CHITRADURGA NEWS | 02 FEBRUARY 2026
ಚಿತ್ರದುರ್ಗ: ಭಾರತದಲ್ಲಿ ರಾಷ್ಟ್ರದ ಪರಿಕಲ್ಪನೆಗೆ ಪ್ರಾಚೀನ ಇತಿಹಾಸವಿದೆ. ಭೂಮಿಯನ್ನು ತಾಯಿಯ ಸ್ವರೂಪದಲ್ಲಿ ಕಂಡವರು ನಾವು. ಹೀಗಾಗಿಯೇ ಈ ದೇಶವನ್ನು ಭಾರತ ಮಾತೆ ಎನ್ನುತ್ತೇವೆ ಎಂದು ಚಿಂತಕ ವಿಕಾಸ್ ಪುತ್ತೂರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: BJP ಜಿಲ್ಲಾ ಕಾರ್ಯದರ್ಶಿ ರೇಖಾಗೆ ಮಹಿಳಾ ರತ್ನ ಪ್ರಶಸ್ತಿ
ನಗರದ ದೊಡ್ಡಪೇಟೆಯ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಜನರಿಗೆ ಒಳಿತು-ಕೆಡುಕು, ಧರ್ಮ-ಅಧರ್ಮದ ಅರಿವಿದೆ. ಸಮಾಜದ ಒಳಿತಿಗೆ ಬದುಕಿದ, ಅನ್ಯಾಯವನ್ನು ಮಟ್ಟ ಹಾಕಿದ ಶ್ರೀರಾಮ, ಶ್ರೀಕೃಷ್ಣ ನಮಗೆ ಆದರ್ಶ ಎಂದರು.
ಜನರಲ್ಲಿ ರಕ್ತಗತವಾಗಿದ್ದ ಇಂತಹ ಹಿಂದೂ ಮೌಲ್ಯಗಳನ್ನು ಮರೆತಿದ್ದರಿಂದಲೇ ಭಾರತ ಸಾವಿರ ವರ್ಷ ಆಕ್ರಮಣ, ಗುಲಾಮಗಿರಿ ಅನುಭವಿಸಬೇಕಾಯಿತು. ಆದ್ದರಿಂದ ಮತ, ಪಂಥ, ಭಾಷೆ, ಪ್ರಾಂತ್ಯಗಳ ಹೆಸರಿನಲ್ಲಿ ಹಂಚಿಹೋಗದೆ, ಹಿಂದೂ ಎಂಬ ಏಕಭಾವದಲ್ಲಿ ಸಂಘಟಿತರಾಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 02 | ಮೆಕ್ಕೆಜೋಳ ರೇಟ್ ಎಷ್ಟಿದೆ?
ನಿರಂತರ ಪರಿಶ್ರಮದಿಂದಾಗಿ ಗರ್ವದಿಂದ ಹಿಂದೂ ಎಂದು ಹೇಳಿಕೊಳ್ಳುವ ಕಾಲ ಬಂದಿದೆ. 1925ರಲ್ಲಿ ಸ್ಥಾಪನೆಯಾದ ಆರೆಸ್ಸೆಸ್, ರಾಷ್ಟ್ರೀಯವಾದಿ ಸಂಘಟನೆಯಾಗಿ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಾ ನೂರು ವರ್ಷ ಪೂರೈಸಿದೆ. ಇಂತಹ ಸಂದರ್ಭದಲ್ಲಿ ದೇಶ, ಧರ್ಮದ ಮುಂದಿರುವ ಸವಾಲುಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ಮತಾಂತರ, ಲವ್ ಜಿಹಾದ್, ಶ್ರದ್ಧಾಕೇಂದ್ರಗಳ ಮೇಲಿನ ದಾಳಿಯನ್ನು ಜಾಗೃತ ಸಮಾಜ ಸಂಘಟಿತವಾಗಿ ಎದುರಿಸಬೇಕು ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸ್ವಯಂಸೇವಕ ಸ್ಥಾಪನೆಯಾಗುವ ಮುನ್ನ ಜನರನ್ನು ಒಂದು ಕಡೆ ಸೇರಿಸುವುದು ಕಷ್ಟವಾಗಿತ್ತು. ಅಂದಿನ ಮಹಾನ್ ನಾಯಕರೊಬ್ಬರು ತಮ್ಮನ್ನು ಕತ್ತೆ ಎಂದು ಕರೆದರೂ, ಹಿಂದೂವಾಗಿ ಗುರುತಿಸಬೇಡಿ ಎಂದಿದ್ದರು. ಕೆಲವು ಕಡೆಗಳಲ್ಲಿ ಹಿಂದೂ ಅಂದರೆ ಜಾತಿ, ಹೇಡಿ ಎಂಬ ಭಾವನೆ ಇತ್ತು. ಶವ ಹೊರುವಾಗ ಮಾತ್ರ ಹಿಂದೂಗಳು ಒಂದು ಕಡೆ ಸೇರುವ ಪರಿಸ್ಥಿತಿ ಇತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ ಎಂದರು.
ಪ್ರತಿಯೊಬ್ಬ ವ್ಯಕ್ತಿಯೂ ತಾನು ಹಿಂದೂ ಎಂಬ ಆತ್ಮವಿಶ್ವಾಸವನ್ನು ಗೌರವದಿಂದ ಪ್ರದರ್ಶಿಸಬೇಕಾಗಿದೆ ಹಲವಾರು ವರ್ಷ ಗಳಿಂದ ಹಿಂದೂ ಸಮಾಜದ ಮೇಲೆ ಆಕ್ರಮಣ ಮಾಡುವಂತಹ ಕೃತ್ಯಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಹಿಂದೂ ಸಮಾಜ ಇಂದು ಅತ್ಯಂತ ವಿಶಾಲವಾಗಿ ಸದೃಢವಾಗಿ ಬೆಳೆದಿದೆ. ತನ್ನ ವಿರುದ್ಧ ನಡೆಯುವ ಎಲ್ಲ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಶಕ್ತಿ ಸಾಮರ್ಥ ಹಿಂದೂ ಸಮಾಜಕ್ಕಿದೆ ಎಂದರು.
ಇದನ್ನೂ ಓದಿ: ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳ್ಳತನ | ಎರಡೇ ದಿನದಲ್ಲಿ ಆರೋಪಿ ಪತ್ತೆ ಮಾಡಿದ ಹೊಸದುರ್ಗ ಪೊಲೀಸರು
ಸಾನಿಧ್ಯ ವಹಿಸಿದ್ದ ಹಿರಿಯೂರಿನ ಆಲೂರಿನ ಆನಂದಾಶ್ರಮದ ಶ್ರೀ ಶಂಕರಾನಂದ ಸ್ವಾಮಿಗಳು ಮಾತನಾಡಿ, ಯಾವುದೇ ಸಂದರ್ಭದಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಸಮಾಜದ ಸಂಘಟನೆಗಾಗಿ ಸದೃಢರಾಗಬೇಕು ಎಂದರು.
ಹಿಂದೂ ಧರ್ಮ ಸಮಾನತೆಯನ್ನು ಸಾರುವ ಧರ್ಮವಾಗಿದೆ. ಸಂಸ್ಕೃತಿ, ಸಂಸ್ಕಾರ, ಸಂವೇದನೆ, ಭ್ರಾತೃತ್ವ, ಗೌರವ, ಗೋಪೂಜೆ ಮುಂತಾದ ಧರ್ಮ ಪ್ರೇರಣೆಯಾಗುವ ಕಾರ್ಯಕ್ರಮಗಳು ಮಾತ್ರ ನಮ್ಮಲ್ಲಿ ನಡೆಯುತ್ತಿವೆ. ನೂರಾರು ವರ್ಷಗಳಿಂದ ನಾವೆಲ್ಲರೂ ಸಹೋದರ ಭಾವನೆಯಿಂದ ಎಲ್ಲರೊಂದಿಗೆ ಸೇರಿ ನಮ್ಮ ಬದುಕನ್ನು ಕಟ್ಟಿಕೊಂಡಿದ್ದೇವೆ.
ಕಷ್ಟ-ಸುಖಗಳನ್ನು ಸಮಾನತೆಯಿಂದ ಕಾಣುತ್ತಿವೆ. ಎಲ್ಲರಲ್ಲೂ ಗೌರವ, ವಿಶ್ವಾಸ ಹುಟ್ಟುಹಾಕುವ ಹಿಂದೂ ಧರ್ಮದ ಬಗ್ಗೆ ನಮ್ಮೆಲ್ಲರಲ್ಲೂ ಗೌರವ ಭಾವನೆಇದೆ. ಈ ಭಾವನೆಗಳಿಗೆ ಚ್ಯುತಿಯಾಗದಂತೆ ಜಾಗ್ರತೆ ವಹಿಸಬೇಕಿದೆ ಎಂದರು.
ಇದನ್ನೂ ಓದಿ: ವಿಕಸಿತ ಭಾರತದ ಅಡಿಪಾಯ ಬಜೆಟ್ | ಹನುಮಂತೇಗೌಡ
ಕಾರ್ಯಕ್ರಮಕ್ಕೂ ಮುನ್ನಾ ನಗರದ ಏಕನಾಥೇಶ್ವರಿ ಪಾದಗುಡಿಯಿಂದ ಶೋಭಾಯತ್ರೆ ನಡೆಯಿತು. ಜಾನಪದ ಕಲಾತಂಡಗಳೊಂದಿಗೆ ಭಜನಾ ತಂಡ, ಟ್ಯಾಷ್ಯೊ, ಭಾರತಾಂಭೆಯ ಭಾವಚಿತ್ರ, ಗೋವಿನ ಪ್ರತಿಮೆ, ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣಗಳನ್ನು ತೊಟ್ಟ ಮಕ್ಕಳು ಶೋಭಾಯಾತ್ರೆಯ ಮೆರಗು ಹೆಚ್ಚಿಸಿದ್ದರು.
ಕಾರ್ಯಕ್ರಮದಲ್ಲಿ ಹಿಂದೂ ಸಂಗಮ ಆಯೋಜನ ಸಮಿತಿಯ ಅಧ್ಯಕ್ಷ ನವೀನ್ ಚಾಲುಕ್ಯ, ಮಂಜುನಾಥ್, ಸುನೀತಾ ಮುರಳಿ, ಜಿತೇಂದ್ರ ಹುಲಿಕುಂಟೆ, ಓಂಕಾರ್, ಮೋಹನ್ ಕುಮಾರ್ ಜಿ.ಎಚ್, ಪಟಾಕಿ ಸತೀಶ್, ಚಲವಾದಿ ತಿಪ್ಪೇಸ್ವಾಮಿ, ದರ್ಶನ್, ಲಿಂಗರಾಜು, ಜಯಶೇಖರ್, ವಿಜಯ್, ನಾಗರಾಜ್ ಬೇದ್ರೇ ,ವಾಸವಿ ಶಾಲೆಯ ಸತ್ಯನಾರಾಯಣ ಶೆಟ್ಟಿ ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
