ಮುಖ್ಯ ಸುದ್ದಿ
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತೋತ್ಸವ | ಪ್ರತಿಭಾವಂತ ಮಕ್ಕಳಿಗೆ ಸನ್ಮಾನ

CHITRADURGA NEWS | 29 MAY 2024
ಚಿತ್ರದುರ್ಗ: ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ವತಿಯಿಂದ ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತೋತ್ಸವ ಜರುಗಿತು.
ಇದನ್ನೂ ಓದಿ: ಚಿತ್ರದುರ್ಗ ಕೃಷಿ ಇಲಾಖೆಗೆ ಪ್ರಶಸ್ತಿಗಳ ಸುರಿಮಳೆ | ಮಣ್ಣು ಪರೀಕ್ಷೆ, ಸಮಗ್ರ ಕೃಷಿ, ನರೇಗಾದಲ್ಲಿ ರಾಜ್ಯಮಟ್ಟದ ಪುರಸ್ಕಾರ

ಈ ಜಯಂತೋತ್ಸವದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ಸಮಾಜದ ಮಕ್ಕಳನ್ನು ಸನ್ಮಾನಿಸಲಾಯಿತು.
ಈ ವೇಳೆ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್ ಮಾತನಾಡಿ,
ಹೇಮರೆಡ್ಡಿ ಮಲ್ಲಮ್ಮ ಸಾಧ್ವಿಯಾಗಿ ಸಮಾಜವನ್ನು ಮುನ್ನಡೆಸಿದ್ದಾರೆ, ಮಲ್ಲಿಕಾರ್ಜನನಲ್ಲಿ ನಮ್ಮ ಸಮಾಜದ ಪರವಾಗಿ ವರವನ್ನು ಪಡೆಯುವುದರ ಮೂಲಕ ದಾರಿ ದೀಪವಾಗಿದ್ದಾರೆ. ತನಗೆ ಕಿರುಕುಳವನ್ನು ನೀಡಿದವರಿಗೂ ಸಹಾ ಒಳ್ಳೆಯದಾಗಲಿ ಎಂದು ಭಗವಂತನಲ್ಲಿ ಕೇಳಿದ ಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಎಂದರು.

ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆ ಸಿ.ಟಿ.ಸ್ಕ್ಯಾನ್‌ಗೆ ಪರ್ಯಾಯ ವ್ಯವಸ್ಥೆ | ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ
ಶಿಕ್ಷಣದಿಂದ ಮಾತ್ರ ಏನಾದರೂ ಸಾಧನೆ ಮಾಡಲು ಹಾಗೂ ಶಿಕ್ಷಣವನ್ನು ಪಡೆದರೆ ಮಾತ್ರ ಜೀವನದಲ್ಲಿ ಮೇಲಕ್ಕೆ ಏರಲು ಸಾಧ್ಯವಿದೆ ಎಂದು ಹೇಳಿದರು.
ರಾಜ್ಯದಲ್ಲಿ ನಮ್ಮ ಸಮಾಜದ ಸಂಘಟನೆಗಾಗಿ ಪ್ರವಾಸವನ್ನು ಮಾಡುವುದರ ಮೂಲಕ ಸಂಘಟಿಸಲಾಗುತ್ತಿದೆ, ಇದಕ್ಕೆ ನಮ್ಮ ಸಮಾಜದ ಭಾಂಧವರು ಸಹಾಯ ಮತ್ತು ಸಹಕಾರವನ್ನು ನೀಡಬೇಕಿದೆ, ಈಗಾಗಲೇ 18 ಜಿಲ್ಲೆಗಳಲ್ಲಿ ನಮ್ಮ ಸಮಾಜದ ಸಂಘಟನೆ ಇದೆ ಅಲ್ಲಿ ನಮ್ಮ ಸಮಾಜ ಬೆಳೆಯುತ್ತಿದೆ ಎಂದರು.
ಚಿತ್ರದುರ್ಗದಲ್ಲಿಯೂ ಸಹಾ ನಮ್ಮ ಸಮಾಜ ಉತ್ತಮವಾದ ಸಂಘಟನೆಯಾಗುತ್ತಿದೆ, ನಮ್ಮ ಸಮಾಜದೊಂದಿಗೆ ಇತರೆ ಸಮಾಜದವರನ್ನು ಸಹಾ ಜೊತೆಯಲ್ಲಿ ಕರೆದ್ಯೂಯಲಾಗುತ್ತಿದೆ, ನಮ್ಮ ಸಮಾಜದಲ್ಲಿನ ಬಡವರಿಗೆ ಸಹಾಯವನ್ನು ಮಾಡುವ ಮನೋಭಾವವನ್ನು ಬೆಳಸಿಕೊಳ್ಳುವಂತೆ ಕರೆ ನೀಡಿದರು.
ಇದನ್ನೂ ಓದಿ: ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ | ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ
ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಗೌರವಾಧ್ಯಕ್ಷರಾದ ನಾಗೀರೆಡ್ಡಿ ಮಾತನಾಡಿ, ಹಿಂದಿನ ದಿನದಲ್ಲಿ ನಮ್ಮ ಸಮಾಜ ಕಳೆದು ಹೋಗುತ್ತಿತ್ತು ಆದರೆ ಈಗ ಸಮಾಜವನ್ನು ಸಂಘಟಿಸಲಾಗುತ್ತಿದೆ. ನಾವು ಇದುವರೆಗೂ ಬೇರೆಯವರ ಆಶ್ರಯದಲ್ಲಿ ಇದ್ದವೆ ಆದರೆ ಈಗ ನಾವು ಸ್ವತಂತ್ರವಾಗಿ ನಮ್ಮದೇ ಸಮಾಜ ಇದೆ ಎಂದರು.
ಮಲ್ಲಮ್ಮ 600 ವರ್ಷಗಳ ಹಿಂದೆಯೇ ನಮ್ಮ ಸಮಾಜವನ್ನು ಸಂಘಟಿಸುವುದರ ಮೂಲಕ ಒಗ್ಗಟ್ಟನ್ನು ಪ್ರದರ್ಶನ ಮಾಡಿದರು. ಮಲ್ಲಕಾರ್ಜನ ಪರಮ ಭಕ್ತೆಯಾಗಿ ಅತನನ್ನು ಸಾಕ್ಷಾತ್ಕಾರ ಮಾಡಿಸಿಕೊಂಡು ನಮ್ಮ ಸಮಾಜವನ್ನು ಮುನ್ನಡೆಸಿದ್ದಾರೆ. ನಮ್ಮಲ್ಲಿ ಶೈವ ಮತ್ತು ವೈಷ್ಣವ ಪಂಥವನ್ನು ನಾವು ಅನುಸರಿಸುತ್ತೇವೆ, ನಮ್ಮ ಮಕ್ಕಳಿಗೆ ಸಮಾಜದ ಬಗ್ಗೆ ತಿಳಿಸುವ ಕಾರ್ಯವನ್ನು ಮಾಡಿ ಎಂದರು.
ಇದನ್ನೂ ಓದಿ: ಮುರುಘಾಮಠದಿಂದ ಸಸಿ ನೆಡುವ ಸಪ್ತಾಹ | ನಾಳೆಯಿಂದ ಚಾಲನೆ
ನಿವೃತ್ತ ಶಾಲಾ ತನಿಖಾಧಿಕಾರಿ ಶಿವಪ್ರಸಾದ್ ಅವರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರವರ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಲಿಂಗಾಯತ ರೆಡ್ಡಿ ಸಮಾಜದ ಅಧ್ಯಕ್ಷ ಚಿದಾನಂದಪ್ಪ, ಮಲ್ಲಿಕಾರ್ಜನಯ್ಯ, ಶಿವಾನಂದಪ್ಪ, ವಿಶ್ವನಾಥ, ನಾಗರಾಜ್ ಸಂಗಮ್ ಸೇರಿದಂತೆ ಸಮಾಜದವರು ಇದ್ದರು.
