CHITRADURGA NEWS | 06 OCTOBER 2026
ಚಿತ್ರದುರ್ಗ: 2026-27ನೇ ಸಾಲಿನ ಅಕ್ಟೋಬರ್ 21ರ ವಿಜಯದಶಮಿಯಂದು ನಾಗಪುರದ ದೀಕ್ಷಾಭೂಮಿಯಲ್ಲಿ ನಡೆಯಲಿರುವ ‘ಧಮ್ಮ ಪ್ರವರ್ತನ ದಿನ’ ಕಾರ್ಯಕ್ರಮಕ್ಕೆ ತೆರಳಲು ಬಯಸುವ ಅರ್ಹ ಯಾತ್ರಾರ್ಥಿಗಳಿಂದ ಸಮಾಜ ಕಲ್ಯಾಣ ಇಲಾಖೆಯು ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅಕ್ಟೋಬರ್ 09 ಅರ್ಜಿ ಸಲ್ಲಿಸಲು ಕೊನೆಯ ದಿನ.
ಇದನ್ನೂ ಓದಿ: ಮಲ್ಟಿಫ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳ ಹವಾ | ನಟ ಶಿವರಾಜ್‌ಕುಮಾರ್
ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 22 ರವರೆಗೆ ಜಿಲ್ಲೆಗಳಿಂದ ನಾಗಪುರಕ್ಕೆ ಪ್ರಯಾಣಿಸಲು ಮತ್ತು ಹಿಂತಿರುಗಲು ಬಸ್ ಹಾಗೂ ರೈಲು ವ್ಯವಸ್ಥೆಯನ್ನು ಇಲಾಖೆಯಿಂದ ಕಲ್ಪಿಸಲಾಗುತ್ತದೆ. ಆಸಕ್ತರು ಇಲಾಖೆಯ ವೆಬ್‍ಸೈಟ್ https://swd.karnataka.gov.in/ ಮೂಲಕ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 09 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಯಾತ್ರಾರ್ಥಿಗಳು ಬಿ.ಪಿ.ಎಲ್ ಕಾರ್ಡ್ ಹೊಂದಿರಬೇಕು ಹಾಗೂ ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಎಸ್.ಸಿ/ಎಸ್.ಟಿ ಸಮುದಾಯದವರು ಹಾಗೂ ಇತರೆ ಸಮುದಾಯದ ಜನರು ಬಾಬಆ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳು ಸಹ ಯಾತ್ರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಸಮಾಜ ಸೇವೆಯ ಅನುಭವ ಹೊಂದಿರಬೇಕಾಗುತ್ತದೆ. ರಾಜ್ಯದ ಆಯಾ ಜಿಲ್ಲೆಗಳಿಂದ ನಾಗಪುರಕ್ಕೆ ಹೋಗಿ ಬರಲು ತಗಲುವ ಸಾರಿಗೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
ಇದನ್ನೂ ಓದಿ: 60ನೇ ದಿನಕ್ಕೆ ಕಾಲಿಟ್ಟ ಭೀಮಸಮುದ್ರದ ಗಣಿ ಮುಷ್ಕರ
ಈಗಾಗಲೇ ದೀಕ್ಷಾಭೂಮಿಗೆ ಪ್ರಯಾಣಿಸಿದವರು ಹಾಗೂ ಸರ್ಕಾರಿ ಅಥವಾ ಸರ್ಕಾರದ ಅಂಗಸಂಸ್ಥೆಗಳ ನೌಕರರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಯಾತ್ರಾರ್ಥಿಗಳ ವಸತಿ ಮತ್ತು ಭೋಜನದ ವೆಚ್ಚವನ್ನು ಕಡ್ಡಾಯವಾಗಿ ಯಾತ್ರಾರ್ಥಿಗಳೇ ಭರಿಸಬೇಕು ಎಂದು ಹೊಳಲ್ಕೆರೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

