ಮುಖ್ಯ ಸುದ್ದಿ
ಇಳೆಗೆ ತಂಪೆರೆದ ಮಳೆರಾಯ | ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಮಳೆ

Published on
CHITRADURGA NEWS | 19 APRIL 2024
ಚಿತ್ರದುರ್ಗ: ಕಳೆದೊಂದು ವರ್ಷದಿಂದ ಸರಿಯಾದ ಮಳೆಯೇ ಆಗದೆ ಭೀಕರ ಬರಗಾಲಕ್ಕೆ ತುತ್ತಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸುವ ಮಳೆ ಅಂತೂ ಬಲಗಾಲಿಟ್ಟು ಬಂದಿದೆ.
ಭಾರತೀಯ ಹವಾಮಾನ ಇಲಾಖೆ ಏಪ್ರಿಲ್ 18 ಮತ್ತು 19 ರಂದು ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿತ್ತು. ಏ.18 ರಂದು ಮಳೆಯ ವಾತಾವರಣ ನಿರ್ಮಾಣವಾಗಿದ್ದರೂ ಮಳೆ ಸುರಿಯಲಿಲ್ಲ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಭರ್ಜರಿ ಜಿಗಿತ | ಒಂದೇ ದಿನ 1500 ರೂ. ಹೆಚ್ಚಳ
ಆದರೆ, ಏ.19 ಶುಕ್ರವಾರ ಮಧ್ಯಾಹ್ನ 3.30ರ ಹೊತ್ತಿಗೆ ಜಿಲ್ಲೆಯ ವಿವಿಧೆಡೆ ಮಳೆಯ ಆರ್ಭಟ ಶುರುವಾಗಿದೆ.
ಹೊಳಲ್ಕೆರೆ ತಾಲೂಕಿನ ತಾಳ್ಯ, ಮದ್ದೇರು ಭಾಗದಲ್ಲಿ ಭಾರೀ ಗಾಳಿ ಹಾಗೂ ಗುಡುಗಿನ ಶಬ್ದಕ್ಕೆ ರೈತರು ಬೆಚ್ಚಿ ಬಿದ್ದಿದ್ದಾರೆ.
ಚಿತ್ರದುರ್ಗ ನಗರದಲ್ಲೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ನಿಧಾನವಾಗಿ ಮಳೆ ಆರಂಭವಾಗಿದೆ. ಹೊಸದುರ್ಗ ತಾಲೂಕಿನಲ್ಲೂ ಮಳೆಯ ವಾತಾವರಣ ಮನೆ ಮಾಡಿದೆ.
Continue Reading
Related Topics:Chitradurga, heavy wind, Rain, thunder, ಗುಡುಗು, ಚಿತ್ರದುರ್ಗ, ಭಾರೀ ಗಾಳಿ, ಮಳೆ

Click to comment