
CHITRADURGA NEWS | 11 SEPTEMBER 2024
ಚಿತ್ರದುರ್ಗ: ಜಮೀನಿನಲ್ಲಿ ಶ್ರೀಗಂಧ ಮರ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅಬ್ಬಿನಹೊಳೆ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.
ಕಲ್ಯಾಣದುರ್ಗ ತಾಲ್ಲೂಕಿನ ವಡ್ಡೆಪಾಳ್ಯಂ ಕುಂದುರ್ಪಿ ಮಂಡಲಂನ ಕೊಟ್ಟುರಪ್ಪ (26), ಓಬಣ್ಣ (43), ಆರ್.ಈರಣ್ಣ (27) ಹಾಗೂ ಪರಶುರಾಮಪುರದ ಟಿ.ಸಿದ್ದಣ್ಣ (35) ಬಂಧಿತರು.
ಹಿರಿಯೂರು ತಾಲ್ಲೂಕು ಶ್ರೀರಂಗ ಬಡಾವಣೆ ಇ-ಕುರುಬರಹಳ್ಳಿ ಗ್ರಾಮದ ವಿ.ರಾಜು ಇಕ್ಕನೂರು ಕುರಬರಹಳ್ಳಿಯ 4 ಎಕರೆ ಜಮೀನಿನಲ್ಲಿ 300 ಶ್ರೀಗಂಧದ ಸಸಿಗಳನ್ನು ಹಾಕಿದ್ದರು. ಸೆ.3 ರಂದು 3 ಶ್ರೀಗಂಧದ ಮರ ಕಳ್ಳತನ ಮಾಡಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು ನಾಲ್ವರನ್ನು ಬಂಧಿಸಿ, ಬಂಧಿತರಿಂದ ₹ 60,000 ಮೌಲ್ಯದ 30 ಕೆ.ಜಿ. 640ಗ್ರಾಂ ತೂಕದ ಶ್ರೀಗಂಧದ ಮರದ ತುಂಡು, ಕೃತ್ಯಕ್ಕೆ ಉಪಯೋಗಿಸಿದ 2 ಗರಗಸ, 1 ಬಾಚಿ, 2 ಮೋಟಾರ್ ಸೈಕಲ್ ವಶ ಪಡಿಸಿಕೊಂಡಿದ್ದಾರೆ.

ಕ್ಲಿಕ್ ಮಾಡಿ ಓದಿ: ಬೆಳೆ ಹಾನಿಯಿಂದ ಹೆಚ್ಚಿದ ಸಾಲದ ಹೊರೆ | ರೈತ ಆತ್ಮಹತ್ಯೆ
ಅಬ್ಬಿನ ಹೊಳೆ ಪೊಲೀಸ್ ಠಾಣೆಯ ಪಿಎಸ್‌ಐ ಬಾಹುಬಲಿ ಎಂ ಪಡನಾಡ, ಜಿ.ಮಂಜುನಾಥ, ಸಿಬ್ಬಂದಿ ನಾಗರಾಜ್, ನಿಂಗರಾಜು, ದೇವೆಂದ್ರಪ್ಪ, ದಾದಾ ಖಲಂದರ್, ನಾಗಣ್ಣ, ನಾಗರಾಜ ಮತ್ತು ರುದ್ರೇಶ ತಂಡ ಕಾರ್ಯಾಚರಣೆ ನಡೆಸಿದೆ.
ಸಾಕ್ಷಿದಾರರಾದ ಕುರುಬರಹಳ್ಳಿಯ ಯೋಗೀಶ್ ಹಾಗೂ ತಿಪ್ಪಣ್ಣ ಅವರ ಸಮ್ಮುಖದಲ್ಲಿ ಮುಂದಿನ ತನಿಖೆ ನಡೆಸಲಾಯಿತು.



________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
