Connect with us

    6 ರಂದು ಶನೇಶ್ವರ ಸ್ವಾಮಿ ದೇಗುಲ ಲೋಕಾರ್ಪಣೆ | ಪ್ರಾಣ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ

    ಮುಖ್ಯ ಸುದ್ದಿ

    6 ರಂದು ಶನೇಶ್ವರ ಸ್ವಾಮಿ ದೇಗುಲ ಲೋಕಾರ್ಪಣೆ | ಪ್ರಾಣ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 3 APRIL 2024
    ಚಿತ್ರದುರ್ಗ: ಇಲ್ಲಿನ ಸೂರ್ಯಪುತ್ರ ನಗರದಲ್ಲಿ ಶ್ರೀಶನೇಶ್ವರಸ್ವಾಮಿ ಲೋಕ ಕಲ್ಯಾಣ ಟ್ರಸ್ಟ್‌ನಿಂದ ನಿರ್ಮಿಸಿರುವ ಶ್ರೀ ಶನೇಶ್ವರಸ್ವಾಮಿಯ ದೇಗುಲ ಲೋಕಾರ್ಪಣೆಗೆ ಸಿದ್ಧತೆ ಪ್ರಾರಂಭವಾಗಿದೆ.

    ‘ಶ್ರೀಶನೇಶ್ವರಸ್ವಾಮಿ ಲೋಕ ಕಲ್ಯಾಣ ಟ್ರಸ್ಟ್‌ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಮೋಹನ್‌ ಕುಮಾರ್‌ ಸ್ವಾಮೀಜಿ ಕೃಪಾಶೀರ್ವಾದೊಂದಿಗೆ ಏಪ್ರಿಲ್‌ 4, 5 ಹಾಗೂ 6 ರವರೆಗೆ ಧಾರ್ಮಿಕ ಸಮಾರಂಭ ನಡೆಯಲಿದೆ’ ಎಂದು ಟ್ರಸ್ಟ್‌ ಅಧ್ಯಕ್ಷ ಸಿ.ಶಂಕರಮೂರ್ತಿ ತಿಳಿಸಿದ್ದಾರೆ.

    ಕ್ಲಿಕ್ ಮಾಡಿ ಓದಿ: ಶಾಸಕ ಚಂದ್ರಪ್ಪ ಮನೆಗೆ ಕಾರಜೋಳ ಭೇಟಿ | ಮಾತಿಗೆ ತಪ್ಪಲ್ಲ ಎಂದ ರಘುಚಂದನ್

    ‘ಏ.4 ರಂದು ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಪಂಚಗವ್ಯ, ರಕ್ಷಾಸೂತ್ರಧಾರಣೆ, ಜಲಾಧಿವಾಸ, ಕ್ಷಿರಾಧಿವಾಸ, ಧಾನ್ಯಾಧಿವಾಸ, ಮಂಗಳಾರತಿ ನಡೆಯಲಿದೆ. 5 ರ ಬೆಳಿಗ್ಗೆ 9 ಗಂಟೆಯಿಂದ ಕಲಶಸ್ಥಾಪನೆ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಗಣಪತಿ ಹೋಮ, ರುದ್ರ ಹೋಮ, ಶನೈಶ್ವರ ಹೋಮ, 12.30ಕ್ಕೆ ಪುರ್ಣಾಹುತಿ, ಮಹಾಮಂಗಳಾರತಿ ಸಂಜೆ 5 ಗಂಟೆಗೆ ವಾಸ್ತು ಹೋಮ, ರಾಕ್ಷೆಘ್ನ ಹೋಮ, ಬಲಿಪ್ರಧಾನ ರತ್ನಾಧಿವಾಸ, ಚಿತ್ರಪಟಾಧಿ ವಾಸ, ಫಲಾಧಿವಾಸ, ಶಯ್ಯಧಿವಾಸ ಅಷ್ಟಬಂಧನ ನಡೆಯಲಿದೆ ’ ಎಂದರು.

    ‘6ರಂದು ಬೆಳಗ್ಗೆ 4.30 ರಿಂದ 4.55ಕ್ಕೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಸ್ವಾಮಿಯ ಪ್ರತಿಷ್ಠಾಪನ ಕುಂಭಾಭಿಷೇಕ ದೇವತಾ ದರ್ಶನ ಮೂಹೂರ್ತ. ಬೆಳಗ್ಗೆ 10.30 ರಿಂದ ಬೆಲಗೂರಿನ ಶ್ರೀ ಹನುಮನ್ನದ್ದೂತ ಅವಧೂತರಾದ ಶ್ರೀ ಬಿಂಧುಮಾಧವ ಶರ್ಮಾ ಗುರುಗಳ ಶಿಷ್ಯರಾದ ಶ್ರೀ ವಿಜಯಮಾರುತಿ ಶರ್ಮಾ ಗುರುಗಳ ಅಮೃತ ಹಸ್ತದಿಂದ ಶ್ರೀ ಶ್ರೀಶನೈಶ್ವರಸ್ವಾಮಿಯ ಪ್ರತಿಷ್ಠಾಪನಾ ಮತ್ತು ಕಳಶರೋಹಣ ಕಾರ್ಯಕ್ರಮ ನೆರವೇರಲಿದೆ’ ಎಂದು ತಿಳಿಸಿದರು.

    ಕ್ಲಿಕ್ ಮಾಡಿ ಓದಿ: ಎಚ್ಚರ…ಮನೆಯಿಂದ ಹೊರ ಬರಬೇಡಿ | ಹೆಚ್ಚಿದೆ ಸೂರ್ಯನ ಆರ್ಭಟ

    ಸಮಿತಿ ಉಪಾಧ್ಯಕ್ಷ ಎಂ.ಕೆ.ರಘುನಾಥ್ ಮಾತನಾಡಿ,‘ಗೋಪುರ ಕಳಸ ಸ್ಥಾಪನೆ ನಂತರ ಅಭಿಷೇಕ ಭಕ್ತರಿಂದ ತತ್ಯನ್ಯಾಸಾದಿ ಕಲಾಹೋಮ, ಶನೈಶ್ವರ ಮೂಲಮಂತ್ರ ಹೋಮ, ಮಹಾಪೂರ್ಣಹುತಿ ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಭಿಷೇಕ, ಮಂಗಳದ್ರವ್ಯಗಳ ಅಭಿಷೇಕ, ಅಲಂಕಾರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಧ್ಯಾಹ್ನ 12.30 ಗಂಟೆಯಿಂದ ಅನ್ನ ಸಂತರ್ಪಣೆ ನಡೆಯಲಿದೆ’ ಎಂದರು.

    ಕಾರ್ಯಾಧ್ಯಕ್ಷ ಮಂಜುನಾಥ್‌, ಸಹ ಕಾರ್ಯದರ್ಶಿ ಎಸ್‌.ಟಿ.ನವೀನ್‌ ಕುಮಾರ್, ಖಜಾಂಚಿ ಸಿ.ಎಸ್‌.ಶಂಕರ್‌, ಉಪ ಖಜಾಂಚಿ ಎಸ್‌.ಬಾಲಾಜಿ, ಉಸ್ತುವಾರಿ ಜಿ.ಎನ್‌.ಮಹೇಶ್‌, ಎನ್‌.ಜಿ.ಚಂದ್ರಯ್ಯ ಮಾಸ್ಟರ್‌, ಡಿ.ಗೋಪಿ, ಮಾಲತೇಶ್ ಅರಸ್‌ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top