ಮುಖ್ಯ ಸುದ್ದಿ
Raj Bhavan Chalo; ಶೋಷಿತ ಸಮುದಾಯಗಳ ಒಕ್ಕೂಟದಿಂದ ಆಗಸ್ಟ್ 27 ರಂದು ರಾಜಭವನ ಚಲೋ

CHITRADURGA NEWS | 25 AUGUSRT 2024
ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ವಿನಾಕಾರಣ ಕಿರುಕುಳ ನೀಡುತ್ತಿರುವ ಬಿಜೆಪಿ, ಜೆಡಿಎಸ್ ಪಕ್ಷಗಳ ವಿರುದ್ಧ ಆ. 27 ರಂದು ರಾಜಭವನ ಚಲೋ(Raj Bhavan Chalo) ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ ತಿಳಿಸಿದರು.
ಕ್ಲಿಕ್ ಮಾಡಿ ಓದಿ: Murugha Mutt: ಶರಣ ಸಂಸ್ಕøತಿ ಉತ್ಸವ ಸಮಿತಿ | ಗೌರವಾಧ್ಯಕ್ಷರಾಗಿ ಶ್ರೀ ರುದ್ರೇಶ್ವರ ಸ್ವಾಮೀಜಿ | ಅಧ್ಯಕ್ಷರಾಗಿ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ)

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ರಾಜ್ಯದಲ್ಲಿನ ಮತದಾರರು ಬಿಜೆಪಿ ಸರ್ಕಾರವನ್ನು ತಿರಸ್ಕಾರ ಮಾಡಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲು ನೆರವಾದರು. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬಂದು ಚುನಾವಣೆ ಮುನ್ನಾ ಮತದಾರರಿಗೆ ನೀಡಿದ ಆಶ್ವಾಸನೆಯಂತೆ ಐದು ಗ್ಯಾರೆಂಟಿಗಳನ್ನು ಸ್ವಲ್ಪ ದಿನಗಳಲ್ಲಿಯೇ ನೀಡಿತ್ತು.
ಇದರಿಂದ ಸಿದ್ದರಾಮಯ್ಯ ರವರು ಜನಪ್ರಿಯತೆಯನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅವರ ಮೇಲೆ ಇಲ್ಲದ ಸಲ್ಲದೆ ಆರೋಪವನ್ನು ಹೊರೆಸಿ ಅವರ ಜನಪ್ರಿಯತೆಯನ್ನು ಕುಗ್ಗಿಸುವ ಕಾರ್ಯವನ್ನು ಮಾಡಿದ್ದಾರೆ.
ಇದಕ್ಕೆ ಬಗ್ಗದ ಸಿದ್ದರಾಮಯ್ಯರವರ ವಿರುದ್ದ ಎಂದೋ ನಡೆದ ಮುಡಾ ಹಗರಣವನ್ನು ಬಯಲಿಗೆ ತಂದು ಅವರನ್ನು ತೋಜೋವಧೆ ಮಾಡುವ ಕಾರ್ಯವನ್ನು ಮಾಡಿದರು.
ಇದರು ಸಫಲವಾಗದಿದ್ದಾಗ ಕೇಂದ್ರದಿಂದ ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ರವರಿಗೆ ನೋಟಿಸ್ ನೀಡುವ ಕಾರ್ಯವನ್ನು ಮಾಡಿ ಅವರನ್ನು ಕಾನೂನಿನಲ್ಲಿ ಸಿಕ್ಕಿ ಹಾಕಿಸುವ ಕಾರ್ಯವನ್ನು ಮಾಡಿದ್ದಾರೆ ಇದು ಖಂಡನೀಯವಾದದು ಎಂದರು.
ಕ್ಲಿಕ್ ಮಾಡಿ ಓದಿ: Donation: ಶರಣ ಸಂಸ್ಕøತಿ ಉತ್ಸವಕ್ಕೆ ಯಾರು ಎಷ್ಟು ವಾಗ್ದಾನ ಮಾಡಿದ್ರು..?
ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾಜ್ಯಪಾಲರ ವಿರುದ್ದ ಪ್ರತಿಭಟನೆಯನ್ನು ನಡೆಸಿ ರಾಷ್ಟ್ರಪತಿಗಳಿಗೆ ಈ ರಾಜ್ಯಪಾಲರನ್ನು ವಾಪಾಸ್ಸು ಕರೆಯಿಸಿಕೊಳ್ಳಿ ಎಂದು ಮನವಿ ಮಾಡಲಾಯಿತು.
ಸಿದ್ದರಾಮಯ್ಯ ರವರ ಪರವಾಗಿ ರಾಜ್ಯ ಹಿಂದುಳಿದ, ಅಲ್ಪ ಸಂಖ್ಯಾತ, ಪರಿಶಿಷ್ಟ ಜಾತಿ ಪಂಗಡ ಸೇರಿದಂತೆ ಇತರರು ಸಹಾ ಬೆಂಬಲವಾಗಿದ್ದಾರೆ. ಸಿದ್ದರಾಮಯ್ಯ ಹೆದರುವ ಅವಶ್ಯಕತೆ ಇಲ್ಲ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕಳೆದ ಬಾರಿ ಉತ್ತಮವಾದ ಆಡಳಿತವನ್ನು ನೀಡಿದ್ದರು ಈಗಲೂ ಸಹಾ ಅದೇ ರೀತಿಯಾದ ಆಡಳಿತವನ್ನು ನೀಡುತ್ತಿದ್ದಾರೆ. ಇದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅವರ ವಿರುದ್ದ ಹುನ್ನಾರ ಮಾಡುತ್ತಿವೆ ಎಂದರು.
ಪತ್ರಿಕಾ ಗೋಷ್ಟಿಯಲ್ಲಿ ದಸಂಸಯ ಮುಖಂಡ ದುರುಗೇಶ್, ನಗರಾಭೀವೃಧ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ, ನಗರಸಭೆಯ ಮಾಜಿ ಅಧ್ಯಕ್ಷರಾದ ನಿರಂಜನ ಮೂರ್ತಿ, ಹೆಚ್.ಮಂಜಪ್ಪ, ವಿಶ್ವಕರ್ಮ ಸಮಾಜದ ಪ್ರಸನ್ನ ಕುಮಾರ್, ಷಫಿವುಲ್ಲಾ, ಕೂರಚ ಸಮಾಜದ ಕೃಷ್ಣಪ್ಪ, ಬಿ.ಟಿ.ಜಗದೀಶ್, ಉಪ್ಪಾರ ಸಮಾಜದ ಮೂರ್ತಿ, ಜಾಕಿರ್ ಹುಸೇನ್, ಮಂಜುನಾಥ್, ಪ್ರಸನ್ನ ಸೇರಿದಂತೆ ಇತರರು ಇದ್ದರು.
