
CHITRADURGA NEWS | 3 FEBRUARY 2026
ಚಳ್ಳಕೆರೆ: ಪ್ರತಿಷ್ಠಿತ ಸುಕೋ ಬ್ಯಾಂಕ್ ನಿರ್ದೇಶಕರಾಗಿ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆಯ ಉದ್ಯಮಿ ಹಾಗೂ ಬಿಜೆಪಿ ಮುಖಂಡ ಬಾಳೆಕಾಯಿ ರಾಮದಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ಶಾಖೆ ಸೇರಿದಂತೆ ರಾಜ್ಯಾದ್ಯಂತ ಶಾಖೆ ಹೊಂದಿರುವ ಸುಕೋ ಸೌಹಾರ್ಧ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಪ್ರಾತಿನಿಧ್ಯ ದೊರೆತಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | 2 ಫೆಬ್ರವರಿ | ಚನ್ನಗಿರಿ, ಭೀಮಸಮುದ್ರ ಸೇರಿ ರಾಜ್ಯದ ಅಡಿಕೆ ಮಾರುಕಟ್ಟೆ ರೇಟ್ಸ್
ಸುಕೋ ಬ್ಯಾಂಕ್ ಅಧ್ಯಕ್ಷರಾಗಿ ಸತತ ಮೂರನೇ ಅವಧಿಗೆ ಮೋಹಿತ್ ಮಸ್ಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸುಕೋ ಬ್ಯಾಂಕಿನಲ್ಲೇ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಮೋಹಿತ್ ಮಸ್ಕಿ ಗ್ರಾಹಕರ ವಿಶ್ವಾಸದಿಂದ ಬ್ಯಾಂಕನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ದೊಡ್ಡಪೇಟೆಯಲ್ಲಿ ಹಿಂದೂ ಸಂಗಮ | ಚಿಂತಕ ವಿಕಾಸ್ ಪುತ್ತೂರು ಭಾಗೀ | ಶೋಭಾಯಾತ್ರೆಗೆ ಮೆರಗು ತಂದ ಪುಟಾಣಿಗಳು
ಆರ್‌ಬಿಐ ನಿಯಮಾನುಸಾರ ಎಟಿಎಂ, ಮೊಬೈಲ್ ಬ್ಯಾಂಕಿಂಗ್, ಯುಪಿಐ ಸೇರಿದಂತೆ ಹಲವು ಸುಧಾರಣೆಗಳನ್ನು ತಂದಿದ್ದಾರೆ.
ಈಗ ಈ ತಂಡದ ಜೊತೆಗೆ ಚಿತ್ರದುರ್ಗ ಜಿಲ್ಲೆಯಿಂದ ಬಾಳೆಕಾಯಿ ರಾಮದಾಸ್ ಜೊತೆಯಾಗಿದ್ದಾರೆ. ಸಂಘ ಪರಿವಾರದ ಹಿರಿಯರಾಗಿರುವ ರಾಮದಾಸ್ ಅವರು ಆರೆಸ್ಸೆಸ್ಸ್, ವಿಎಚ್‌ಪಿ ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದವರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 02 | ಮೆಕ್ಕೆಜೋಳ ರೇಟ್ ಎಷ್ಟಿದೆ?
ಇವರೊಟ್ಟಿಗೆ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಕೃಷಿ ಸಲಕರಣೆಗಳ ವ್ಯಾಪಾರಿ ಮುರಳೀಧರ ರೆಡ್ಡಿ, ಚಾರ್ಟೆಡ್ ಅಕೌಂಟೆಂಟ್ ಎಸ್.ವೆಂಕಟಕೃಷ್ಣನ್, ಕೃಷಿ ಹಾಗೂ ಡ್ರೋಣ್ ಪರಿಣಿತ ಜಿ.ಮಹೇಂದ್ರ ಚೌದರಿ, ಜೈನ ಸಮುದಾಯದ ಮುಖಂಡರಾದ ಪದಮ್ ಚಂದ್ ಮೆಹ್ತಾ, ನಿವೃತ್ತ ಐಎಎಸ್ ಅಧಿಕಾರಿ ಜಿ.ಎನ್.ಶಿವಮೂರ್ತಿ, ಸಹಕಾರಿ ಧುರೀಣರು ಕಲಬುರಗಿ ವಿವಿ ಸೆನೆಟ್ ಸದಸ್ಯರಾಗಿರುವ ಪಿ.ಎಂ.ದಯಾವತಿ, ಫೈನಾನ್ಶಿಯಲ್ ಸರ್ವೀಸ್‌ನ ಪದ್ಮಪ್ರಸಾದ್, ಟ್ರೇಡರ್ ಚನ್ನಬಸಮ್ಮ, ಸಿಎ ಕೆ.ರಾಜಶೇಖರ್ ಮತ್ತು ಆರ್‌ಬಿಐನ ನಿವೃತ್ತ ಅಧಿಕಾರಿ ವಾಸಂತಿ ಸಾಗರ್ ಅಧಿಕಾರ ಸ್ವೀಕರಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
