
CHITRADURGA NEWS | 09 AUGUST 2025
ಚಿತ್ರದುರ್ಗ: ನಗರದ ಪಾಶ್ರ್ವನಾಥ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ಶಾಲೆಯ ಮಕ್ಕಳೊಂದಿಗೆ ರಕ್ಷಾ ಬಂಧನವನ್ನು ಆಚರಿಸಲಾಯಿತು.
ಇದನ್ನೂ ಓದಿ: ರಾಶಿ ಅಡಿಕೆ ರೇಟ್ ಭರ್ಜರಿ ಏರಿಕೆ | ಬೆಳೆಗಾರ ಖುಷ್

ಶಾಲೆಯಲ್ಲಿನ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳನ್ನು ಕೂರಿಸಿ, ಹೆಣ್ಣು ಮಕ್ಕಳಿಂದ ಗಂಡು ಮಕ್ಕಳ ರಾಖಿ ಕಟ್ಟಿಸುವುದರ ಮೂಲಕ ರಕ್ಷಾ ಬಂಧನ ಅಚರಣೆ ಮಾಡಲಾಯಿತು.
ಪಾಶ್ರ್ವನಾಥ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಾಬುಲಾಲ್ ಮಾತನಾಡಿ, ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಹಬ್ಬ-ಹರಿ ದಿನಗಳಿಂದ ಕೂಡಿದ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವ ಇದೆ. ಶ್ರಾವಣ, ಪೂಜಾ-ಪಾಠಗಳು, ಧ್ಯಾನ-ಧಾರಣೆಗಳು, ಚಿಂತನೆಗಳ ಮಾಸವೇ ಶ್ರಾವಣ.
ನಾಗಚೌತಿ, ನಾಗಪಂಚಮಿ, ಶ್ರಾವಣ ಸೋಮವಾರ, ಶ್ರಾವಣ ಶುಕ್ರವಾರ, ಗೋಕುಲಾಷ್ಟಮಿ, ನೂಲಹುಣ್ಣಿಮೆ, ಹೀಗೆ ಪ್ರತಿದಿನವು ಹಬ್ಬ. ಈ ಎಲ್ಲ ಹಬ್ಬಗಳಲ್ಲಿ ನೂಲಹುಣ್ಣಿಮೆ ಅಥವಾ ರಕ್ಷಾಬಂಧನ ಒಂದು ಪ್ರಮುಖ ಹಬ್ಬವಾಗಿದೆ.
ರಾಖಿ ಕಟ್ಟುವ ಮೂಲಕ ಸೋದರ-ಸೋದರಿಯ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಈ ಮಧುರ ಸಂಬಂಧ ಉಸಿರು ಇರುವವರೆಗೂ ಇರುತ್ತದೆ. ಕಟ್ಟಿರುವ ದಾರ ಹೋದರೂ ಹೃದಯದಲ್ಲಿ ಇರುವ ಸ್ನೇಹ ದೃಢವಾಗಿರುತ್ತದೆ ಎಂದರು.
ಇದನ್ನೂ ಓದಿ: KSRTC ಬಸ್ – ಲಾರಿ ನಡುವೆ ಡಿಕ್ಕಿ | 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಸಂಸ್ಥೆಯ ಉಪಾಧ್ಯಕ್ಷ ಮುಕೇಶ್ ಕುಮಾರ್, ಸಲಹಾ ಸದಸ್ಯ ಸುರೇಶ್ ಮುತ್ತಾ, ಕಾರ್ಯದರ್ಶಿ ಸುರೇಶ್ ಕುಮಾರ್, ಸಹ ಕಾರ್ಯದರ್ಶಿ ಸುರೇಶ್ ಪಾಟೀಯತ್, ಖಜಾಂಚಿ ರಾಜೇಂದ್ರ ಜೈನ್, ಸದಸ್ಯರಾದ ವಿಪುಲ್, ಆಶೀಕ್ ಕುಮಾರ್, ವಿಕ್ರಂತ್ ಬಾಬುಲಾಲ್, ಜೆವೇರಿಲಾಲ್, ಮುಖ್ಯ ಶಿಕ್ಷಕಿಯಾದ ನಾಜಿಮ ಸ್ವಾಲೆಹಾ ಸೇರಿದಂತೆ ಶಾಲಾ ಭೋದಕ, ಬೋದಕೇತರ ಸಿಬ್ಬಂದಿ ಇದ್ದರು.
ಈ ವೇಳೆ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
