CHITRADURGA NEWS | 22 MAY 2026
ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳ ಕರಕುಶಲತೆ, ಸೃಜನಶೀಲತೆ ಹಾಗೂ ತಾಂತ್ರಿಕ ಕೌಶಲ್ಯ ಉತ್ತೇಜಿಸುವ ಉದ್ದೇಶದಿಂದ ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ರಾಜ್ಯ ಮಟ್ಟದ ‘ಸ್ಥಳದಲ್ಲೇ ಪಾದರಕ್ಷೆ ತಯಾರಿಕಾ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ. ಈ ಸಂಬಂಧ ಚರ್ಮ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಮೇ 30 ಕೊನೆಯ ದಿನ.

ಇದನ್ನೂ ಓದಿ: ಬಾಲ್ಯವಿವಾಹ ಕಂಡು ಬಂದರೆ ನಿರ್ದಾಕ್ಷಿಣ್ಯ ಕಾನೂನು ಕ್ರಮ | ಜಿಲ್ಲಾಧಿಕಾರಿ ವೆಂಕಟೇಶ್
ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳು ಅಥವಾ ಅವರ ಕುಟುಂಬದವರು (ಆರುಂಧತಿಯಾರ್, ಚಮಾರ್, ಚಂಬಾರ್, ಮಾದರ್, ಮಾದಿಗ, ಹರಳಯ್ಯ, ಮೋಚಿ, ಸಮಗಾರ ಸೇರಿದಂತೆ ನಿಗಮದ ಪಟ್ಟಿಯಲ್ಲಿರುವ ಉಪಜಾತಿಗಳು) ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.
ಅಭ್ಯರ್ಥಿಗಳ ವಯೋಮಿತಿ 18 ರಿಂದ 55 ವರ್ಷದೊಳಗಿರಬೇಕು. ಸ್ಪರ್ಧಾರ್ಥಿಗಳು ಪುರುಷ ಅಥವಾ ಮಹಿಳೆಯರ ಒಂದು ಜೊತೆ ಪಾದರಕ್ಷೆಯನ್ನು ಮಾತ್ರ ತಯಾರಿಸಬೇಕಾಗಿದ್ದು, ಕೊಲ್ಲಾಪುರಿ ಮಾದರಿಯ ಪಾದರಕ್ಷೆಗಳನ್ನು ಈ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಪಾದರಕ್ಷೆ ತಯಾರಿಕೆಗೆ ಅಗತ್ಯವಿರುವ ಕಚ್ಚಾವಸ್ತು ಹಾಗೂ ಉಪಕರಣಗಳನ್ನು ಸ್ಪರ್ಧಾರ್ಥಿಗಳೇ ಸ್ವತಃ ತರಬೇಕಿರುತ್ತದೆ.
ಈ ಸ್ಪರ್ಧೆಯು ಜೂನ್ 06 ರಂದು ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಬೆಂಗಳೂರಿನ ಕೆಂಗೇರಿ, ಉಲ್ಲಾಳ ಉಪನಗರದಲ್ಲಿರುವ ‘ಕರ್ನಾಟಕ ಇನ್ಸಿಟ್ಯೂಟ್ ಆಫ್ ಲೆದರ್ ಮತ್ತು ಫ್ಯಾಷನ್ ಟೆಕ್ನಾಲಜಿ” ಆವರಣದಲ್ಲಿ ನಡೆಯಲಿದೆ. ಭಾಗವಹಿಸುವ ಕುಶಲಕರ್ಮಿಗಳಿಗೆ ಊಟದ ವ್ಯವಸ್ಥೆ ಇರಲಿದ್ದು, ಸೂಕ್ತ ದಾಖಲಾತಿ ಒದಗಿಸಿದಲ್ಲಿ ನಿಯಮಾನುಸಾರ ಟಿ.ಎ ಮತ್ತು ಡಿ.ಎ ಭತ್ಯೆ ನೀಡಲಾಗುವುದು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮೇ.21 | ಹತ್ತಿ ರೇಟ್ ಎಷ್ಟಿದೆ?
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರೂ. 50,000, ದ್ವಿತೀಯ ಸ್ಥಾನಕ್ಕೆ ರೂ. 30,000, ತೃತೀಯ ಸ್ಥಾನ ಪಡೆದವರಿಗೆ ರೂ. 20,000 ಹಾಗೂ ಇಬ್ಬರಿಗೆ ತಲಾ ರೂ. 10,000 ಗಳ ಸಮಾಧಾನಕರ ಬಹುಮಾನ ನೀಡಲಾಗುವುದು.
ಆಸಕ್ತರು ಜಾತಿ ಪ್ರಮಾಣ ಪತ್ರ, ವೃತ್ತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ನಿಗಮದ ತರಬೇತಿ ದಾಖಲೆ ಅಥವಾ ಇ-ಶ್ರಮ್ ಕಾರ್ಡ್ ಲಗತ್ತಿಸಿ, ಲಿಡ್‍ಕರ್ ಕೇಂದ್ರ ಕಛೇರಿಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು. ಸ್ಪರ್ಧೆಯ ಅರ್ಜಿ ಫಾರಂ ಅನ್ನು ನಿಗಮದ ಅಧಿಕೃತ ವೆಬ್‍ಸೈಟ್ https://lidkar.com ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: ತರಾಸು ರಂಗಮಂದಿರಕ್ಕೆ ಹೊಸ ಲುಕ್ | ಡಿಸಿ ವೆಂಕಟೇಶ್ ವೀಕ್ಷಣೆ | ಶೀಘ್ರ ಉದ್ಘಾಟನೆ
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರು/ಜಿಲ್ಲಾ ಸಂಯೋಜಕರನ್ನು ಅಥವಾ ಸಹಾಯವಾಣಿ ಸಂಖ್ಯೆ 9482300400 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
