ಲಾ ಕಾಲದಲ್ಲೂ ಮಾನವನ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿದೆ. ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. ಇಂದಿನ ದಿನಗಳಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಚಳ್ಳಕೆರೆ ಎಚ್‍ಪಿಪಿಸಿ ಪ್ರಥಮ ದರ್ಜೆ ಕಾಲೇಜು ದೈಹಿಕ ನಿರ್ದೇಶಕ ತಿಪ್ಪೇಸ್ವಾಮಿ ಮಾತಾನಾಡಿ, ನಗರದಲ್ಲಿ ಕ್ರೀಡಾಚಟುವಟಿಕೆಗಳನ್ನು ನಡೆಸಲು ನಾವು ಸದಾ ಸಹಕಾರ ನೀಡುತ್ತೇವೆ. ಈ ಕ್ರೀಡಾಂಗಣದಲ್ಲಿ ಆಗಾಗ ಕ್ರೀಡಾ ಚಟುವಟಿಕೆ ನಡೆಯುವುದರಿಂದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಗುತ್ತದೆ. ನಗರದಲ್ಲಿ ಲವಲವಿಕೆಯ ವಾತಾವರಣ ಇರುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಿಯೇ ಕ್ರೀಡಾಕೂಟ ಆಯೋಜಿಸಿದರೂ ನಮ್ಮ ನೆರವು ಹಾಗೂ ಸಹಕಾರ ಇದ್ದೇ ಇರುತ್ತದೆ ಎಂದರು.
ಚಳ್ಳಕೆರೆಯಲ್ಲಿ ಕ್ರಿಕೇಟ್ ಟೂರ್ನಿಗೆ ಚಾಲನೆಪ್ರತಿ ದಿನ ಕೂಡ ಈ ಕ್ರೀಡಾಂಗಣದಲ್ಲಿ ನೂರಾರು ಕ್ರೀಡಾಪಟುಗಳು ಕ್ರಿಕೆಟ್ ಅಭ್ಯಾಸ ನಡೆಸುತ್ತಾರೆ. ಇಲ್ಲಿ ಸರ್ಕಾರಿ ನೌಕರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಎನ್ನದೇ ಯಾವುದೇ ವ್ಯತ್ಯಾಸ ಇಲ್ಲದೆ ಜೊತೆಗೂಡಿ ಆಟೋಟಗಳಲ್ಲಿ ಭಾಗವಹಿಸುವುದನ್ನು ನೋಡಿದಾಗ ಸಂತಸವಾಗುತ್ತದೆ ಎಂದು ಉದ್ಯಮಿ ಬೇಕರಿ ಮಂಜಣ್ಣ ಅಭಿಪ್ರಾಯ ಹಂಚಿಕೊಂಡರು.
ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಈ ಕ್ರಿಕೇಟ್ ಟೂರ್ನಿಗೆ 11 ತಂಡಗಳು ನೊಂದಣಿಯಾಗಿವೆ. ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ 5 ಸಾವಿರ ರೂ. ಹಾಗೂ ಪಾರಿತೋಷಕಗಳನ್ನು ನೀಡಲಾಗುವುದು. ಪ್ರತಿ ಪಂದ್ಯಗಳಿಗೂ ಪಂದ್ಯ ಪರುಷೋತ್ತಮ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿಗಳನ್ನು ನೀಡುವುದಾಗಿ ಆಯೋಜಕರು ತಿಳಿಸಿದ್ದಾರೆ.
ಈ ವೇಳೆ ನಗರಸಭೆ ಸದಸ್ಯ ಹೊಯ್ಸಳ, ಮುಖಂಡರಾದ ಗೋವಿಂದ, ತಿರುಮಲ, ಪಾಪಣ್ಣ, ರಾಜ್ಯ ಖೋಖೋ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಓ.ಶ್ರೀನಿವಾಸ್, ವೀರೇಶ್ ಅಪ್ಪು, ಅರಣ್ಯ ಇಲಾಖೆಯ ರಾಜೇಶ್, ಪ್ರಶಾಂತ, ಏಕಾಂತ ನಾಯಕ, ಸಂತೋಷ, ಕೃಷ್ಣಪ್ಪ, ಸತೀಶ್, ಅಭಿ, ಶಾಂತಕುಮಾರ್, ಆದರ್ಶ, ಕಾಳಿಂಗ ತಿಪ್ಪೇಸ್ವಾಮಿ, ಶ್ರೀನಿವಾಸ, ನಟರಾಜ್, ಹರೀಶ್, ಗಜೇಂದ್ರ, ಪೊಲೀಸ್, ತಿಮ್ಮಣ್ಣ, ಓಬಳೇಶ್ ಸೇರಿದಂತೆ ನೂರಾರು ಕ್ರೀಡಾಪಟುಗಳಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
