By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಡಾ.ಕಂಠೀರವ ಬಾಲಸರಸ್ವತಿ ಅವರಿಗೆ ನುಡಿನಮನ
    ಡಾ.ಕಂಠೀರವ ಬಾಲಸರಸ್ವತಿ ಅವರಿಗೆ ನುಡಿನಮನ | ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭಾಗೀ 
    2 hours ago
    ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
    ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ | ಪ್ರತಿಭಾ ಪುರಸ್ಕಾರ
    2 hours ago
    Adumalleshwara nari(fox)
    ಆಡುಮಲ್ಲೇಶ್ವರದಲ್ಲಿ 9 ಮರಿಗಳನ್ನು ಹೆತ್ತ ಗುಳ್ಳೆನರಿ | ಕರಡಿ ಸೀನಮ್ಮ ಕೂಡಾ ಮತ್ತೊಂದು ಮರಿಗೆ ಜನ್ಮ
    3 hours ago
    Farmer
    ರೈತರಿಗೆ ಗುಡ್ ನ್ಯೂಸ್ | 81.10 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ | ರೈತರ ಖಾತೆಗೆ ಜಮಾ
    16 hours ago
    Power outage on May 1
    ನಾಳೆ ಕರೆಂಟ್ ಕಟ್ | ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ, ಇಲ್ಲಿದೆ ಮಾಹಿತಿ..
    17 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    Accident between bike and car
    ಬೈಕ್‌ – ಕಾರು ನಡುವೆ ಅಪಘಾತ | ಸ್ಥಳದಲ್ಲೇ ಇಬ್ಬರು ಮೃತ
    2 days ago
    ಬೈಕ್ – ಕಾರ್ ನಡುವೆ ಭೀಕರ ಅಪಘಾತ | ಬೈಕ್ ಸವಾರರು ಇಬ್ಬರು ಸಾವು
    1 month ago
    ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ | ಚಾಲಕರು ಸಾವು
    1 month ago
    car accident near molakalmuru rajapura
    ಭೀಕರ ರಸ್ತೆ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ
    2 months ago
    ಎತ್ತಿನ ಗಾಡಿಗೆ ಬುಲೆರೋ ಡಿಕ್ಕಿ | ಸ್ಥಳದಲ್ಲೇ ಎತ್ತುಗಳು ಸಾವು
    2 months ago
  • ತಾಲೂಕು
    ತಾಲೂಕುShow More
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    1 day ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    4 days ago
    ಕುಂಚಿಟಿಗ ಮಠದಲ್ಲಿ ವಿಶ್ವ ತಾಯಂದಿರ ದಿನಾಚರಣೆ
    ತಾಯಂದಿರ ದಿನಾಚರಣೆ ವಿಶೇಷ | ಕುಂಚಿಟಿಗ ಮಠದಲ್ಲಿ ಮಾತೃ ಸಂಗಮ
    2 weeks ago
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    3 weeks ago
    ಕೆರೆ ಹುಳೆತ್ತುವ ಕಾಮಗಾರಿಯನ್ನು ಸಾಣೆಹಳ್ಳಿ ಶ್ರೀ ವೀಕ್ಷಣೆ
    ಸಾಣೇಹಳ್ಳಿ ಕೆರೆ ಹೂಳೆತ್ತುವ ಕಾರ್ಯ ಶೇ.75 ರಷ್ಟು ಕೆಲಸ ಪೂರ್ಣ | ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ 
    3 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | 25 ಮೇ | ಚನ್ನಗಿರಿ, ತೀರ್ಥಹಳ್ಳಿ ಸೇರಿ ರಾಜ್ಯದ ಅಡಿಕೆ ರೇಟ್‌
    16 hours ago
    arecanut price list
    ಅಡಿಕೆ ಧಾರಣೆ | 20 ಮೇ | ಚನ್ನಗಿರಿ ಸೇರಿ ರಾಜ್ಯದ ಅಡಿಕೆ ರೇಟ್‌
    6 days ago
    arecanut price list
    ಅಡಿಕೆ ಧಾರಣೆ | 19 ಮೇ | ಭೀಮಸಮುದ್ರ ಸೇರಿ ವಿವಿಧ ಮಾರುಕಟ್ಟೆಗಳ ರೇಟ್‌
    7 days ago
    arecanut price list
    ಅಡಿಕೆ ಧಾರಣೆ | 16 ಮೇ | ರಾಜ್ಯದ ಅಡಿಕೆ ಮಾರುಕಟ್ಟೆಗಳ ನೋಟ
    1 week ago
    arecanut price list
    ಅಡಿಕೆ ಧಾರಣೆ | 6 ಮೇ | ರಾಶಿ ಅಡಿಕೆ ಬೆಲೆ ಏರಿಕೆ
    3 weeks ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಮೇ. 26 | ಹಠಾತ್ ಆರ್ಥಿಕ ಲಾಭ, ವೃತ್ತಿಪರ ವ್ಯವಹಾರಗಳು ಅಭಿವೃದ್ಧಿ
    5 hours ago
    today bhavishya
    ದಿನ ಭವಿಷ್ಯ | ಮೇ. 25 | ಉದ್ಯೋಗಗಳಿಗೆ ಅನುಕೂಲಕರ ವಾತಾವರಣ, ಕೈಗೊಂಡ ಕೆಲಸಗಳಲ್ಲಿ ಅಡೆತಡೆಗಳು
    1 day ago
    today bhavishya
    ದಿನ ಭವಿಷ್ಯ | ಮೇ. 24 | ಹಠಾತ್ ಪ್ರಯಾಣದ ಸೂಚನೆ, ಅರೋಗ್ಯದಲ್ಲಿ ಎಚ್ಚರ
    2 days ago
    today bhavishya
    ದಿನ ಭವಿಷ್ಯ | ಮೇ.23 | ನಿರುದ್ಯೋಗಿಗಳಿಗೆ ಉದ್ಯೋಗ, ದೂರದ ಪ್ರಯಾಣ ಬೇಡ
    3 days ago
    today bhavishya
    ದಿನ ಭವಿಷ್ಯ | ಮೇ. 22 | ಉದ್ಯೋಗಗಳಲ್ಲಿ ಅನುಕೂಲಕರ ವಾತಾವರಣ, ಹಠಾತ್ ಆರ್ಥಿಕ ಲಾಭ
    4 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.25 | ಮೆಕ್ಕೆಜೋಳ, ರಾಗಿ ರೇಟ್..
    21 hours ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.23 | ಹತ್ತಿ ರೇಟ್….
    3 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.22| ಮೆಕ್ಕೆಜೋಳ, ಶೇಂಗಾ ರೇಟ್..
    4 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.21 | ಹತ್ತಿ ರೇಟ್ ಎಷ್ಟಿದೆ?
    5 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.20 | ಮೆಕ್ಕೆಜೋಳ, ರಾಗಿ ರೇಟ್..
    6 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಪೂರ್ವಭಾವಿ ಸಭೆ
    ಹೊಳಲ್ಕೆರೆ ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರ | ಶಾಸಕ ಎಂ.ಚಂದ್ರಪ್ಪ 
    3 weeks ago
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ | ಸಿದ್ಧಯ್ಯನಕೋಟೆ ಶ್ರೀ, ಎಚ್.ಆಂಜನೇಯ ಭಾಗೀ 
    1 month ago
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    2 months ago
    ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    2.18 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ 
    2 months ago
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ 
    2 months ago
  • ಹಿರಿಯೂರು
    ಹಿರಿಯೂರುShow More
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    2 days ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    1 month ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    3 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    3 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    4 months ago
  • ಹೊಸದುರ್ಗ
    ಹೊಸದುರ್ಗShow More
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    1 day ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    4 days ago
    ಕುಂಚಿಟಿಗ ಮಠದಲ್ಲಿ ವಿಶ್ವ ತಾಯಂದಿರ ದಿನಾಚರಣೆ
    ತಾಯಂದಿರ ದಿನಾಚರಣೆ ವಿಶೇಷ | ಕುಂಚಿಟಿಗ ಮಠದಲ್ಲಿ ಮಾತೃ ಸಂಗಮ
    2 weeks ago
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    3 weeks ago
    ಕೆರೆ ಹುಳೆತ್ತುವ ಕಾಮಗಾರಿಯನ್ನು ಸಾಣೆಹಳ್ಳಿ ಶ್ರೀ ವೀಕ್ಷಣೆ
    ಸಾಣೇಹಳ್ಳಿ ಕೆರೆ ಹೂಳೆತ್ತುವ ಕಾರ್ಯ ಶೇ.75 ರಷ್ಟು ಕೆಲಸ ಪೂರ್ಣ | ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ 
    3 weeks ago
  • Life Style
    Life StyleShow More
    sweating good or bad
    ಬೆವರು ಸುರಿಯುವುದು ನಿಮ್ಮ ಚರ್ಮಕ್ಕೆ ಒಳ್ಳೆಯದೇ ಅಥವಾ ಕೆಟ್ಟದೇ? ತಿಳಿಯಿರಿ
    4 hours ago
    uterus
    ನಿಮ್ಮ ಪ್ರತಿದಿನದ ಈ ಅಭ್ಯಾಸಗಳು ಗರ್ಭಾಶಯವನ್ನು ದುರ್ಬಲಗೊಳಿಸುತ್ತವೆಯಂತೆ
    5 hours ago
    skin being damaged by AC air
    ಎಸಿ ಗಾಳಿಯಿಂದ ನಿಮ್ಮ ಚರ್ಮ ಹಾನಿಗೊಳಗಾಗುತ್ತಿದೆಯೇ? ಹಾಗಾದ್ರೆ ನಿಮ್ಮ ಚರ್ಮವನ್ನು ಹೀಗೆ ಕಾಳಜಿ ಮಾಡಿ
    1 day ago
    buttermilk
    ಮಜ್ಜಿಗೆ ಕುಡಿಯುವುದರಿಂದ ಚರ್ಮಕ್ಕಾಗುವ ಪ್ರಯೋಜನಗಳೇನು ಗೊತ್ತಾ?
    1 day ago
    Hot compress or cold compress
    ಹಾಟ್ ಕಂಪ್ರೆಸ್ ಅಥವಾ ಕೋಲ್ಡ್‍ ಕಂಪ್ರೆಸ್; ಇವೆರಡರಲ್ಲಿ ಮುಟ್ಟಿನ ನೋವಿಗೆ ಯಾವುದು ಉತ್ತಮ?
    2 days ago
Reading: ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ | ಪ್ರತಿಭಾ ಪುರಸ್ಕಾರ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ | ಪ್ರತಿಭಾ ಪುರಸ್ಕಾರ

News Desk Chitradurga News
Last updated: 26 May 2026 09:55
News Desk Chitradurga News
2 hours ago
Share
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
SHARE

CHITRADURGA NEWS | 26 MAY 2026

ಚಿತ್ರದುರ್ಗ: ಸತ್ಯವನ್ನು ಸೂತ್ರವಾಗಿಟ್ಟುಕೊಂಡು ಸುಖದ ದಾರಿ ಕಂಡುಕೊಂಡ ಏಕೈಕ ಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಎಂದು ಹಿರಿಯೂರಿನ ಗಿರೀಶ ಪದವಿಪೂರ್ವ ಕಾಲೇಜು ನಿವೃತ್ತ ಉಪ ಪ್ರಾಚಾರ್ಯರಾದ ಹೆಚ್.ಆರ್.ತಿಪ್ಪೇಸ್ವಾಮಿ ಹೇಳಿದರು.

ಇದನ್ನೂ ಓದಿ: ಆಡುಮಲ್ಲೇಶ್ವರದಲ್ಲಿ 9 ಮರಿಗಳನ್ನು ಹೆತ್ತ ಗುಳ್ಳೆನರಿ | ಕರಡಿ ಸೀನಮ್ಮ ಕೂಡಾ ಮತ್ತೊಂದು ಮರಿಗೆ ಜನ್ಮ

ಜಿಲ್ಲಾ ವೀರಶೈವ ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜದ ವತಿಯಿಂದ ನೀಲಕಂಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ನಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ಸಂಸಾರದ ತಾಪತ್ರೆ, ಗಂಡನ ಮನೆಯವರು ಎಷ್ಟೆ ಕಿರುಕುಳ ನೀಡಿದರೂ ಸಹನೆ, ತಾಳ್ಮೆಯನ್ನು ಕಳೆದುಕೊಳ್ಳಲಿಲ್ಲ. ಕ್ರಿಯಾಶೀಲತೆ, ಸೃಜನಶೀಲತೆ ನಡೆ ಹೊಂದಿದ್ದ ಹೇಮರೆಡ್ಡಿ ಮಲ್ಲಮ್ಮ ಭಕ್ತಿಯಿಂದ ಮಲ್ಲಯ್ಯನನ್ನು ಪ್ರಾರ್ಥಿಸುತ್ತಿದ್ದಳು. ಕುಟುಂಬಕ್ಕೆ, ಸಮಾಜಕ್ಕೆ ಬದುಕನ್ನು ಮೀಸಲಿಟ್ಟು, ಸದಾ ಮನೆಯ ಒಳಿತನ್ನು ಬಯಸಿದವಳು. ಶಿಸ್ತು, ಸಂಯಮ, ಬದ್ದತೆಯಿದ್ದ ಕಾರಣ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಇಷ್ಟಪಟ್ಟು ಕೆಲಸ ಮಾಡುತ್ತಿದ್ದಳು. ಇಡೀ ಬದುಕೆ ಮೌಲ್ಯಭರಿತವಾಗಿತ್ತು ಎಂದು ಗುಣಗಾನ ಮಾಡಿದರು.

ಶುದ್ದ ಮನಸ್ಸಿನ ಹೇಮರೆಡ್ಡಿ ಮಲ್ಲಮ್ಮ ಧಾರ್ಮಿಕ ಆಚರಣೆಯಲ್ಲಿ ಅಪಾರ ಆಸಕ್ತಿಯಿಟ್ಟುಕೊಂಡಿದ್ದರಿಂದ ಸರಳತೆಯಿಂದ ಶ್ರೇಷ್ಟತೆ ಕಡೆಗೆ ಸಾಗಲು ಸಾಧ್ಯವಾಯಿತು. 

ಹದಿನಾಲ್ಕು, ಹದಿನೈದನೆ ಶತಮಾನದ ಹೇಮರೆಡ್ಡಿ ಮಲ್ಲಮ್ಮನಲ್ಲಿ ಲೋಕಪ್ರಜ್ಞೆ, ಪ್ರಾಪಂಚಿಕ ಜ್ಞಾನವಿತ್ತು. ಸಂಸ್ಕಾರಯುತ ತಂದೆ-ತಾಯಿಗಳ ಮಗಳಾಗಿ ಜನಿಸಿದ್ದರಿಂದ ಬಾಲ್ಯದಲ್ಲಿಯೇ ಸಹನೆ, ಸೇವಾ ಗುಣವಿತ್ತು. ಪ್ರಸ್ತುತ ಸಮಾಜದಲ್ಲಿ ನೈತಿಕತೆ ಕುಸಿಯುತ್ತಿದೆ. ಸರಳವಾದ ನಡೆ ನುಡಿಯಿಂದ ಎಲ್ಲವನ್ನು ಬದಲಾಯಿಸಬಹುದು ಎಂಬುದಕ್ಕೆ ಹೇಮರೆಡ್ಡಿ ಮಲ್ಲಮ್ಮನೆ ಸಾಕ್ಷಿ ಎಂದರು.

ಇದನ್ನೂ ಓದಿ: ಅಡಿಕೆ ಧಾರಣೆ | 25 ಮೇ | ಚನ್ನಗಿರಿ, ತೀರ್ಥಹಳ್ಳಿ ಸೇರಿ ರಾಜ್ಯದ ಅಡಿಕೆ ರೇಟ್‌

ಬದ್ದ, ಬಸವ, ಅಂಬೇಡ್ಕರ್, ಅಬ್ದುಲ್‍ಕಲಾಂ, ಅಟಲ್ ಬಿಹಾರಿವಾಜಪೇಯಿ, ಅಕ್ಕಮಹಾದೇವಿ ಇವರುಗಳ ಬದುಕೆ ಎಲ್ಲರಿಗೂ ಆದರ್ಶವಾಗಬೇಕು. ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸಿದರೆ ಸಾಲದು, ಜೀವನದಲ್ಲಿ ಸಂಸ್ಕಾರ ಕಲಿಯಬೇಕು. ಗುರು-ಹಿರಿಯರು ಪೋಷಕರನ್ನು ಗೌರವಿಸುವ ಗುಣ ಮೈಗೂಡಿಸಿಕೊಳ್ಳಬೇಕು. ಆತ್ಮವಿಶ್ವಾಸವಿಟ್ಟುಕೊಂಡರೆ ನಿಮ್ಮ ಮೇಲೆ ನಿಮಗೆ ನಂಬಿಕೆ ಹುಟ್ಟುತ್ತದೆ ಎಂದು ತಿಳಿಸಿದರು.

ಮುಂಬೈನ ಪರಮಾಣು ಶಕ್ತಿ ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್ ಕೆ.ಶಿವಪ್ರಕಾಶ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಸನ್ಮಾನ ನನಗೆ ಜವಾಬ್ದಾರಿಯನ್ನು ಹೆಚ್ಚಿಸಿ ಸಮಾಜದ ಬಂಧುಗಳ ಏಳಿಗೆಗೆ ಶ್ರಮಿಸಲು ಪ್ರೇರೇಪಿಸಿದೆ. ಹೇಮರೆಡ್ಡಿ ಮಲ್ಲಮ್ಮನಲ್ಲಿದ್ದ ಆದರ್ಶ ಗುಣಗಳನ್ನು ಇಂದಿನ ಎಲ್ಲಾ ಮಹಿಳೆಯರು ಅಳವಡಿಸಿಕೊಳ್ಳಬೇಕಿದೆ. 

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರೆ ಇತರೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಕಠಿಣ ಪರಿಶ್ರಮ, ಪ್ರಾಮಾಣಿಕತೆಯಿಂದ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ. ಶಿಕ್ಷಣದಿಂದ ಮಾತ್ರ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್ | 81.10 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ | ರೈತರ ಖಾತೆಗೆ ಜಮಾ

ಜಿಲ್ಲಾ ವೀರಶೈವ ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಡಾ.ಎಲ್.ಪಾಲಾಕ್ಷಯ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜದ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಲು ಬಿಲ್ಡಿಂಗ್ ಕಟ್ಟಲು ಪ್ಲಾನ್ ಮಾಡಿದ್ದೇವೆ. ಇದಕ್ಕೆ ಸಮಾಜದ ಬಾಂಧವರು ನೆರವು ನೀಡಿದ್ದಾರೆ. ಮುಂದಿನ ವರ್ಷ ಕಟ್ಟಡ ಕಟ್ಟೋಣ. 

ಹೇಮರೆಡ್ಡಿ ಮಲ್ಲಮ್ಮ ಯಾವುದೇ ಪ್ರತಿಫಲ, ಅಪೇಕ್ಷೆಗಳಿಲ್ಲದೆ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಭಕ್ತಿಯಿಂದ ಸಮಾಜ ಸೇವೆ ಮಾಡಿಕೊಂಡು ಮಹಾ ಸಾದ್ವಿ ಎನಿಸಿಕೊಂಡಳು. ಸಮಾಜದ ಪ್ರತಿಯೊಬ್ಬ ಮಹಿಳೆಯರು ಹೇಮರಡ್ಡಿ ಮಲ್ಲಮ್ಮನಲ್ಲಿದ್ದ ಆದರ್ಶ ಗುಣಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.

ಎಸ್.ಎಸ್.ಎಲ್.ಸಿ. ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ: ಜಿಲ್ಲಾ ಕಾಂಗ್ರೆಸ್ ಪದವೀಧರ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸುಚೇತ ನೇಮಕ

ಜಿಲ್ಲಾ ವೀರಶೈವ ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಡಿ.ಟಿ.ಶಿವಾನಂದಪ್ಪ, ಬಳ್ಳಾರಿ ಮಹಾನಗರಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್, ಗೌರವಾಧ್ಯಕ್ಷ ಜಿ.ಚಿದಾನಂದಪ್ಪ, ಹೆಚ್.ಟಿ.ನಾಗಿರೆಡ್ಡಿ, ಖಜಾಂಚಿ ಕೆ.ಪಿ.ಬಸವರಾಜ, ಉಪಾಧ್ಯಕ್ಷರುಗಳಾದ ಆರ್.ಡಿ.ತಿಪ್ಪೇಸ್ವಾಮಿ, ಎನ್.ಬಿ.ವಿಶ್ವನಾಥ್ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ChitradurgaChitradurga newsHemareddy MallammaPratibha Puraskarಚಿತ್ರದುರ್ಗಚಿತ್ರದುರ್ಗ ನ್ಯೂಸ್ಪ್ರತಿಭಾ ಪುರಸ್ಕಾರಹೇಮರೆಡ್ಡಿ ಮಲ್ಲಮ್ಮ
Share This Article
Facebook Email Print
Previous Article Adumalleshwara nari(fox) ಆಡುಮಲ್ಲೇಶ್ವರದಲ್ಲಿ 9 ಮರಿಗಳನ್ನು ಹೆತ್ತ ಗುಳ್ಳೆನರಿ | ಕರಡಿ ಸೀನಮ್ಮ ಕೂಡಾ ಮತ್ತೊಂದು ಮರಿಗೆ ಜನ್ಮ
Next Article ಡಾ.ಕಂಠೀರವ ಬಾಲಸರಸ್ವತಿ ಅವರಿಗೆ ನುಡಿನಮನ ಡಾ.ಕಂಠೀರವ ಬಾಲಸರಸ್ವತಿ ಅವರಿಗೆ ನುಡಿನಮನ | ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭಾಗೀ 
Leave a Comment

Leave a Reply Cancel reply

Your email address will not be published. Required fields are marked *

ಡಾ.ಕಂಠೀರವ ಬಾಲಸರಸ್ವತಿ ಅವರಿಗೆ ನುಡಿನಮನ
ಡಾ.ಕಂಠೀರವ ಬಾಲಸರಸ್ವತಿ ಅವರಿಗೆ ನುಡಿನಮನ | ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭಾಗೀ 
ಮುಖ್ಯ ಸುದ್ದಿ
Adumalleshwara nari(fox)
ಆಡುಮಲ್ಲೇಶ್ವರದಲ್ಲಿ 9 ಮರಿಗಳನ್ನು ಹೆತ್ತ ಗುಳ್ಳೆನರಿ | ಕರಡಿ ಸೀನಮ್ಮ ಕೂಡಾ ಮತ್ತೊಂದು ಮರಿಗೆ ಜನ್ಮ
ಮುಖ್ಯ ಸುದ್ದಿ
sweating good or bad
ಬೆವರು ಸುರಿಯುವುದು ನಿಮ್ಮ ಚರ್ಮಕ್ಕೆ ಒಳ್ಳೆಯದೇ ಅಥವಾ ಕೆಟ್ಟದೇ? ತಿಳಿಯಿರಿ
Life Style
uterus
ನಿಮ್ಮ ಪ್ರತಿದಿನದ ಈ ಅಭ್ಯಾಸಗಳು ಗರ್ಭಾಶಯವನ್ನು ದುರ್ಬಲಗೊಳಿಸುತ್ತವೆಯಂತೆ
Life Style
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up