ಮುಖ್ಯ ಸುದ್ದಿ
Hatric Hero: ಚಿತ್ರದುರ್ಗದಿಂದ ಶಿವಣ್ಣನ ರಣಗಲ್ ಯಾತ್ರೆ | ಮುಂದಿನ ಸಿನಿಮಾ ಸುಳಿವು ನೀಡಿದ ಹ್ಯಾಟ್ರಿಕ್ ಹೀರೋ


CHITRADURGA NEWS | 23 NOVEMBER 2024
ಚಿತ್ರದುರ್ಗ: ಹ್ಯಾಟ್ರಿಕ್ ಹೀರೋ (Hatric Hero)ಡಾ.ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಈ ಯಶಸ್ಸಿನ ಹಿನ್ನೆಲೆಯಲ್ಲಿ ನಾಯಕ ಶಿವಣ್ಣ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಅದನ್ನು ಚಿತ್ರದುರ್ಗದಿಂದ ಆರಂಭಿಸಿರುವುದು ವಿಶೇಷವಾಗಿದೆ.
ಇಂದು (ನ.23) ಚಿತ್ರದುರ್ಗದ ಪ್ರಸನ್ನ ಚಿತ್ರಮಂದಿರಕ್ಕೆ ಆಗಮಿಸಿದ್ದ ನಟ ಶಿವಣ್ಣ ಅಭಿಮಾನಿಗಳನ್ನು ಕಂಡು ಖುಷಿಯಾದರು. ಇತ್ತ ಶಿವಣ್ಣನನ್ನು ಕಂಡ ತಕ್ಷಣ ನೆರೆದಿದ್ದ ಸಾವಿರಾರು ಅಭಿಮಾನಿಗಳು, ಶಿಳ್ಳೆ, ಕೇಕೆ, ಚಪ್ಪಾಳೆ ಹಾಕಿ ಸಂಭ್ರಮಿಸಿದರು.

ಇದನ್ನೂ ಓದಿ: ಮಾನವ ಸರಪಳಿ ರಚನೆ | ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ | ನ.26 ರಂದು ಪ್ರಶಸ್ತಿ ಪ್ರದಾನ
ಚಿತ್ರಮಂದಿರದ ಎದುರು ಬೃಹತ್ ಹಾರ ಹಾಕಿದ ಅಭಿಮಾನಿಗಳು, ಶಿವಣ್ಣನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.
ಈಸೂರು ದಂಗೆ ಸಿನಿಮಾ ಮಾಡ್ತಿವಿ:
ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ನಟ ಶಿವಣ್ಣ, ಈಸೂರು ದಂಗೆ ಕುರಿತು ಸಿನಿಮಾ ಮಾಡಬೇಕು. ಈ ಕಥೆ ಚೆನ್ನಾಗಿದೆ ಎಂದು ಹೇಳಿದರು.
ಈಸೂರು ದಂಗೆ ಸಿನಿಮಾ ಖಂಡಿತ ಮಾಡೇ ಮಾಡ್ತಿವಿ. ಕಥೆ ತುಂಬಾ ಸೂಕ್ಷ್ಮ ಆಗಿರುವುದರಿಂದ ಸಾಕಷ್ಟು ಎಚ್ಚರಿಕೆ ವಹಿಸಿ ಸಿನಿಮಾ ಮಾಡಬೇಕು ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಚಿತ್ರದುರ್ಗ CYBER ಪೊಲೀಸರ ಕಾರ್ಯಾಚರಣೆ | ಅಂತಾರಾಜ್ಯ ಗಾಂಜಾ ಪೆಡ್ಲರ್ ಬಂಧನ
ಮುಂದೆ 45 ಸಿನಿಮಾ ಬರುತ್ತಿದೆ. ಅದರಲ್ಲಿ ನಾನು, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದೇವೆ. ಈ ಚಿತ್ರದನ್ನು ಶಿವಣ್ಣನ ಪಾತ್ರ ಭಿನ್ನವಾಗಿದೆ. ಇದು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಲಿದೆ.
ಆನಂತರ ನಮ್ಮದೇ ಬ್ಯಾನರ್‍ನಲ್ಲಿ ಎ ಫಾರ್ ಆನಂದ ಸಿನಿಮಾ ಮೂಡಿ ಬರಲಿದೆ. ಇದು ನನ್ನ ಹಾಗೂ ಮಕ್ಕಳ ನಡುವೆ ನಡೆಯುವ ಸಂಭಾಷಣೆಯ ವಿಭಿನ್ನ ಶೈಲಿಯ ಚಿತ್ರ. ಹೊಸತನವಿದೆ ಎಂದು ವಿವರಿಸಿದರು.
ಭೈರತಿ ರಣಗಲ್ ಯಶಸ್ವಿಯಾಗಿ ನಡೆಯುತ್ತಿದೆ. ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವ ಅಪವಾದ ಇತ್ತು. ಆದರೆ, ಜನ ಬರುತ್ತಿದ್ದಾರೆ.
ಕ್ಲಿಕ್ ಮಾಡಿ ಓದಿ: ವಿವಿ ಸಾಗರಕ್ಕೆ ಹೆಚ್ಚಾದ ಒಳಹರಿವು | ಕೋಡಿ ಬೀಳಲು ಇನ್ನೆಷ್ಟು ಬಾಕಿ
ಅಮೇರಿಕಾದಲ್ಲೂ ಎರಡನೇ ವಾರ ಚಿತ್ರ ನಡೆಯುತ್ತಿದೆ. ದುಬೈನಲ್ಲೂ ರಿಲೀಸ್ ಆಗಿದೆ. ಮುಂದಿನ ವಾರ ತೆಲುಗು, ತಮಿಳು ಸೇರಿದಂತೆ ಎಲ್ಲ ಕಡೆಗಳಲ್ಲಿ ಚಿತ್ರ ಬರಲಿದೆ ಎಂದರು.
ಮಫ್ತಿ-2 ತೆರೆಗೆ ಬರುವ ನಿರೀಕ್ಷೆ ಇದೆ. ಭೈರತಿ ರಣಗಲ್ ಮೊದಲು ಬಂದು ಮಫ್ತಿಯಲ್ಲಿ, ಮಫ್ತಿಯಲ್ಲಿ ಮುಗಿಯಲಿದೆ. ಭೈರತಿ ರಣಗಲ್ ಹಾಗೂ ಮಫ್ತಿ ಸರಣಿ ಕಥೆಗಳು ಎಂದು ಹೇಳಿದರು.
ಅಪ್ಪು ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಣ್ಣ, ಅಪ್ಪು ನನ್ನೊಳಗೆ ಇದ್ದಾನೆ. ಅಪ್ಪುನ ಅಭಿಮಾನಿಗಳಲ್ಲಿ, ಸಿನಿಮಾ ಇಂಡಸ್ಟ್ರಿಯಲ್ಲಿ ಕಾಣುತ್ತಿದ್ದೇನೆ. ಅವರು ಹೋದ ತಕ್ಷಣ ಮುಗಿದಿಲ್ಲ. ಅಲ್ಲಿಂದ ಪ್ರಾರಂಭವಾಗಿದೆ.
ಇದನ್ನೂ ಓದಿ: ರಾಗಿ ಖರೀಧಿಗೆ 4290 ಬೆಲೆ ನಿಗಧಿ | ಡಿಸೆಂಬರ್ 1 ನೊಂದಣಿ ಆರಂಭ
ಅಪ್ಪು ಮತ್ತು ಅಪ್ಪಾಜಿ ಕಣ್ಣುಗಳು ಎಲ್ಲರನ್ನೂ ನೋಡುತ್ತಿವೆ. ನಾನು ಇಡೀ ಅಂಗವನ್ನೇ ದಾನ ಮಾಡಿದ್ದೇನೆ ಎಂದು ಹೇಳಿದರು.
ಈ ವರ್ಷ ಕನ್ನಡದಲ್ಲಿ ಉತ್ತಮ ಚಿತ್ರಗಳು ತೆರೆಗೆ ಬಂದಿವೆ. ಭೀಮ, ಭಗೀರ, ಭೈರತಿ ರಣಗಲ್, ಕೃಷ್ಣಂ ಪ್ರಣಯ ಸಖಿ ರೀತಿಯ ಒಳ್ಳೆಯ ಕಥೆಗಳು ಬಂದಿವೆ. ಹೀಗಾಗಿ ಚಿತ್ರಮಂದಿರಕ್ಕೆ ಜನ ಬರುತ್ತಿದ್ದಾರೆ.
ಚಿತ್ರ ಯಶಸ್ವಿಯಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಿಂದ ಪ್ರವಾಸ ಆರಂಭಿಸಿದ್ದೇವೆ. ನಾಳೆ ದಾವಣಗೆರೆ, ಶಿರಸಿ, ಶಿವಮೊಗ್ಗ, ರಾಣೆಬೆನ್ನೂರು ಹಾಗೂ ಹುಬ್ಬಳ್ಳಿಗೆ ಪ್ರವಾಸ ಮಾಡಿ ಅಭಿಮಾನಿಗಳನ್ನು ಮಾತನಾಡಿಸಲಿದ್ದೇವೆ ಎಂದರು.
ಇದನ್ನೂ ಓದಿ: ಚಿತ್ರದುರ್ಗ CYBER ಪೊಲೀಸರ ಕಾರ್ಯಾಚರಣೆ | ಅಂತಾರಾಜ್ಯ ಗಾಂಜಾ ಪೆಡ್ಲರ್ ಬಂಧನ
ಈ ವೇಳೆ ಪತ್ನಿ ಗೀತಾ ಶಿವರಾಜ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಚಿತ್ರಮಂದಿರದ ಮಾಲಿಕ ಮಲ್ಲಿಕಾರ್ಜುನ್, ಟಿಪ್ಪು ಖಾಸೀಂ ಅಲಿ, ಗೋಪಾಲಸ್ವಾಮಿ ನಾಯಕ ಮತ್ತಿತರರಿದ್ದರು.
