
CHITRADURGA NEWS | 26 MAY 2026
ಚಿತ್ರದುರ್ಗ:ಕೋಟೆ ನಗರಿ ಚಿತ್ರದುರ್ಗದ ಹಸಿರ ತೊಟ್ಟಿಲು, ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಸದ್ಯ ಮರಿಗಳ ಕಲರವ.
38 ವರ್ಷಗಳ ಇತಿಹಾಸ ಹೊಂದಿರುವ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಹೊಸ ಸ್ವರೂಪ ಸಿಕ್ಕಿದೆ. ಇಲ್ಲಿರುವ ಪ್ರಾಣಿಗಳಲ್ಲಿ ಕೂಡಾ ಹೊಸ ಚೈತನ್ಯ ಮೂಡುತ್ತಿದೆ.
ಇದನ್ನೂ ಓದಿ:ಅಡಿಕೆ ಧಾರಣೆ | 25 ಮೇ | ಚನ್ನಗಿರಿ, ತೀರ್ಥಹಳ್ಳಿ ಸೇರಿ ರಾಜ್ಯದ ಅಡಿಕೆ ರೇಟ್
ಇದಕ್ಕೆ ಸಾಕ್ಷಿ ಎಂಬಂತೆ ಪ್ರಾಣಿ ಸಂಗ್ರಹಾಲಯದ ಇತಿಹಾಸದಲ್ಲಿಯೇ ಇದೇ ಮೊದಲು ಎಂಬಂತೆ ಗುಳ್ಳೆ ನರಿಗಳು ಮರಿ ಹಾಕಿವೆ. ಎರಡು ನರಿಗಳು ಮರಿ ಹಾಕಿದ್ದು, ಒಂದು ಮೂರು ಮರಿ ಹಾಕಿದ್ದರೆ, ಮತ್ತೊಂದು ಬರೋಬ್ಬರಿ 9 ಮರಿಗಳನ್ನು ಹಾಕಿದೆ.

ಪ್ರಾಣಿ ಸಂಕುಲದಲ್ಲಿ ಮರಿ ಹಾಕಿದಾಗ ಡೆತ್ ರೇಟ್ ಕೂಡಾ ಹೆಚ್ಚಾಗಿರುತ್ತದೆ. ಆದರೆ, ಆಡುಮಲ್ಲೇಶ್ವರ ಮೃಗಾಲಯದ ಸಿಬ್ಬಂದಿಗಳು ಈ ಮರಿಗಳನ್ನು ಕಾಪಾಡಿಕೊಳ್ಳುವಲ್ಲಿ ಕಳೆದು ಐದು ತಿಂಗಳಿನಿಂದ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ರೈತರಿಗೆ ಗುಡ್ ನ್ಯೂಸ್ | 81.10 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ | ರೈತರ ಖಾತೆಗೆ ಜಮಾ
ಐದು ತಿಂಗಳ ನಂತರ ಕರಡಿ ಹಾಗೂ ನರಿಗಳು ಮರಿ ಹಾಕಿರುವ ವಿಷಯ ಬಹಿರಂಗವಾಗಿದ್ದು, ಈಗ ಮರಿಗಳ ಕಲರವ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
ಸಾಮಾನ್ಯವಾಗಿ ನರಿಗಳು 2 ರಿಂದ 8 ಮರಿಗಳಿಗೆ ಜನ್ಮ ನೀಡುತ್ತವೆ ಎನ್ನುವುದು ತಜ್ಞ ವಲಯದ ಮಾತು. ಆದರೆ, ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯದ ನರಿ ಬರೋಬ್ಬರಿ 9 ಮರಿಗಳಿಗೆ ಜನ್ಮ ನೀಡಿದೆ.
ಇದನ್ನೂ ಓದಿ:Adumalleshwara Zoo: ಆಹಾ ಬನ್ನಿ ಜೋಗಿಮಟ್ಟಿ – ಆಡುಮಲ್ಲೇಶ್ವರದ ಸೊಬಗ ನೋಡಿ | ವೀಡಿಯೋ ಸ್ಟೋರಿ
ಮಲೆನಾಡು, ಬಯಲು ಸೀಮೆ ಭಾಗದಲ್ಲಿ ಜೀವಿಸುವ ಅತ್ಯಂತ ಸೂಕ್ಷ್ಮ ಮತ್ತು ಚತುರ ಪ್ರಾಣಿ ನರಿ. ಮಲೆನಾಡು ಭಾಗದಲ್ಲಿ ಸಂತತಿ ಕ್ಷೀಣಿಸುತ್ತಿರುವ ಮಾತುಗಳ ನಡುವೆಯೇ ಬಯಲು ಸೀಮೆಯಲ್ಲಿ ಸಂತಸದ ಸುದ್ದಿಗಳು ಹರಿದಾಡಿವೆ.

ಮಕ್ಕಳು ಕಾರ್ಟೂನ್‌ಗಳಲ್ಲಷ್ಟೇ ನರಿಗಳು ಹೂಳಿಡುವುದನ್ನು ಕೇಳುವ ಸಂದರ್ಭದಲ್ಲಿ ಮಲೆನಾಡು ಭಾಗದಲ್ಲಿ ನರಿಗಳ ಸಂತತಿ ವೃದ್ಧಿಸುತ್ತಿದೆ ಎನ್ನುವ ಮಾತುಗಳು ತಜ್ಞ ವಲಯದಲ್ಲಿ ಕೇಳಿ ಬರುತ್ತಿವೆ. ಸಾಕಷ್ಟು ಸಲ ಹಳ್ಳಿಗಳ ಆಸುಪಾಸಿನಲ್ಲಿ ನರಿಗಳು ಕಾಣಿಸಿಕೊಳ್ಳುತ್ತಿವೆ.
ಮೂರನೇ ಮರಿಗೆ ಕರಡಿ ಸೀನಮ್ಮ ಜನ್ಮ
ಮೂರು ವರ್ಷ ಹಿಂದೆ ಅವಳಿ ಮರಿಗಳಿಗೆ ಕರಡಿ ಮರಿಗಳಿಗೆ ಜನ್ಮ ನೀಡಿ ಮೃಗಾಲಯದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದ ಸೀನಮ್ಮ ಎಂಬ ಕರಡಿ ಈಗ ಮತ್ತೊಂದು ಮರಿಗೆ ಜನ್ಮ ನೀಡಿರುವುದು ಕೂಡಾ ಮೃಗಾಲಯದ ವಿಶೇಷವಾಗಿದೆ.
ಇದನ್ನೂ ಓದಿ: ಆಡುಮಲ್ಲೇಶ್ವರ ಮೃಗಾಲಯ | ಪ್ರಾಣಿ ದತ್ತು ಪಡೆಯಲು ಸುವರ್ಣಾವಕಾಶ | ಯಾವ ಪ್ರಾಣಿಗೆ ಎಷ್ಟು ರೇಟ್ ?
ಈ ಹಿಂದೆ ಹಲವು ಕರಡಿಗಳು, ನರಿಗಳು ಮೃಗಾಲಯದಲ್ಲಿದ್ದರೂ ಗರ್ಭ ಧರಿಸಿದ, ಮರಿ ಹಾಕಿದ ಉದಾಹರಣೆಗಳಿರಲಿಲ್ಲ. 2022 ಡಿಸೆಂಬರ್‌ನಲ್ಲಿ ಕರಡಿ ಅವಳಿ ಮರಿಗಳಿಗೆ ಜನ್ಮ ನೀಡಿದ್ದು, ಮೃಗಾಲಯದ ಸಿಬ್ಬಂದಿ ಸಂಭ್ರಮಿಸಿ ನಾಮಕರಣ, ಬರ್ತ್ ಡೇ ಕೂಡಾ ಆಚರಿಸಿದ್ದರು.
ಭೂಮಿ, ಭಾನು ಎಂಬ ಹೆಸರಿನ ಎರಡು ಮರಿಗಳು ಈಗ ಮೂರು ವರ್ಷ ಪ್ರಾಯಕ್ಕೆ ಬರುತ್ತಲೇ, ಅವುಗಳೊಟ್ಟಿಗೆ ಮತ್ತೊಂದು ಮರಿಯೂ ಬಂದಿದ್ದು. ಅದಕ್ಕೆ ನಾಮಕರಣ ಮಾಡಲು ಮೃಗಾಲಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ:ಆಡುಮಲ್ಲೇಶ್ವರ ಮೃಗಾಲಯದಲ್ಲಿ ಹೊಸ ದಾಖಲೆ | ಹೊಸ ವರ್ಷದ ದಿನ ಎಷ್ಟು ಕಲೆಕ್ಷನ್ ನೋಡಿ..
ಕರಡಿ ಮರಿ ಹಾಕಿದಾಗ ಒಂದು ದಿನ ಹಾಲು ಕುಡಿಸಿದರೆ ಮತ್ತೊಂದು ದಿನ ಕುಡಿಸಿಲ್ಲ. ಮರಿ ನಿತ್ರಾಣಗೊಂಡಿರುವುದನ್ನು ಗಮನಿಸಿದ ಆರ್‌ಎಫ್‌ಓ ಅಕ್ಷತಾ, ಹಾಗೂ ಸಿಬ್ಬಂದಿಗಳಾದ ರಾಕೇಶ್, ಯಶವಂತ್, ಗಾನವಿ, ಶಿವು ರಾತ್ರೋ ರಾತ್ರಿ ಕರಿಡಿ ಮರಿಗಳಿಗೆ ಫೀಡ್ ಮಾಡುವ ಹಾಲು, ಆಹಾರ ಹುಡುಕಿ ತಂದು ಉಳಿಸಿಕೊಂಡಿದ್ದಾರೆ. ಪಶು ವೈದ್ಯರಾದ ಡಾ.ಗೌರಿ, ಡಾ.ಮುರುಗೇಶ್ ಹಾಗೂ ವನ್ಯಜೀವಿ ತಜ್ಞರಾದ ನರಸಿಂಹ ಅವರ ಶ್ರಮ ಸಾಕಷ್ಟಿದೆ.
ಆಡುಮಲ್ಲೇಶ್ವರ ಮೃಗಾಲಯ ಎಷ್ಟು ಸುಂದರವಾಗಿದೆ ಗೊತ್ತಾ, ವೀಡಿಯೋ ನೀಡಿದ್ದೀರಾ.! ನೋಡಿಲ್ಲ ಅಂದ್ರೆ ಇಲ್ಲಿರುವ ಲಿಂಕ್ ಕ್ಲಿಕ್ ಮಾಡಿ ವೀಡಿಯೋ ಇಲ್ಲಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

