ಮುಖ್ಯ ಸುದ್ದಿ
ನೇಹಾ ಕಗ್ಗೊಲೆ | ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಲುವೇಹಳ್ಳಿ ಪಾಲಯ್ಯ ಖಂಡನೆ

CHITRADURGA NEWS | 19 APRIL 2024
ಚಿತ್ರದುರ್ಗ: ಹುಬ್ಬಳ್ಳಿಯ ಬಿವಿಬಿ ಕ್ಯಾಂಪಸ್‍ನಲ್ಲಿ ನಡೆದಿರುವ ಘಟನೆ ಅತ್ಯಂತ ಕ್ರೂರ ಘಟನೆಯಾಗಿದ್ದು, ಇಡೀ ರಾಜ್ಯದ ವಿದ್ಯಾರ್ಥಿಗಳು ಬೆಚ್ಚಿಬೀಳುಂತೆ ಮಾಡಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಲುವೇಹಳ್ಳಿ ಪಾಲಯ್ಯ ಹೇಳಿದರು.
ಇದನ್ನೂ ಓದಿ: ಕುಡಿಯುವ ನೀರಿನ ಕಾಮಗಾರಿಗಳಿಗೆ ಚುಕುರು
ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಅವರು, ಇಷ್ಟು ದಿನ ಕೇರಳ, ಕರಾವಳಿ ಮತ್ತು ಮಲೆನಾಡಿನಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಕಿಚ್ಚು ಇಂದು ಉತ್ತರ ಕರ್ನಾಟಕ ವ್ಯಾಪಿಸಿದೆ. ಈ ಮೂಲಕ ಉತ್ತರ ಕರ್ನಾಟಕದ ಶಾಂತಿ, ಸುವ್ಯವಸ್ಥೆಗೆ ಜಿಹಾದ್ ಸಂಘಟನೆಗಳು ಕೊಡಲಿ ಏಟು ನೀಡಿವೆ.
ಕರ್ನಾಟಕದಲ್ಲಿ ಶಾಂತಿ ಸುವ್ಯವಸ್ಥತೆ ಬಯಸುವ ಪ್ರತಿಯೊಬ್ವರು ಘಟನೆಯನ್ನು ಖಂಡಿಸಬೇಕಾಗಿದೆ. ರಾಜ್ಯದ್ಯಂತ ಕಾಲೇಜು ಕ್ಯಾಂಪಸ್ಸುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಮತ್ತು ಅವರ ಫೋಷಕರಲ್ಲಿ ಆತಂಕ ಸೃಷ್ಟಿಸಿದೆ.
ಇದನ್ನೂ ಓದಿ: ಅನ್ಯ ಕೋಮಿನ ಯುವತಿಗೆ ಡ್ರಾಪ್ ನೀಡಿದಕ್ಕೆ ಹಲ್ಲೆ ಆರೋಪ | ದೂರು-ಪ್ರತಿ ದೂರು ದಾಖಲು | ತಡರಾತ್ರಿ ಹಿಂದೂ ಸಂಘಟನೆಗಳ ಪ್ರತಿಭಟನೆ
ಪ್ರೀತಿಸುವ ಮನಸ್ಸುಗಳಲ್ಲಿ ಇಷ್ಟೊಂದು ಕ್ರೌರ್ಯತೆ ಮೂಡಲು ಸಾಧ್ಯವಿಲ್ಲ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಆರೋಪಿಯನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು. ರಾಜ್ಯದಲ್ಲಿ ಈ ರೀತಿಯ ವಿದ್ಯಾರ್ಥಿಗಳ ವ್ಯವಸ್ಥಿತ ಜಾಲದ ಕುರಿತು ಜಾಗೃತಿ ಮೂಡಿಸಬೇಕಾಗಿದೆ.
ಕಾಂಗ್ರೆಸ್‍ನ ಓಲೈಕೆ ರಾಜಕಾರಣ, ಒಂದು ಸಮಾಜದ ಬಗ್ಗೆ ಇರುವ ಮೃದು ಧೋರಣೆ ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ರಾಜ್ಯ ಸರ್ಕಾರ ಒಲೈಕೆ ರಾಜಕಾರಣ ಬಿಟ್ಟು ಪ್ರಕರಣದ ಸರಿಯಾದ ತನಿಖೆ ನಡೆಸಬೇಕು ಎಂದರು.
