
CHITRADURGA NEWS | 06 FEBRUARY 2026
ಚಿತ್ರದುರ್ಗ: ನಗರದ ಬುರುಜನಹಟ್ಟಿಯ ಸಾವಂತನರಹಟ್ಟಿಯಲ್ಲಿನ ಶ್ರೀ ಪಾಲ್ಗುಣೇಶ್ವರಸ್ವಾಮಿಯ ಮುಖಪದ್ಮ ಹಾಗೂ ಪ್ರಭಾವಳಿಯನ್ನು ನಗರದಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಯಿತು.
ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಗೆ ಕೇಂದ್ರ ಕೈಗೊಂಡ ಕ್ರಮಗಳ ಬಗ್ಗೆ ಲೋಕಸಭೆ ಅಧಿವೇಶನದಲ್ಲಿ ಜೆ.ಪಿ.ನಡ್ಡಾ ಮಾಹಿತಿ
ಶ್ರೀ ಪಾಲ್ಗುಣೇಶ್ವರ ಮತ್ತು ಶ್ರೀ ಆಂಜನೇಯಸ್ವಾಮಿ ಸೇವಾ ಸಮಿತಿ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಪಾಲ್ಗುಣೇಶ್ವರ ದೇವಸ್ಥಾನದಲ್ಲಿ ಫೆ. 06 ರಿಂದ 15ರವರೆಗೆ ಪ್ರತಿ ದಿನ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇಂದು ಶ್ರೀ ನೀಲಕಂಠೇಶ್ವರ ದೇವಸ್ಥಾನದಿಂದ ಪ್ರಭಾವಳಿ, ಮುಖಪದ್ಮ ಮೆರವಣಿಗೆ ನಡೆಯಿತು.
ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಪಾಲ್ಗುಣೇಶ್ವರ ಸ್ವಾಮಿಗೆ ನೂತನ ಮುಖಪದ್ಮ, ಪ್ರಭಾವಳಿಯನ್ನು ಲೋಕಾರ್ಪಾಣೆಯನ್ನು ಮಾಡಿದರು.
ನಗರದ ರಾಜ್ಯಬೀದಿಗಳಲ್ಲಿ ಮುಖಪದ್ಮ,ಪ್ರಭಾವಳಿಯನ್ನು ಬೆಳ್ಳಿ ರಥದಲ್ಲಿ ಇರಿಸಿ ವೀರಗಾಸೆ, ಟಾಷ್ಯೂ, ಕಹಳೆ, ಡೊಳ್ಳು ಸೇರಿದಂತೆ ವಿವಿಧ ರಿತಿಯ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.
ಇದನ್ನೂ ಓದಿ: ಅಡಿಕೆ ಧಾರಣೆ | 6 ಫೆಬ್ರವರಿ | ಭೀಮಸಮುದ್ರ, ಚನ್ನಗಿರಿ ಸೇರಿ ರಾಜ್ಯದ ಅಡಿಕೆ ಮಾರುಕಟ್ಟೆ ವಿವರ
ಫೆ. 07 ನೇ ಶನಿವಾರದಂದು ಬೆಳಗ್ಗೆ 10ಗಂಟೆಗೆ ಶ್ರೀ ಪಾಲ್ಗುಣೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಈ ಪೂಜೆ ಕಾರ್ಯಕ್ರಮಕ್ಕೆ ಡಾ.ಮಹರ್ಷಿ ಆನಂದ ಗುರೂಜೀ ಈ ಪೂಜಾ ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದು, ಸಂಜೆ 5 ಗಂಟೆಗೆ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಡಾ. ಮಹರ್ಷಿ ಆನಂದ ಗುರೂಜಿ ರವರಿಂದ ಸ್ವಾಮಿಯ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಈ ವೇಳೆ ಸಮಿತಿ ಪದಾಧಿಕಾರಿಗಳಾದ ನಗರಸಭೆ ಮಾಜಿ ಸದಸ್ಯ ಎಸ್.ಬಿ.ಎಲ್, ಮಲ್ಲಿಕಾರ್ಜುನ್, ಜಿ.ಪಂ. ಮಾಜಿ ಸದಸ್ಯ ಗುರುಮೂರ್ತಿ, ಪತ್ರಕರ್ತ ಎಸ್.ಟಿ.ನವೀನ್ ಕುಮಾರ್, ನಗರಾಭೀವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಮುದ್ದಣ್ಣ, ಶೈಲೇಂದ್ರ, ಮಹೇಶ್, ವೆಂಕಟೇಶ್, ಮಧು, ಲತಾ ಜೈನ್ ಇತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

