ಮುಖ್ಯ ಸುದ್ದಿ
ಡಿ.ಟಿ.ಶ್ರೀನಿವಾಸ್ ಪರ ಬಿ.ಎನ್.ಚಂದ್ರಪ್ಪ ಮತಯಾಚನೆ

CHITRADURGA NEWS | 29 MAY 2024
ಚಿತ್ರದುರ್ಗ: ಜೂನ್ 3 ರಂದು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ನಗರದ ಡಾನ್ ಬಾಸ್ಕೊ ಕಾಲೇಜಿನಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮತಯಾಚನೆ ಮಾಡಿದರು.
ಇದನ್ನೂ ಓದಿ: ಮೇ.30 ರಂದು ವಿದ್ಯುತ್ ವ್ಯತ್ಯಯ

ಈ ವೇಳೆ ಮಾತನಾಡಿ ಅವರು, ನಮ್ಮ ಸಮಾಜದಲ್ಲಿ ಗುರುವಿನ ಸ್ಥಾನ ಬಹಳ ಪವಿತ್ರವಾದದ್ದು ಅದನ್ನು ಆಪವಿತ್ರ ಮಾಡಿದವರು ಈಗಿನ ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿಯವರು ಎಂದು ಆರೋಪಿಸಿದ್ದಾರೆ.
ಶಿಕ್ಷಕರನ್ನು ಗೌರವದಿಂದ ಕಾಣುವ ಸಂಸ್ಕೃತಿ ನಮ್ಮದಾಗಿದೆ ಆದರೆ ಈ ವ್ಯಕ್ತಿ ಶಿಕ್ಷಕರುಗಳಿಗೆ ಆವಮಾನ ಮಾಡಿದ್ದಾರೆ, ಸದನದಲ್ಲಿ ಶಿಕ್ಷಕರ ಬಗ್ಗೆ ಯಾವ ಸಮಸ್ಯೆಯನ್ನು ಪರಿಹಾರ ಮಾಡಿಲ್ಲ, ಸುಮಾರು 18 ವರ್ಷಗಳ ಕಾಲ ಹರಣವನ್ನು ಮಾಡಿದ್ದಾರೆ, ಇಂತಹವರನ್ನು ಮತ್ತೆ ಆಯ್ಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಆಯ್ಕೆಯನ್ನು ಮತದಾರರಿಗೆ ಬಿಟ್ಟರು.

ಇದನ್ನೂ ಓದಿ: ನಗರ ಪ್ರದೇಶಗಳಲ್ಲಿ ಡೆಂಗ್ಯು ಹೆಚ್ಚಳ | ಆರೋಗ್ಯ ಇಲಾಖೆಯಿಂದ ಲಾರ್ವಾ ಸಮೀಕ್ಷೆ
ಶಿಕ್ಷಕರನ್ನು ರಾಜಕೀಯವಾಗಿ ಬಳಸಿಕೊಂಡ ವೈ.ಎ. ನಾರಾಯಣಸ್ವಾಮಿ ಶಿಕ್ಷಕರಿಗೆ ಯಾವ ಸಹಾಯವನ್ನು ಸಹಾ ಮಾಡಿಲ್ಲ, ಕ್ಷೇತ್ರವನ್ನು ಅಲ್ಲೋಲ ಕಲ್ಲೋಲ ಮಾಡಿದ್ದಾರೆ. ಸಮಾಜದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆಪಾರವಾದ ಮಾನ್ಯತೆ ಇದೆ, ಶಿಕ್ಷಕರಲ್ಲಿ ಕೋಮುವಾದವನ್ನು ಬಿತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೋಮುವಾದವನ್ನು ರಾಜ್ಯದಲ್ಲಿ ಹೊಡೆದೊಡಿಸಲಾಗಿದೆ. ಶಾಂತಿಯನ್ನು ನೆಲೆಯೂರಲು ಪ್ರಯತ್ನವನ್ನು ಮಾಡಿದೆ. ಈ ಚುನಾವಣೆಯಲ್ಲಿ ಬದಲಾವಣೆಯನ್ನು ಮಾಡಲು ಈ ಕ್ಷೇತ್ರದ 5 ಜಿಲ್ಲೆಯ ಮತದಾರರು ತೀರ್ಮಾನ ಮಾಡಿದ್ದಾರೆ.
ಹಣಕ್ಕಾಗಿ ರಾಜಕಾರಣವನ್ನು ಮಾಡುವವರೆಗೆ ಮತವನ್ನು ಹಾಕ ಬೇಡಿ, ನಿಮ್ಮ ಸಮಸ್ಯೆಗಳಿಗೆ ಸ್ಫಂದಿಸುವವರು ನಿಮ್ಮ ಬೇಡಿಕೆಯನ್ನು ಈಡೇರಿಸುವವರಿಗೆ ಮತವನ್ನು ನೀಡಿ, ನಾವು ಮುಂದಿನ 4 ವರ್ಷ ಅಧಿಕಾರದಲ್ಲಿ ಇರುತ್ತೇವೆ, ಶ್ರೀನಿವಾಸ್ ರವರನ್ನು ಆಯ್ಕೆ ಮಾಡಿದರೆ ನಿಮ್ಮ ಹಲವಾರು ಬೇಡಿಕೆಗಳು ಈಡೇರುತ್ತೇವೆ ಎಂದು ಚಂದ್ರಪ್ಪ ಭರವಸೆ ನೀಡಿದರು.
ಇದನ್ನೂ ಓದಿ: ಕಾಡುಗೊಲ್ಲ ಸಮುದಾಯಕ್ಕೆ ವಿಧಾನ ಪರಿಷತ್ ಸದಸ್ಯ ಸ್ಥಾನ ಕಲ್ಪಿಸಿ | ಕೆಪಿಸಿಸಿ ಮಾಜಿ ಕಾರ್ಯದರ್ಶಿ ನಂದಿಹಳ್ಳಿ ಪಾತಪ್ಪ
ಮಾಜಿ ಶಾಸಕ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ನಮ್ಮ ತಂದೆ, ನಮ್ಮ ಪತಿ ಶಿಕ್ಷಣದ ಬಗ್ಗೆ ಆಪಾರವಾದ ಕಾಳಜಿ, ಪ್ರೀತಿಯನ್ನು ಹೊಂದಿದ್ದಾರೆ, ಅಲ್ಲದೆ ನಾವು ಸಹಾ ಹಲವಾರು ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿದ್ದೇವೆ, ಶಿಕ್ಷಕರ ಸಮಸ್ಯೆಯ ಬಗ್ಗೆ ನಮಗೆ ಅರಿವು ಇದೆ, ಅವುಗಳನ್ನು ಬಗೆಹರಿಸುವ ಸಂಬಂಧ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ.
ಇಂದಿನ ವಿಧಾನ ಪರಿಷತ್ ಸದಸ್ಯರು ತಮ್ಮ ಮತದಾರರಿಗೆ ಆಸೆ, ಆಮಿಷಗಳನ್ನು ನೀಡುವುದರ ಮೂಲಕ ಗೆಲುವು ಸಾಧಿಸಿದ್ದಾರೆ, ಇದರಿಂದ ಆವರು ಶಿಕ್ಷಕರ ಕ್ಷೇತ್ರದಲ್ಲಿ ಯಾವ ಕೆಲಸವನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿಲ್ಲ ಎಂದು ದೂರಿದರು.
ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆ ಸಿ.ಟಿ.ಸ್ಕ್ಯಾನ್‌ಗೆ ಪರ್ಯಾಯ ವ್ಯವಸ್ಥೆ | ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ
ನಮಗೆ ಶಿಕ್ಷಕರ ಮತ್ತು ಮಕ್ಕಳ ಸಮಸ್ಯೆ ಏನು ಎಂಬುದು ಅರಿವು ಇದೆ, ಇದನ್ನು ನಿವಾರಣೆ ಮಾಡಲು ನಾವು ಮುಂದಾಗುತ್ತವೆ, ನಮ್ಮ ಮೇಲೆ ನಂಬಿಕೆ ಇಡಿ, ಶ್ರೀನಿವಾಸ್ ರವರಿಗೆ ಈ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ಯದ ಮತವನ್ನು ನೀಡುವುದರ ಮೂಲಕ ಗೆಲುವನ್ನು ಸಾಧಿಸಲು ಸಹಾಯ ಮಾಡಿ.
ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಯಾವುದೇ ರೀತಿಯ ಭದ್ರತೆ ಇಲ್ಲ ನಿವೃತ್ತಿಯಾದರೆ ಪಂನ್ಷಕನ್ ಸಹಾ ಬರುವುದಿಲ್ಲ ಇದರ ಬಗ್ಗೆ ನಮಗೆ ಅರಿವು ಇದೆ, ನಾವು ಗೆದ್ದರೆ ನಿಮ್ಮ ಪರವಾಗಿ ಹೋರಾಟವನ್ನು ಮಾಡಿ ಕೊಡಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಭರವಸೆಯನ್ನು ನೀಡಿದರು.
ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಮಾತನಾಡಿ, ಸರ್ಕಾರಿ ಶಾಲಾ ಶಿಕ್ಷಕರುಗಳಿಗೆ ಸರ್ಕಾರ ನೋಡಿಕೊಳ್ಳುತ್ತಿದ್ದರೆ, ಖಾಸಗಿ ಶಾಲಾ ಶಿಕ್ಷಕರಿಗೆ ಯಾವುದೇ ರೀತಿಯ ಭದ್ರತೆ ಇಲ್ಲವಾಗಿದೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವನ್ನು ಸಾಧಿಸಿದರೆ ಇದನ್ನು ಪರಿಹಾರ ಮಾಡಲಾಗುವುದು, ವಿಧಾನ ಸಭೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದಂತೆ ಈ ಚುನಾವಣೆಯಲ್ಲಿಯೂ ಸಹಾ ಬೆಂಬಲವನ್ನು ನೀಡಿ, ಕಾಂಗ್ರೆಸ್ ಸರ್ಕಾರ ಶಿಕ್ಷಕರ ಪರವಾಗಿ ಇದೆ ಎಂದರು.
ಇದನ್ನೂ ಓದಿ: ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ | ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ
ಕಾರ್ಯಕ್ರಮದಲ್ಲಿ ಡಿಸಿಸಿ ಅಧ್ಯಕ್ಷ ತಾಜ್‌ಪೀರ್, ಮಾಜಿ ಅಧ್ಯಕ್ಷ ಫಾತ್ಯರಾಜನ್, ಪ್ರಧಾನ ಕಾರ್ಯದರ್ಶಿಗಳಾದ ಮೈಲಾರಪ್ಪ, ಲಕ್ಶ್ಮೀಕಾಂತ, ಮಹಿಳಾ ಘಟಕದ ಅಧ್ಯಕ್ಷಿ ನಂದಿನಿ ಗೌಡ, ಪ್ರಕಾಶ್, ಓಬಿಸಿ ವಿಭಾಗದ ಅಧ್ಯಕ್ಷರಾದ ಎನ್.ಡಿ.ಕುಮಾರ್, ತಿಪ್ಪೇಸ್ವಾಮಿ, ಆಸಿಫ್ ಸೇರಿದಂತೆ ಇತರರು ಭಾಗವಹಿಸಿದ್ದರು.
